ಧೋನಿ, ಅಜರ್ ನಂತರ ಯುವರಾಜ್ ಕುರಿತ ಫಿಲಂ

Posted By:
Subscribe to Oneindia Kannada

ನವದೆಹಲಿ, ಮಾ.01: ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಜೀವನ ಆಧಾರಿತ ಫಿಲಂ ನಿರ್ಮಾಣವಾಗುತ್ತಿರುವ ಬೆನ್ನಲ್ಲೇ ಆಲ್ ರೌಂಡರ್ ಯುವರಾಜ್ ಕುರಿತಂತೆ ಸಾಕ್ಷ್ಯಚಿತ್ರವೊಂದು ಸಿದ್ಧವಾಗುತ್ತಿದೆ.

ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಜೀವನ, ಸಾಧನೆ ಕುರಿತಂತೆ ಸಾಕ್ಷ್ಯಚಿತ್ರ ನಿರ್ಮಿಸಲು ಯುಎಸ್ ಮೂಲದ ಸಂಸ್ಥೆಯೊಂದು ಮುಂದೆ ಬಂದಿದೆ. [ಧೋನಿ ಸಿನಿಮಾಕ್ಕೆ ಬಿಸಿಸಿಐ ಸಂಸ್ಥೆಯೇ ಸೆನ್ಸಾರ್]

ಲಾಸ್ ಏಂಜಲೀಸ್​ನ ಅಪೆಕ್ಸ್ ಎಂಟರ್​ಟೇನ್​ವೆುಂಟ್ ಸಂಸ್ಥೆ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಹೀರೋ ಜೀವನದ ಚಿತ್ರ ನಿರ್ವಿುಸಲಿದೆ. ಇದರಲ್ಲಿ ಯುವಿ ಕ್ಯಾನ್ಸರ್​ನಿಂದ ಪಾರಾಗಿರುವ ಅಂಶದೊಂದಿಗೆ ಅವರ ಕ್ರಿಕೆಟ್ ಜೀವನದ ಇತರ ಪ್ರಮುಖ ಘಟನೆಗಳು, ಏಳು ಬೀಳುಗಳನ್ನು ಸ್ವಾರಸ್ಯಕರವಾಗಿ ತೋರಿಸಲಾಗುತ್ತದೆ. [ಕ್ರಿಕೆಟರ್ ಅಜರ್ ಲುಕ್ ನಲ್ಲಿ ಇಮ್ರಾನ್ ಹಶ್ಮಿ ಮಿಂಚಿಂಗ್]

After MS Dhoni, now a film on Yuvraj Singh in the offing

ಭಾಗ್ ಮಿಲ್ಕಾ ಭಾಗ್ ಹಾಗೂ ಸಿಂಗ್ ಈಸ್ ಬ್ಲಿಂಗ್ ಸಿನಿಮಾಗಳಲ್ಲಿ ನಟಿಸಿರುವ ಯುವರಾಜ್ ಸಿಂಗ್ ಅವರ ತಂದೆ ಮಾಜಿ ಕ್ರಿಕೆಟರ್ ಯೋಗರಾಜ್ ಸಿಂಗ್ ಹಾಗೂ ತಾಯಿ ಶಭನಂ ಸಿಂಗ್ ಕೂಡಾ ಸಾಕ್ಷ್ಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕ್ಯಾನ್ಸರ್ ನಿಂದ ಮುಕ್ತರಾಗಿ ಮತ್ತೊಮ್ಮೆ ಕ್ರಿಕೆಟ್ ಅಂಗಳಕ್ಕೆ ಬಂದ ಯುವರಾಜ್ ಅವರ ಬದುಕು ಇತರರಿಗೆ ಮಾದರಿಯಾಗುವಂತಿದೆ. ಮತ್ತೊಮ್ಮೆ ಟೀಂ ಇಂಡಿಯಾಕ್ಕೆ ಸೇರ್ಪಡೆಯಾಗಿದ್ದು ಕಡಿಮೆ ಸಾಧನೆಯಲ್ಲ ಎಂದು ಅಪೆಕ್ಸ್ ಎಂಟರ್ ಟೈನ್ಮೆಂಟ್ ನ ಅಧ್ಯಕ್ಷ ಮಾರ್ಕ್ ಸಿಯಾರ್ಡಿ ಅವರು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After Team India's limited-overs skipper Mahendra Singh Dhoni and ex-crickter Mohammad Azharuddin, it's Yuvraj Singh on whom a film is going to be made.
Please Wait while comments are loading...