ಮಾರ್ಗನ್, ಸಂಗಕ್ಕಾರ ನಂತರ ಹೇಲ್ಸ್ ತಂಡದಲ್ಲೂ ಸಚಿನ್ ಇಲ್ಲ!

Posted By:
Subscribe to Oneindia Kannada

ಲಂಡನ್, ಜುಲೈ 03: ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್, ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕಾರ ನಂತರ ಇಂಗ್ಲೆಂಡಿನ ಉದಯೋನ್ಮುಖ ಆಟಗಾರ ಅಲೆಕ್ಸ್ ಹೇಲ್ಸ್ ಅವರು ತಮ್ಮ ಸರ್ವಕಾಲಿಕ ಕ್ರಿಕೆಟ್ ತಂಡವನ್ನು ಹೆಸರಿಸಿದ್ದಾರೆ. ಆದರೆ, ಮೂವರ ತಂಡದಲ್ಲೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರು ಸೇರಿಸಲಾಗಿಲ್ಲ ಎಂಬುದು ಹುಬ್ಬೇರಿಸುವ ವಿಷಯ.

ಹಾಲಿ ಹಾಗೂ ಮಾಜಿ ಕ್ರಿಕೆಟಿಗರನ್ನು ಒಳಗೊಂಡ ಡ್ರೀಮ್ ಟೀಮ್ ಅಥವಾ ಸರ್ವಕಾಲಿಕ ಕ್ರಿಕೆಟ್ ತಂಡವನ್ನು ಅನೇಕ ಆಟಗಾರರು ಆಯ್ಕೆ ಮಾಡುತ್ತಿದ್ದಾರೆ. ಆದರೆ, ಸತತವಾಗಿ ಮೂರನೇ ಬಾರಿಗೆ ಸಚಿನ್ ಅವರ ಹೆಸರು ಆಯ್ಕೆಯಾಗದಿರುವುದರ ಹಿನ್ನಲೆ ಏನು ಎಂಬುದರ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.[ಮೆಕಲಮ್ ಆಯ್ಕೆಯ ಶ್ರೇಷ್ಠ ತಂಡದಲ್ಲಿ ಸಚಿನ್ ಗೆ ಸ್ಥಾನ]

Alex Hales too omits Sachin Tendulkar from his all-time XI, Virender Sehwag lone Indian

ಹೇಲ್ಸ್ ತಂಡದಲ್ಲೂ ಏಕೈಕ ಭಾರತೀಯ: ಸಂಗಕ್ಕಾರ ಪಟ್ಟಿಯಲ್ಲಿ ಏಕೈಕ ಭಾರತದ ಪ್ರತಿನಿಧಿಯಾಗಿ ರಾಹುಲ್ ದ್ರಾವಿಡ್ ಅವರಿದ್ದರೆ, ಹೇಲ್ಸ್ ಸಿದ್ಧಪಡಿಸಿದ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ಅವರಿಗೆ ಮಾತ್ರ ಸ್ಥಾನ ನೀಡಲಾಗಿದೆ. [ಸಂಗಕ್ಕಾರನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡದಲ್ಲಿ ಒಬ್ಬ ಭಾರತೀಯ]

ಇತ್ತೀಚೆಗೆ ಸಚಿನ್ ಅವರ 10 ಸಾವಿರ ರನ್ ಗಳ ದಾಖಲೆಯನ್ನು ತ್ವರಿತಗತಿಯಲ್ಲಿ ಮುರಿದ ಇಂಗ್ಲೆಂಡಿನ ಅಲಾಸ್ಟೇರ್ ಕುಕ್ ಅವರಿಗೆ ಸ್ಥಾನ ಸಿಕ್ಕಿದೆ.[ಸಚಿನ್ ಅವರ ಸಂಶೋಧನೆ ಬಗ್ಗೆ ಟ್ವೀಟ್ ಕಾಮಿಡಿ]

ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ, ಕುಮಾರ ಸಂಗಕ್ಕಾರ, ಜಾಕ್ ಕಾಲಿಸ್ , ಗ್ರಾಯಿ ಸೋಬರ್ಸ್, ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್ , ವಾಸಿಮ್ ಅಕ್ರಮ್ ಗ್ಲೆನ್ ಮೆಕ್​ಗ್ರಾಥ್ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.

ಹೇಲ್ಸ್ ಆಲ್ ಟೈಮ್ XI: ಅಲೆಸ್ಟರ್ ಕುಕ್, ವಿರೇಂದರ್ ಸೆಹ್ವಾಗ್, ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ, ಕುಮಾರ್ ಸಂಗಕ್ಕಾರ, ಜಾಕ್ ಕಾಲೀಸ್, ಗ್ಯಾರಿ ಸೋಬರ್ಸ್, ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ವಾಸೀಂ ಅಕ್ರಮ್, ಗ್ಲೆನ್ ಮೆಗ್ರಾ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After former Sri Lanka skipper Kumar Sangakkara shocked all by not picking him up in his all time XI, now England's Alex Hales too has dropped India's cricket legend Sachin Tendulkar from his dream XI.
Please Wait while comments are loading...