ಸಚಿನ್ ತೆಂಡೂಲ್ಕರ್ 10K ದಾಖಲೆ ಮುರಿದ ಇಂಗ್ಲೆಂಡಿನ ಕುಕ್

Posted By:
Subscribe to Oneindia Kannada

ಲಂಡನ್, ಮೇ 31: ಇಂಗ್ಲೆಂಡ್ ತಂಡದ ನಾಯಕ ಅಲೆಸ್ಟೈರ್ ಕುಕ್ ಅವರು ಸಚಿನ್ ಅವರ ಟೆಸ್ಟ್ ದಾಖಲೆ ಮುರಿದಿದ್ದಾರೆ. ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಹಾಗೂ ತ್ವರಿತವಾಗಿ 10 ಸಾವಿರ ರನ್ ಗಡಿ ದಾಟಿದ ಆಟಗಾರ ಎಂಬ ಪಟ್ಟ ಈಗ ಕುಕ್ ಪಾಲಾಗಿದೆ.

ಅಲೆಸ್ಟೈರ್ ಕುಕ್ ಅವರು ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಈ ದಾಖಲೆ ಬರೆದಿದ್ದಾರೆ. ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಬಹುಕಾಲದ ನಂತರ ಮುರಿಯಲ್ಪಟ್ಟಿದೆ. 10 ಸಾವಿರ ರನ್ ಗಳಿಸಿದ ಮೊದಲ ಇಂಗ್ಲೀಷ್ ಕ್ರಿಕೆಟರ್ ಎಂಬ ಕೀರ್ತಿಯೂ ಕುಕ್ ಗಳಿಸಿದ್ದಾರೆ.

Alastair Cook breaks Sachin Tendulkar's record, becomes youngest player to score 10,000 Test runs

ಶ್ರೀಲಂಕಾ ವಿರುದ್ಧ ಸರಣಿ ಆರಂಭಕ್ಕೂ ಮುನ್ನ ಎಡಗೈ ಬ್ಯಾಟ್ಸ್ ಮನ್ ಕುಕ್ ಅವರು 10 ಸಾವಿರ ರನ್ ಗಳಿಸಲು ಇನ್ನು 36ರನ್ ಬೇಕಿತ್ತು. ಕಳೆದ ಕ್ರಿಸ್ ಮಸ್ ಗೆ 31ನೇ ಹುಟ್ಟುಹಬ್ಬ ಆಚರಿಸಿಕೊಂಡ ಕುಕ್ ಅವರು 28 ಸೆಂಚುರಿ ಹಾಗೂ 47 ಅರ್ಧಶತಕಗಳ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 9,964 ರನ್ ಗಳಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲೇ 36 ರನ್ ಗಳಿಸುವ ಉತ್ಸಾಹದಲ್ಲಿದ್ದರು. ಆದರೆ, ಅದು ಕೈಗೂಡಲಿಲ್ಲ.


ಎರಡನೇ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ 5 ರನ್ ಗಳಿಸಿದಾಗ 10,000 ರನ್ ಮೈಲಿಗಲ್ಲು ತಲುಪಿದ ಇಂಗ್ಲೆಂಡಿನ ಮೊದಲ ಹಾಗೂ ವಿಶ್ವದ 12ನೇ ಆಟಗಾರ ಎನಿಸಿಕೊಂಡರು.

ತೆಂಡೂಲ್ಕರ್ 2005ರ ಮಾರ್ಚ್ ತಿಂಗಳಿನಲ್ಲಿ 31 ವರ್ಷ 10 ತಿಂಗಳು 20ದಿನಗಳಾಗಿದ್ದಾಗ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 10 ಸಾವಿರ ರನ್ ಗಡಿ ದಾಟಿದ್ದರು.


2006ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿಕೊಟ್ಟ ಕುಕ್ ಅವರು ಸಚಿನ್ ಗಿಂತ 5 ತಿಂಗಳು ಕಿರಿಯರಾಗಿ ಈ ದಾಖಲೆ ಮುರಿದಿದ್ದಾರೆ(31ವರ್ಷ, 5 ತಿಂಗಳು, 5ದಿನಗಳು). ಸಚಿನ್ ಅವರು 122ನೇ ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದ್ದರೆ, ಇಂಗ್ಲೆಂಡಿನ ಕುಕ್ 128ನೇ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
England's Test captain Alastair Cook on Monday broke Master Blaster Sachin Tendulkar's record in Test.
Please Wait while comments are loading...