ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿಗೆ ಫುಲ್ ಗೈಡ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 08: ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿ ಮಾರ್ಚ್ 08ರಂದು ನಾಗ್ಪುರದಲ್ಲಿ ಆರಂಭವಾಗಲಿದ್ದು, ಆರಂಭ ದಿನದಂದೇ ಎರಡು ಪಂದ್ಯಗಳು ನಡೆಯಲಿವೆ. ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಟೂರ್ನಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.

ಪಂದ್ಯಗಳು ಎಲ್ಲೆಲ್ಲಿ ನಡೆಯಲಿವೆ, ಎಷ್ಟು ತಂಡಗಳು ಭಾಗವಹಿಸಿವೆ, ಪಂದ್ಯದ ನಿಯಾಮಾವಳಿಗಳೇನು? ಟಿಕೆಟ್ ಎಲ್ಲಿ ಖರೀದಿಸಬಹುದು? ಟಿಕೆಟ್ ದರ ಎಷ್ಟಿದೆ? ಪಂದ್ಯಗಳ ಅವಧಿ ಏನು? ಈ ಹಿಂದಿನ ಚಾಂಪಿಯನ್ ಗಳು ಯಾರು ಯಾರು? ಅಂಕ ಪಟ್ಟಿ ವಿವರ ಎಲ್ಲವನ್ನು ಹೊಂದಿರುವ ಸಂಪೂರ್ಣ ಮಾರ್ಗದರ್ಶಿ ಪುಟ ಇದಾಗಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ವಿಶ್ವ ಟಿ20 ಆರಂಭ ಹಾಗೂ ಅಂತ್ಯ ಎಂದು?
* ಮಾರ್ಚ್ 08 (ಮಂಗಳವಾರ) ರಿಂದ ಏಪ್ರಿಲ್ 03 (ಭಾನುವಾರ)

ಎಷ್ಟು ತಂಡಗಳು ಭಾಗವಹಿಸಿವೆ?
* 16 ತಂಡಗಳು ಭಾಗವಹಿಸಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನ 10 ಸದಸ್ಯರು ಹಾಗೂ 6 ಸಹ ಸಂಸ್ಥೆ ಸದಸ್ಯ ತಂಡಗಳು
ಮೊದಲ ಸುತ್ತು (ಗುಂಪಿನ ವಿಜೇತ ತಂಡ ಎರಡನೇ ಸುತ್ತಿನ ಸೂಪರ್ 10 ಸೇಲಿದೆ)

ಎ ಗುಂಪು:
ಬಾಂಗ್ಲಾದೇಶ, ನೆದರ್ಲೆಂಡ್ಸ್, ಐರ್ಲೆಂಡ್ಸ್ ಹಾಗೂ ಒಮಾನ್

ಬಿ ಗುಂಪು: ಜಿಂಬಾಬ್ವೆ, ಸ್ಕಾಟ್ಲೆಂಡ್, ಹಾಂಗ್ ಕಾಂಗ್ ಹಾಗೂ ಅಫ್ಘಾನಿಸ್ತಾನ. ಎರಡನೇ ಸುತ್ತು (ಸೂಪರ್ 10) ಪ್ರತಿ ಗುಂಪಿನ ಟಾಪ್ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. [ಟಿ20ಗಾಗಿ ಟೀಂ ಇಂಡಿಯಾಕ್ಕೆ ಸಕತ್ ಟ್ರೆಂಡಿ ದಿರಿಸು]

ಗುಂಪು 1: ಶ್ರೀಲಂಕಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಹಾಗೂ ಬಿ ಗುಂಪಿನ ವಿಜೇತರು

ಗುಂಪು 2: ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಎ ಗುಂಪಿನ ವಿಜೇತರು.

ಎಲ್ಲೆಲ್ಲಿ ಪಂದ್ಯಗಳು ನಡೆಯಲಿವೆ:

ಬೆಂಗಳೂರು, ಚೆನ್ನೈ, ಧರ್ಮಶಾಲಾ, ಮೊಹಾಲಿ, ಮುಂಬೈ, ನಾಗ್ಪುರ ಹಾಗೂ ನವದೆಹಲಿಯಲ್ಲಿ ವಿಶ್ವಕಪ್ ಟೂರ್ನಿಯ ಇತರ ಪಂದ್ಯಗಳು ನಡೆಯುತ್ತವೆ. ಚೆನ್ನೈನಲ್ಲಿ ಯಾವುದೇ ಪಂದ್ಯಗಳು ನಡೆಯುವುದಿಲ್ಲ. [ಸೆಹ್ವಾಗ್ ಆಯ್ಕೆಯ 4 ನೆಚ್ಚಿನ ತಂಡಗಳು]

ಎಲ್ಲಿ ಪ್ರಸಾರವಾಗಲಿದೆ?
* ಎಲ್ಲಾ ಪಂದ್ಯಗಳು ಸ್ಟಾರ್ ಸ್ಫೋರ್ಟ್ಸ್ (ಭಾರತ) ನಲ್ಲಿ ನೇರ ಪ್ರಸಾರವಾಗಲಿದೆ.

ಪಂದ್ಯದ ಅವಧಿ
* ಮೊದಲ ಪಂದ್ಯ ಮಧ್ಯಾಹ್ನ 3 ಗಂಟೆ IST ಹಾಗೂ ಎರಡನೇ ಪಂದ್ಯ 7.30 PM IST
* ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು 7 PM IST

ಈ ಹಿಂದಿನ ಚಾಂಪಿಯನ್ಸ್
2007ರಲ್ಲಿ ಭಾರತ ಗೆದ್ದ ಬಳಿಕ 2009ರಲ್ಲಿ ಪಾಕಿಸ್ತಾನ, 2010ರಲ್ಲಿ ಇಂಗ್ಲೆಂದ್, 2012ರಲ್ಲಿ ವೆಸ್ಟ್ ಇಂಡೀಸ್ ಹಾಗೂ 2014ರಲ್ಲಿ ಶ್ರೀಲಂಕಾ ವಿಶ್ವ ಟಿ20 ಕಪ್ ಎತ್ತಿವೆ. ಯಾವ ತಂಡವೂ ಎರಡು ಬಾರಿ ಕಪ್ ಗೆ ಮುತ್ತಿಡುವ ಅವಕಾಶ ಪಡೆದುಕೊಂಡಿಲ್ಲ.
ಅಂಕಗಳ ಪದ್ಧತಿ:
* ಗೆಲುವಿಗೆ 2 ಅಂಕ;ಟೈ, ಪಂದ್ಯ ರದ್ದು: 1; ಸೋಲಿಗೆ -೦;

ಪಂದ್ಯಗಳ ನಿಯಮಗಳು
* ಸೆಮಿಫೈನಲ್ ನಲ್ಲಿ ಪಮ್ದ್ಯ ಟೈ ಆದರೆ ಸೂಪರ್ ಓವರ್ ಆಡಿಸಲಾಗುತ್ತದೆ.
* ಪಂದ್ಯ ರದ್ದು, ಟೈ ಆದರೆ, ಎರಡನೇ ಸುತ್ತಿನಲ್ಲಿ ಹೆಚ್ಚು ಅಂಕ ಗಳಿಸಿದ ತಂಡಕ್ಕೆ ಫೈನಲ್ ತಲುಪುತ್ತದೆ.

ರಿಸರ್ವ್ ಡೇ ಇದೆಯೆ?
ಫೈನಲ್ ಪಂದ್ಯದ ದಿನ ಮಳೆ ಬಂದು ಪಂದ್ಯ ರದ್ದಾಗುವ ಸಂಭವ ಇದ್ದರೆ, ರಿಸರ್ವ್ ಡೇ ಇರಿಸಲಾಗಿದೆ. ಒಂದು ವೇಳೆ ಫೈನಲ್ ಪಂದ್ಯ ನಿಗದಿಯಾಗಿರುವ ದಿನ ಹಾಗೂ ರಿಸರ್ವ್ ಡೇ ಎರಡು ದಿನ ಮಳೆಗೆ ಆಹುತಿಯಾದರೆ ಮಾತ್ರ ಟ್ರೋಫಿಯನ್ನು ಹಂಚಲಾಗುತ್ತದೆ.

ಎಷ್ಟು ಪಂದ್ಯಗಳನ್ನು ಆಡಲಾಗುತ್ತದೆ?
* ಒಟ್ಟು 58 ಪಂದ್ಯಗಳು, 35 ಪುರುಷರ ಪಂದ್ಯಗಳು ಹಾಗೂ 23 ಮಹಿಳೆಯರ ಪಂದ್ಯಗಳು ಒಟ್ಟೊಟ್ಟಿಗೆ ನಡೆಯಲಿವೆ.
ಇಪಿಎಫ್ ವಿಥ್ ಡ್ರಾ ಮೇಲಿನ ತೆರಿಗೆ ಆದೇಶ ಹಿಂದಕ್ಕೆ

ಟಿಕೆಟ್ ಖರೀದಿ ಎಲ್ಲಿ?
* ಐಸಿಸಿ ವೆಬ್ ಸೈಟ್ www.icc-cricket.com ಗೆ ಭೇಟಿ ನೀಡಿ ಟಿಕೆಟ್ ಪಡೆಯಬಹುದು.
* ಭಾರತದಲ್ಲಿ ಆನ್ ಲೈನ್ ಲಾಟರಿ ವ್ಯವಸ್ಥೆ ಮೂಲಕ ಭಾರತದ ಪಂದ್ಯಕ್ಕೆ ಸೆಮಿಫೈನಲ್ ಹಾಗೂ ಫೈನಲ್ ಗೆ ಟಿಕೆಟ್ ನೀಡಲಾಗುತ್ತಿದೆ.
* ಭಾರತದ ಪಂದ್ಯಗಳಿಗೆ ಒಬ್ಬರಿಗೆ 2 ಟಿಕೆಟ್, ಇತರೆ ಪಂದ್ಯಗಳಿಗೆ ಒಬ್ಬರಿಗೆ 6 ಟಿಕೆಟ್ ಪಡೆಯಬಹುದು.

ಟಿಕೆಟ್ ಬೆಲೆ ಎಷ್ಟಿದೆ?
* ನಾಗ್ಪುರ್, ಧರ್ಮಶಾಲ, ನವದೆಹಲಿ, ಕೋಲ್ಕತ್ತಾ ಹಾಗೂ ಮೊಹಾಲಿಯಲ್ಲಿ ಟಿಕೆಟ್ ಆರಂಭ ಬೆಲೆ 100 ರು. ಬೆಂಗಳೂರಿನಲ್ಲಿ ಕನಿಷ್ಠ ಬೆಲೆ 250ರು ನಷ್ಟಿದೆ. ಮುಂಬೈನಲ್ಲಿ 500 ರು ಇದೆ.
* ಚೆನ್ನೈನಲ್ಲಿ ಮಹಿಳೆಯರ ಪಂದ್ಯ 50 ರು.
* ಗರಿಷ್ಠ ಟಿಕೆಟ್ ದರ 35,000 ರು (ಮುಂಬೈ)

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The ICC World Twenty20 2016 tournament is set to begin in Nagpur tomorrow (March 8) with 2 matches scheduled on the opening day.
Please Wait while comments are loading...