ಸಚಿನ್ ದಾಖಲೆ ಮುರಿಯಲು ಸಜ್ಜಾದ ಇಂಗ್ಲೆಂಡಿನ ಕುಕ್

Posted By:
Subscribe to Oneindia Kannada

ಲಂಡನ್, ಮೇ 6: ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಜತೆ ದಿಗ್ಗಜ ಸಚಿನ್ ತೆಂಡೂಲ್ಕರ್ ರನ್ನು ಹೋಲಿಸುತ್ತಿರುವ ಕಾಲದಲ್ಲಿ ಇಂಗ್ಲೆಂಡಿನ ನಾಯಕ ಅಲೆಸ್ಟೈರ್ ಕುಕ್ ಅವರು ಸಚಿನ್ ಅವರ ಟೆಸ್ಟ್ ದಾಖಲೆ ಮುರಿಯುವ ಸನ್ನಾಹದಲ್ಲಿದ್ದಾರೆ. ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಹಾಗೂ ತ್ವರಿತವಾಗಿ 10 ಸಾವಿರ ರನ್ ಗಡಿ ದಾಟಿದ ಆಟಗಾರ ಎನಿಸಿಕೊಳ್ಳುವ ಅವಕಾಶ ಕುಕ್ ಗೆ ಲಭ್ಯವಾಗಿದೆ.

ಸದ್ಯ ಇಂಗ್ಲೆಂಡ್ ಕೌಂಟಿಯಲ್ಲಿ ಎಸೆಕ್ಸ್ ತಂಡದ ಪರ ಭರ್ಜರಿ ಪ್ರದರ್ಶನ ನೀಡುತ್ತಿರುವ ಅಲೆಸ್ಟೈರ್ ಕುಕ್ ಅವರು ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದಾರೆ. ಮೇ 19 ರಿಂದ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿಯುವ ಉತ್ಸಾಹದಲ್ಲಿದ್ದಾರೆ.

 Alastair Cook all set to break Sachin Tendulkar's record in Test Cricket

ಕುಕ್ ಅವರು ಒಳ್ಳೆ ಲಯದಲ್ಲಿದ್ದು ಕೌಂಟಿಯಲ್ಲಿ 88, 105, 35, 1, 127 ರನ್ ಕಲೆಹಾಕಿ 421 ರನ್ ಗಳಿಸಿ ಟೆಸ್ಟ್ ಸರಣಿಗೆ ಸಜ್ಜಾಗಿರುವುದಾಗಿ ಘೋಷಿಸಿದ್ದಾರೆ. ಎಡಗೈ ಬ್ಯಾಟ್ಸ್ ಮನ್ ಕುಕ್ ಅವರು 10 ಸಾವಿರ ರನ್ ಗಳಿಸಲು ಇನ್ನು 36ರನ್ ಸಾಕು. ಕಳೆದ ಕ್ರಿಸ್ ಮಸ್ ಗೆ 31ನೇ ಹುಟ್ಟುಹಬ್ಬ ಆಚರಿಸಿಕೊಂಡ ಕುಕ್ ಅವರು 28 ಸೆಂಚುರಿ ಹಾಗೀ 47 ಅರ್ಧಶತಕಗಳ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 9,964 ರನ್ ಗಳಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲೇ 36 ರನ್ ಗಳಿಸುವ ಉತ್ಸಾಹದಲ್ಲಿದ್ದಾರೆ. ಈ ಮೂಲಕ 10,000 ರನ್ ಮೈಲಿಗಲ್ಲು ತಲುಪಿದ ಇಂಗ್ಲೆಂಡಿನ ಮೊದಲ ಹಾಗೂ ವಿಶ್ವದ 12ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ತೆಂಡೂಲ್ಕರ್ 2005ರ ಮಾರ್ಚ್ ತಿಂಗಳಿನಲ್ಲಿಲ್ಲಿ 31 ವರ್ಷ 10 ತಿಂಗಳಾಗಿದ್ದಾಗ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 10 ಸಾವಿರ ರನ್ ಗಡಿ ದಾಟಿದ್ದರು. 2006ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿಕೊಟ್ಟ ಕುಕ್ ಅವರು ಸಚಿನ್ ಗಿಂತ 5 ತಿಂಗಳು ಕಿರಿಯರಾಗಿ ಈ ದಾಖಲೆ ಮುರಿಯುವ ಸನ್ನಾಹದಲ್ಲಿದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At a time when people are busy drawing comparison between Sachin Tendulkar and India's star batsman Virat Kohli, it is England's captain Alastair Cook who is all set to break Master Blaster's Test record.
Please Wait while comments are loading...