ಸಚಿನ್ -ಸೌರವ್ ದಾಖಲೆ ಮುರಿದ ಇಂಗ್ಲೆಂಡಿನ ಆರಂಭಿಕ ಕ್ರಿಕೆಟರ್ಸ್

Posted By:
Subscribe to Oneindia Kannada

ಲಂಡನ್ , ಜೂನ್ 26: ಶ್ರೀಲಂಕಾ ಹಾಗೂ ಇಂಗ್ಲೆಂಡಿನ ನಡುವಿನ ಏಕದಿನ ಸರಣಿ ಪಂದ್ಯದಿಂದ ಪಂದ್ಯಕ್ಕೆ ರೋಚಕಗೊಳ್ಳುತ್ತಿದೆ. ಮೊದಲ ಪಂದ್ಯ ಟೈ ಯಾದ ಬೆನ್ನಲ್ಲೇ ಎರಡನೇ ಪಂದ್ಯದಲ್ಲಿ ಇಂಗ್ಲೆಂಡಿನ ಆರಂಭಿಕ ಆಟಗಾರರು 18 ವರ್ಷ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡಿನ ಆರಂಭಿಕ ಆಟಗಾರರಾದ ಅಲೆಕ್ಸ್ ಹೆಲ್ಸ್ ಹಾಗೂ ಜೆಸನ್ ರಾಯ್ ಅವರು ಮೊದಲ ವಿಕೆಟ್ ಗೆ 256 ರನ್​ಗಳ ಜತೆಯಾಟ ದಾಖಲಿಸಿದ್ದಾರೆ. ಈ ಮೂಲಕ ಹದಿನೆಂಟು ವರ್ಷದ ಹಿಂದಿನ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಅವರ ದಾಖಲೆ ಮುರಿದಿದ್ದಾರೆ. [ಪಂದ್ಯದ ಸ್ಕೋರ್ ಕಾರ್ಡ್]

Alex Hales, Jason Roy break Sachin Tendulkar-Sourav Ganguly's 18-year-old world record


ಬರ್ಮಿಂಗ್​ಹ್ಯಾಮ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅಲೆಕ್ಸ್ ಹೆಲ್ಸ್ ಅಜೇಯ (133) ಹಾಗೂ ಜೆಸನ್ ರಾಯ್ (112) ಅಜೇಯ ಶತಕ ಸಿಡಿಸಿದ್ದಾರೆ. ಈ ಮೂಲಕ ಹತ್ತು ವಿಕೆಟ್​ಗಳ ಗೆಲುವು ತಂದುಕೊಟ್ಟಿದ್ದಾರೆ. ಶ್ರೀಲಂಕಾ ನೀಡಿದ 254ರನ್ ಗುರಿಯನ್ನು ಹದಿನೈದು ಓವರ್ ಬಾಕಿ ಇರುವಾಗಲೇ ತಲುಪಿಸಿದ್ದಾರೆ. ಶ್ರೀಲಂಕಾ ತಂಡ 245/7 ಸ್ಕೋರ್ ಮಾಡಿತ್ತು.

ಶ್ರೀಲಂಕಾ ವಿರುದ್ಧ 1998ರಲ್ಲಿ ಕೋಲಂಬೊ ಮೈದಾನದಲ್ಲಿ ಭಾರತೀಯ ಆರಂಭಿಕರಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ 252ರನ್​ಗಳ ಜತೆಯಾಟ ಆಡುವ ಮೂಲಕ ದಾಖಲೆ ನಿರ್ಮಿಸಿದ್ದರು.

ಒಟ್ಟಾರೆ, ಶ್ರೀಲಂಕಾ ವಿರುದ್ಧದ ಅತ್ಯಧಿಕ ರನ್ ಜೊತೆಯಾಟ ಪಟ್ಟಿಯಲ್ಲಿ ಹೇಲ್ಸ್ ಹಾಗೂ ರಾಯ್ ಮೂರನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡಿನ ಲೂಕ್ ರಾಂಚಿ ಹಾಗೂ ಗ್ರಾಂಟ್ ಎಲಿಯಂಟ್ (ಅಜೇಯ 267 ರನ್) ಇದ್ದರೆ, ಅಗ್ರಸ್ಥಾನದಲ್ಲಿ ಭಾರತದ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಅವರು 318ರನ್ ಜೊತೆಯಾಟದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Alex Hales, Jason Roy break Sachin Tendulkar-Sourav Ganguly's 18-year-old world record. England's opening pair of Alex Hales and Jason Roy on Friday stitched together a stunning partnership that shattered several records.
Please Wait while comments are loading...