ಆರ್ ಸಿಬಿ ಕೋಚ್ ಡೋನಾಲ್ಡ್ ಮೇಲೆ ಆಸ್ಟ್ರೇಲಿಯನ್ನರ ಕಣ್ಣು

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 27: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಚ್ ಆಗಿರುವ ಅಲಾನ್ ಡೋನಾಲ್ಡ್ ಅವರ ಮೇಲೆ ಆಸ್ಟ್ರೇಲಿಯನ್ನರಿಗೆ ಕಣ್ಣು ಬಿದ್ದಿದೆ. ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಡೋನಾಲ್ಡ್ ಅವರನ್ನು ತಂಡದ ಮುಖ್ಯ ಬೌಲಿಂಗ್ ಕೋಚ್ ಆಗಿ ನೇಮಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಯೋಜಿಸಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ದಕ್ಷಿಣ ಆಫ್ರಿಕಾದ 49ವರ್ಷದ ಮಾಜಿ ವೇಗಿ ಡೋನಾಲ್ಡ್ ಅವರು 1992 ರಿಂದ 2002ರ ಅವಧಿಯಲ್ಲಿ 72 ಟೆಸ್ಟ್ ಪಂದ್ಯಗಳಿಂದ 330 ಟೆಸ್ಟ್ ವಿಕೆಟ್ ಗಳನ್ನು 22.25 ಸರಾಸರಿಯಲ್ಲಿ ಪಡೆದಿದ್ದಾರೆ. ಬೌಲಿಂಗ್ ಕೋಚ್ ಆಗಿ ಸದ್ಯಕ್ಕೆ ಐಪಿಎಲ್ ನಲ್ಲಿ ಸಮರ್ಥವಾಗಿ ನಿಭಾಯಿಸಿರುವ ಡೋನಾಲ್ಡ್ ಅವರನ್ನು ಕೋಚ್ ಆಗಿ ನೇಮಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ ಎಂದು ನ್ಯೂಸ್ ಲಿಮಿಟೆಡ್ ಮೀಡಿಯಾ ವರದಿ ಮಾಡಿದೆ.[ಆರ್ ಸಿಬಿಗೆ ಬೆಸ್ಟ್ ಬೌಲಿಂಗ್ ಕೋಚ್ ಪಡೆದ ಮಲ್ಯ]

Allan Donald set to become Australia's bowling coach: Report

ಶ್ರೀಲಂಕಾ ಪ್ರವಾಸವಲ್ಲದೆ, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ತವರು ನೆಲದಲ್ಲಿ ಆಸ್ಟ್ರೇಲಿಯಾ ಆಡಲಿದೆ. ಕ್ರೆಗ್ ಮೆಕ್ ಡೆರ್ಮಟ್ ಅವರು ಆಸೀಸ್ ಕೋಚ್ ಆಗಿ ವಿಶ್ವಕಪ್ ಹಾಗೂ ಇಂಗ್ಲೆಂಡ್ ವಿರುದ್ಧ ಆಷ್ಯಸ್ ವೈಟ್ ವಾಶ್ ಗೆಲುವಿಗೆ ಕಾರಣರಾಗಿದ್ದರು. ಭಾರತದಲ್ಲಿ ನಡೆದ ವಿಶ್ವ ಟಿ20ಯಲ್ಲಿ ಆಸ್ಟ್ರೇಲಿಯನ್ನರ ಕಳಪೆ ಪ್ರದರ್ಶನದ ನಂತರ ಹುದ್ದೆಯಿಂದ ಕೆಳಗಿಳಿದರು. [ಕೆವಿನ್ ಗೆ ದಕ್ಷಿಣ ಆಫ್ರಿಕಾ ಪರ ಬ್ಯಾಟ್ ಬೀಸುವಾಸೆ!]

ದಕ್ಷಿಣ ಆಫ್ರಿಕಾದ ಕೋಚ್ ಆಗಿ ಡೇಲ್ ಸ್ಟೈನ್, ವೆರ್ನಾನ್ ಫಿಲ್ಯಾಂಡರ್, ಮಾರ್ನ್ ಮಾರ್ಕೆಲ್ ಅವರನ್ನು ಬೆಳೆಸಿದ 'ವೈಟ್ ಲೈಂಟ್ನಿಂಗ್' ಡೋನಾಲ್ಡ್ ಗೆ ಬೇಡಿಕೆ ಇದ್ದೆ ಇದೆ. ಡರೆನ್ ಲೆಹ್ಮನ್, ಜಸ್ಟೀನ್ ಲ್ಯಾಂಗರ್, ಆಡಂ ಗ್ರಿಫಿತ್ ಅವರು ಸದ್ಯಕ್ಕೆ ಆಸ್ಟ್ರೇಲಿಯಾ ತಂಡದ ಕೋಚ್, ಮಾರ್ಗದರ್ಶಿ ಹುದ್ದೆಯಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
South Africa fast bowling great Allan Donald will join Australia as bowling coach for their tour of Sri Lanka this year, local media reported on Wednesday.
Please Wait while comments are loading...