ಮನೀಶ್ ಪಾಂಡೆ ನೇತೃತ್ವದ ಭಾರತ 'ಎ' ಗೆ ಸರಣಿ

Posted By:
Subscribe to Oneindia Kannada

ಮಕಾಯ್, ಆಸ್ಟ್ರೇಲಿಯಾ, ಸೆ. 04: ಇಲ್ಲಿ ನಡೆದ ಚತುಷ್ಕೋನ ಏಕದಿನ ಸರಣಿಯನ್ನು ಮನೀಶ್ ಪಾಂಡೆ ನೇತೃತ್ವದ ಭಾರತ 'ಎ' ತಂಡ ಭರ್ಜರಿಯಾಗಿ ಗೆದ್ದುಕೊಂಡಿದೆ. ಆಸ್ಟ್ರೇಲಿಯಾ 'ಎ' ವಿರುದ್ಧ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆಸೀಸ್ ತಂಡವನ್ನು ಭಾರತ 'ಎ' ತಂಡ 57 ರನ್ ಗಳಿಂದ ಸೋಲಿಸಿ ಪಂದ್ಯ ಹಾಗೂ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಪಂದ್ಯದ ಸ್ಕೋರ್ ಕಾರ್ಡ್

All-round India A thrash Australia A by 57 runs, clinch quadrangular ODI series

ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​​ ಮಾಡಿದ ಭಾರತ ಎ ತಂಡ ನಿಗದಿತ 50 ಓವರ್​​ಗಳಲ್ಲಿ 4 ವಿಕೆಟ್​​ ನಷ್ಟಕ್ಕೆ 266 ರನ್ ಗಳಿಸಿತು. ಭಾರತ ಎ ಪರ ಮಂದೀಪ್​​ 95ರನ್​, ನಾಯಕ ಮನೀಶ್​​ ಪಾಂಡೆ 61ರನ್​​ ಬಾರಿಸಿದರು. ನಂತರ ಈ ಗುರಿ ಸಾಧಿಸಲು ಆಗದ ಆಸ್ಟ್ರೇಲಿಯಾ ತಂಡ 44.5 ಓವರ್ ​​ಗಳಲ್ಲಿ 209 ರನ್​​ ಗಳಿಸಿ ಸೋಲೊಪ್ಪಿಕೊಂಡಿದೆ.

ಭಾರತ ಎ ಪರ ಬೌಲಿಂಗ್ ನಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಾಲ್​​ 4 ವಿಕೆಟ್​​ ಕಬಳಿಸಿದರು. 95ರನ್(108 ಎಸೆತ, 11 ಬೌಂಡರಿ)​ ಗಳಿಸಿದ ಮಂದೀಪ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಎ ತಂಡ ಹಾಗೂ ಆಸ್ಟ್ರೇಲಿಯಾ ನ್ಯಾಷನಲ್ ತಂಡ ಪಾಲ್ಗೊಂಡಿದ್ದವು.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India A rode on a solid all-round performance to clinch the Quadrangular one-day series, thrashing Australia by 57 runs in the final clash in Mackay on Sunday (Sept 4).
Please Wait while comments are loading...