ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ಹಾಗೂ ವಾರ್ನ್ 'ಆಲ್ ಸ್ಟಾರ್' ಟೀಂ ಘೋಷಣೆ

By Mahesh

ನ್ಯೂಯಾರ್ಕ್, ನ.06: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ಅವರ ಕನಸಿನ ಕ್ರಿಕೆಟ್ ಟೂರ್ನಿ 'ಆಲ್ ಸ್ಟಾರ್ ಕ್ರಿಕೆಟ್ ಲೀಗ್' ನವೆಂಬರ್ 7ರಂದು ಆರಂಭಗೊಳ್ಳಲಿದೆ. ಅಮೆರಿಕದಲ್ಲಿ ಕ್ರಿಕೆಟ್ ಹುಚ್ಚು ಹಬ್ಬಿಸಲು ಸಚಿನ್ ಹಾಗೂ ವಾರ್ನ್ ಜೊತೆಗೆ 28 ಕ್ರಿಕೆಟರ್ಸ್ ಸೇರಿಕೊಂಡಿದ್ದಾರೆ. ಇದೀಗ ಸಚಿನ್ ಹಾಗೂ ವಾರ್ನ್ ತಂಡದಲ್ಲಿ ಯಾರು ಯಾರು ಇದ್ದಾರೆ ಎಂಬುದು ಪ್ರಕಟಗೊಂಡಿದೆ.

ನವೆಂಬರ್ 7ರಿಂದ ಆರಂಭವಾಗಲಿರುವ ಸಚಿನ್ ಬ್ಲಾಸ್ಟರ್ಸ್ ಹಾಗೂ ವಾರ್ನೆ ವಾರಿಯರ್ಸ್ ನಡುವಿನ ಮೂರು ಪಂದ್ಯಗಳಲ್ಲಿ ಆಡಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಇದೆ. ಆಲ್ ಸ್ಟಾರ್ ಲೀಗ್ ನಲ್ಲಿ ಸಚಿನ್ ಹಾಗೂ ಸೆಹ್ವಾಗ್ ಓಪನಿಂಗ್ ಮಾಡುವ ಸಾಧ್ಯತೆಯಿದೆ. [ಸಚಿನ್ ಬ್ಲಾಸ್ಟರ್ಸ್ vs ವಾರ್ನ್ ವಾರಿಯರ್ಸ್ ಫುಲ್ ಗೈಡ್]

All Stars Series: Here are Sachin and Warne's final teams

* ಸಿಟಿ ಫೀಲ್ಡ್, ನ್ಯೂಯಾರ್ಕ್ (45,000 ಪ್ಲಸ್ ಸೀಟು ಸಾಮರ್ಥ್ಯ)
* ಮಿನಿಟ್ ಮೇಡ್ ಪಾರ್ಕ್, ಹೋಸ್ಟನ್, ಟೆಕ್ಸಾಸ್ (40,000 ಪ್ಲಸ್ ಸೀಟು ಸಾಮರ್ಥ್ಯ)
* ಡಡ್ಜರ್ಸ್ ಸ್ಟೇಡಿಯಂ, ಲಾಸ್ ಏಂಜಲೀಸ್ (56,000 ಪ್ಲಸ್ ಸಾಮರ್ಥ್ಯ)
ತಂಡಗಳು ಇಂತಿವೆ:
1. ಸಚಿನ್ ತೆಂಡೂಲ್ಕರ್ (ಭಾರತ) (ನಾಯಕ)
2. ವಿರೇಂದ್ರ ಸೆಹ್ವಾಗ್ (ಭಾರತ)
3. ವಿವಿಎಸ್ ಲಕ್ಷ್ಮಣ್ (ಭಾರತ)
4. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
5. ಸೌರವ್ ಗಂಗೂಲಿ (ಭಾರತ)
6. ಮಹೇಲ ಜಯವರ್ದನೆ (ಶ್ರೀಲಂಕಾ)
7. ಕಾರ್ಲ್ ಹೂಪರ್ (ವೆಸ್ಟ್ ಇಂಡೀಸ್)
8. ಮೋಯಿನ್ ಖಾನ್ (ಪಾಕಿಸ್ತಾನ)
9. ಮುತ್ತಯ್ಯ ಮುರಳಿಧರನ್ (ಶ್ರೀಲಂಕಾ)
10. ಗ್ರಹಾಂ ಸ್ವಾನ್ (ಇಂಗ್ಲೆಂಡ್)
11. ಕರ್ಟ್ಲಿ ಅಂಬ್ರೋಸ್ (ವೆಸ್ಟ್ ಇಂಡೀಸ್)
12. ಶಾನ್ ಪೊಲ್ಲಾಕ್ (ದಕ್ಷಿಣ ಆಫ್ರಿಕಾ)
13. ಗ್ಲೆನ್ ಮೆಗ್ರಾ (ಆಸ್ಟ್ರೇಲಿಯಾ)
14. ಲ್ಯಾನ್ಸ್ ಕ್ಲುಸ್ನೆರ್ (ದಕ್ಷಿಣ ಆಫ್ರಿಕಾ)
15. ಶೋಯಿಬ್ ಅಕ್ತರ್ (ಪಾಕಿಸ್ತಾನ)

All Stars Series: Here are Sachin and Warne's final teams

ವಾರ್ನ್ ವಾರಿಯರ್ಸ್
1.ಶೇನ್ ವಾರ್ನ್ (ಆಸ್ಟ್ರೇಲಿಯಾ) (ನಾಯಕ)
2. ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
3. ಮೈಕಲ್ ವಾಗನ್ (ಇಂಗ್ಲೆಂಡ್)
4. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
5. ಜಾಂಟಿ ರೋಡ್ಸ್ (ದಕ್ಷಿಣ ಆಫ್ರಿಕಾ)
6. ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ)
7. ಆಂಡ್ರ್ಯೂ ಸೈಮಂಡ್ಸ್ (ಆಸ್ಟ್ರೇಲಿಯಾ)
8. ಕುಮಾರ್ ಸಂಗಕ್ಕಾರ (ಶ್ರೀಲಂಕಾ)
9. ಸಕ್ಲೇನ್ ಮುಷ್ತಾಕ್ (ಪಾಕಿಸ್ತಾನ)
10. ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್)
11. ಕರ್ಟ್ಲಿ ವಾಲ್ಶ್ (ವೆಸ್ಟ್ ಇಂಡೀಸ್)
12. ವಾಸೀಂ ಅಕ್ರಮ್ (ಪಾಕಿಸ್ತಾನ)
13. ಅಲಾನ್ ಡೊನಾಲ್ಡ್ (ದಕ್ಷಿಣ ಆಫ್ರಿಕಾ)
14. ಅಜಿತ್ ಅಗರ್ಕರ್ (ಭಾರತ)



(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X