ವಿಶ್ವಕಪ್ ವೇಳೆ ಪ್ರಮಾದ, ಅಕ್ಷಯ್ ರಿಂದ ಕ್ಷಮೆಯಾಚನೆ

Posted By:
Subscribe to Oneindia Kannada

ಲಂಡನ್, ಜುಲೈ 24: ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಭಾರತ ತಂಡಕ್ಕೆ ಉತ್ಸಾಹ ತುಂಬಲು ಲಾರ್ಡ್ಸ್ ಅಂಗಳಕ್ಕೆ ಬಂದಿದ್ದ ನಟ ಅಕ್ಷಯ್ ಕುಮಾರ್ ಅವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಪ್ರಸಂಗ ನಡೆಯಿತು.

ಪಂದ್ಯದ ವೇಳೆ ಭಾರತದ ರಾಷ್ಟ್ರಧ್ವಜ ಹಿಡಿದಿದ್ದ ಫೋಟೋ ಒಂದನ್ನು ಟ್ವಿಟ್ಟರ್ ನಲ್ಲಿ ಅಕ್ಷಯ್ ಅಪ್ ಲೋಡ್ ಮಾಡಿದ್ದರು. ಆದರೆ, ಅಕ್ಷಯ್ ಕೈಲಿದ್ದ ಧ್ವಜ ತಲೆಕೆಳಗಾಗಿತ್ತು.

Akshay Kumar apologies for holding National Flag ICC Women’s World Cup 2017

ಈ ಪ್ರಮಾದ ಅಕ್ಷಯ್ ಗಮನಕ್ಕೆ ಬಂದಿರಲಿಲ್ಲ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಅಭಿಮಾನಿಗಳು ಎಚ್ಚರಿಸಿದ ಬಳಿಕ ಎಚ್ಚೆತ್ತುಕೊಂಡ ಅಕ್ಷಯ್ ಅವರು ಭಾರತದ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಿಡಿದಿದ್ದಕ್ಕೆ ಕ್ಷಮೆ ಕೇಳಿದ್ದಾರೆ.

ನಂತರ ಉಲ್ಟಾ ಹಿಡಿದಿದ್ದ ಫೋಟೋವನ್ನು ಕೂಡ ಡಿಲೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ICC Women's World Cup 2017, Akshay Kumar held the National Flag to wave it in respect to the team. But the moment he posted a picture on Twitter, he received backlash for violating the code of conduct for the tricolor.
Please Wait while comments are loading...