ರವೀಂದ್ರ ಜಡೇಜ ಮದ್ವೆ ಡೇಟ್ ನಿಗದಿ, ಆಡಿ ಕಾರು ಗಿಫ್ಟ್

Posted By:
Subscribe to Oneindia Kannada

ರಾಜ್ ಕೋಟ್, ಏಪ್ರಿಲ್ 05: ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜ ಅವರು ಏಪ್ರಿಲ್ 17 ರಂದು ರಿವಾಬ ಸೋಲಂಕಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಆದರೆ ಮದುವೆಗೆ ಮುನ್ನವೇ ಏಪ್ರಿಲ್ 04 ಸೋಮವಾರದಂದು ಭಾವಿ ಪತ್ನಿಯ ತಂದೆಯಿಂದ ಐಷಾರಾಮಿ ಆಡಿ ಕಾರೊಂದನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ.

28 ರ ಹರೆಯದ ಜಡ್ಡು ,ಜಾಮ್ ನಗರ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಖ್ಯಾತ ಉದ್ಯಮಿ ಪುತ್ರಿ ರಿವಾಬ ಸೋಲಂಕಿ ಎನ್ನುವರನ್ನು ಕೈ ಹಿಡಿಯಲಿದ್ದಾರೆ. [ಚಿತ್ರಗಳು : ಲಕ್ಕಿ ಗರ್ಲ್ ರಿವಾಬ ಜತೆ ಜಡೇಜ ಮದ್ವೆ]

ಈ ಕಾರ್ಯಕ್ರಮದಲ್ಲಿ ಆತ್ಮೀಯರು ಹಾಗೂ ಕುಟುಂಬದವರು ಮಾತ್ರ ಭಾಗವಹಿಸಲಿದ್ದಾರೆಂದು ಜಡೇಜ ಅವರ ಕುಟುಂಬದ ಮೂಲಗಳು ತಿಳಿಸಿವೆ. [ಲಕ್ಕಿ ಗರ್ಲ್ ಜೊತೆ ರವೀಂದ್ರ ಜಡೇಜ ನಿಶ್ಚಿತಾರ್ಥ]

All-rounder Ravindra Jadeja to tie knot on April 17

ಏ.16 ರಂದು ಟೀಂ ಇಂಡಿಯಾದ ಆಟಗಾರರಿಗೆ ಮತ್ತು ಇನ್ನೂಳಿದ ತಮ್ಮ ಗೆಳೆಯರಿಗೆ ಜಡೇಜ ಕಲವದ್ ರೋಡ್ ಹೋಟೆಲ್ ನಲ್ಲಿ ವಿಶೇಷ ಪಾರ್ಟಿಯೊಂದನ್ನು ಆಯೋಜಿಸಿದ್ದಾರೆಂದು ತಿಳಿದು ಬಂದಿದೆ. ಫೆ.05 ರಂದು ಜಡೇಜ ಹಾಗೂ ರಿವಾಬ ನಡುವೆ ವಿವಾಹ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿತ್ತು.

ವರುಣ್ ಅರೋನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್(ನಿಶ್ಚಿತಾರ್ಥ ಘೋಷಣೆ), ಸುರೇಶ್ ರೈನಾ, ಮೋಹಿತ್ ಶರ್ಮ(ನಿಶ್ಚಿತಾರ್ಥ ಘೋಷಣೆ), ರೋಹಿತ್ ಶರ್ಮ ನಂತರ ಜಡೇಜ ಅವರು ಬ್ಯಾಚುಲರ್ ಲೈಫಿಗೆ ಜಡೇಜ ಗುಡ್ ಬೈ ಹೇಳಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian cricket team all-rounder Ravindra Jadeja was gifted an Audi car on Monday by his in-laws ahead of his wedding with city-based businessman's daughter Rivaba Solanki on April 17.
Please Wait while comments are loading...