ಶತಕ ಸಿಡಿಸಿ, ದಾಖಲೆಗಳನ್ನು ಅಳಿಸಿದ ನಾಯಕ ಕುಕ್!

Posted By:
Subscribe to Oneindia Kannada

ರಾಜ್ ಕೋಟ್, ನವೆಂಬರ್ 13: ಪ್ರವಾಸಿ ಇಂಗ್ಲೆಂಡ್ ತಂಡ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲೇ ಅತಿಥೇಯ ಭಾರತಕ್ಕೆ ಸರಿಯಾದ ಸ್ಪರ್ಧೆಯೊಡ್ಡಿದೆ. ನಾಯಕ ಅಲೆಸ್ಟೈರ್ ಕುಕ್ ಅವರು ತಮ್ಮ ವೃತ್ತಿ ಬದುಕಿನ 30 ಟೆಸ್ಟ್ ಶತಕ ಸಿಡಿಸಿ, ಇಂಗ್ಲೆಂಡಿನ ಅತ್ಯಂತ ಯಶಸ್ವಿ ನಾಯಕರೆನಿಸಿದ್ದಾರೆ.

31 ವರ್ಷ ವಯಸ್ಸಿನ ಕುಕ್ ಅವರು 136 ಟೆಸ್ಟ್ ಪಂದ್ಯಗಳಿಂದ 30 ಶತಕ ದಾಖಲಿಸಿದ್ದಾರೆ. ಭಾರತದ ವಿರುದ್ಧ 6ನೇ ಶತಕ ಹಾಗೂ ಭಾರತದಲ್ಲಿ ಐದನೇ ಶತಕವಾಗಿದೆ. [ಟೆಸ್ಟ್ ಸರಣಿ ವರ್ಣರಂಜಿತ ಚಿತ್ರಗಳು]

ಎಡಗೈ ಬ್ಯಾಟ್ಸ್ ಮನ್ ಕುಕ್ ಅವರು ಭಾರತದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿ 243 ಎಸೆತಗಳಲ್ಲಿ 13 ಬೌಂಡರಿಯಿದ್ದ 130 ರನ್ ಗಳಿಸಿದರು. ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 260/3 ಇದ್ದಾಗ ಡಿಕ್ಲೇರ್ ಮಾಡಿಕೊಂಡಿತು. 310ರನ್ ಟಾರ್ಗೆಟ್ ಪಡೆದ ಭಾರತ ಪಂದ್ಯ ಉಳಿಸಿಕೊಳ್ಳಲು ಯತ್ನಿಸಿ, ಕೊನೆಗೆ ಡ್ರಾಗೆ ತೃಪ್ತಿ ಪಟ್ಟಿದೆ.

ಈ ಶತಕದ ಮೂಲಕ ಕುಕ್ ಅವರು ಭಾರತದ ಪಿಚ್ ಗಳಲ್ಲಿ 1000ಕ್ಕೂ ಅಧಿಕ ಟೆಸ್ಟ್ ರನ್ ಕಲೆಹಾಕಿದ ನಾಲ್ಕನೇ ಪ್ರವಾಸಿ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಕುಕ್ ಅವರ ಸಾಧನೆ ಮೆಚ್ಚಿ ಕ್ರಿಕೆಟ್ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ

ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ

ಕುಕ್ ಅವರ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 260/3 ಇದ್ದಾಗ ಡಿಕ್ಲೇರ್ ಮಾಡಿಕೊಂಡಿತು. 310ರನ್ ಗುರಿ ಬೆನ್ನು ಹತ್ತಿದ ಭಾರತ ಎರಡನೇ ಇನ್ನಿಂಗ್ಸ್ 52.3 ಓವರ್ ಗಳಲ್ಲಿ 176/2 ಸ್ಕೋರ್ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.

136ನೇ ಟೆಸ್ಟ್ ಪಂದ್ಯದಲ್ಲಿ ಕುಕ್ ಶತಕ

31 ವರ್ಷ ವಯಸ್ಸಿನ ಕುಕ್ ಅವರು 136 ಟೆಸ್ಟ್ ಪಂದ್ಯಗಳಿಂದ 30 ಶತಕ ದಾಖಲಿಸಿದ್ದಾರೆ. ಭಾರತದ ವಿರುದ್ಧ 6ನೇ ಶತಕ ಹಾಗೂ ಭಾರತದಲ್ಲಿ ಐದನೇ ಶತಕವಾಗಿದೆ.

ಭಾರತದ ವಿರುದ್ಧ ಕುಕ್ ದಾಖಲೆಗಳು

ಪ್ರವಾಸಿ ಆಟಗಾರನಾಗಿ, ನಾಯಕನಾಗಿ ಭಾರತದ ನೆಲದಲ್ಲಿ ಉತ್ತಮ ರನ್ ಗಳಿಕೆ ಹೊಂದಿರುವ ಕುಕ್

ಭಾರತದ ವಿರುದ್ಧ ಅವಿಸ್ಮರಣೀಯ ಪ್ರದರ್ಶನ

2006ರಲ್ಲಿ ನಾಗ್ಪುರ, 2012ರಲ್ಲಿ ಅಹಮದಾಬಾದ್ ಹಾಗೂ 2016ರಲ್ಲಿ ರಾಜ್ ಕೋಟ್ ನಲ್ಲಿ ಕುಕ್ ಶತಕ ಮರೆಯುವಂತಿಲ್ಲ.

137ನೇ ಟೆಸ್ಟ್ ಪಂದ್ಯದಲ್ಲಿ 30ನೇ ಶತಕ

137ನೇ ಟೆಸ್ಟ್ ಪಂದ್ಯದಲ್ಲಿ 30ನೇ ಶತಕ ಬಾರಿಸಿದ 31 ವರ್ಷ ವಯಸ್ಸಿನ ಅಲೆಸ್ಟೈರ್ ಕುಕ್, 5 ಶತಕಗಳು ಬಾರಿಸಿರುವುದು ದಾಖಲೆ.

ಹೆಚ್ಚು ಶತಕ ಬಾರಿಸಿರುವ ವಿದೇಶಿ ಆಟಗಾರರು

ಭಾರತದ ನೆಲದಲ್ಲಿ ಹೆಚ್ಚು ಶತಕ ಬಾರಿಸಿರುವ ವಿದೇಶಿ ಆಟಗಾರರ ಪೈಕಿ ಕುಕ್ ಅಗ್ರಸ್ಥಾನಕ್ಕೇರಿದ್ದಾರೆ. ಮಿಕ್ಕವರು ಯಾರಿದ್ದಾರೆ ನೋಡಿ

ಕುಕ್ ಗೆ ವಿಶ್ ಮಾಡಿದ ನಾಯಕ ಕೊಹ್ಲಿ

ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಗಳಿಕೆಯಲ್ಲಿ ಉತ್ತಮ ದಾಖಲೆ ಹೊಂದಿರುವ ಕೊಹ್ಲಿ ಹಾಗೂ ಕುಕ್. ಕುಕ್ ಶತಕ ಗಳಿಸಿದಾಗ ವಿಶ್ ಮಾಡಿದ ಕೊಹ್ಲಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
England captain Alastair Cook was, however, holding fort at one end after compiling his 30th century of his 136-Test-old career which was also his sixth against India and fifth in this country to show his liking of Indian conditions.
Please Wait while comments are loading...