ಇಂಗ್ಲೆಂಡ್ ತಂಡದ ನಾಯಕತ್ವ ತೊರೆದ ಅಲಿಸ್ಟರ್ ಕುಕ್!

Posted By:
Subscribe to Oneindia Kannada

ಲಂಡನ್, ಫೆಬ್ರವರಿ 06: ಇಂಗ್ಲೆಂಡ್ ತಂಡದ ಅತ್ಯಂತ ಯಶಸ್ವಿ ನಾಯಕ ಅಲಿಸ್ಟರ್ ಕುಕ್ ಅವರು ಇಂಗ್ಲೆಂಡ್ ತಂಡದ ನಾಯಕತ್ವವನ್ನು ಸೋಮವಾರ (ಫೆಬ್ರವರಿ 06)ದಂದು ತೊರೆದಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ ಪ್ರಕಟಿಸಿದೆ.

2012ರ ಆಗಸ್ಟ್ ನಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿಕೊಂಡ ಕುಕ್ ಅವರು ಇಲ್ಲಿ ತನಕ 59 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

Alastair Cook quits as England Test captain

2013 ಹಾಗೂ 2015ರಲ್ಲಿ ಆಷಸ್ ಸರಣಿ ಗೆದ್ದಿದ್ದು, ತವರಿನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದು ಅವರ ನಾಯಕತ್ವದಲ್ಲಿ ಮೈಲಿಗಲ್ಲಾಗಿದೆ. 2010 ರಿಂದ 2014 ರತನಕ 69 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಾಯಕರಾಗಿ ಕೂಡಾ ಕುಕ್ ಕಾಣಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಪರ ಅತಿ ಹೆಚ್ಚು ಪಂದ್ಯಗಳಿಗೆ ನಾಯಕರಾಗಿ ಸಾಧನೆ ಮಾಡಿರುವ ಕುಕ್ ಅವರು ಟೆಸ್ಟ್ ನಲ್ಲಿ 140 ಪಂದ್ಯಗಳಿಂದ 11,057ರನ್ ಗಳಿಸಿದ್ದಾರೆ. 2012ರಲ್ಲಿ ವಿಸ್ಡೆನ್ ಕ್ರಿಕೆಟರ್ ಆಫ್ ದಿ ಇಯರ್ ಗೌರವ, 2013ರಲ್ಲಿ ಐಸಿಸಿ ವಿಶ್ವ ಟೆಸ್ಟ್ ನಾಯಕ ಎನಿಸಿಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Alastair Cook today (February 6) stepped down as England's Test captain, England and Wales Cricket Board (ECB) has confirmed.
Please Wait while comments are loading...