ಗವಾಸ್ಕರ್ ವಿರುದ್ಧ ಧೋನಿ, ಬಿಗ್ ಬಿ ಕಿಡಿಕಾರಿದ್ದೇಕೆ?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 24: ಇಡೀ ಕ್ರಿಕೆಟ್ ಲೋಕವೇ ಟೀಂ ಇಂಡಿಯಾದ ಗೆಲುವನ್ನು ಕೊಂಡಾಡುತ್ತಿದ್ದರೆ, ಭಾರತದ ಸೆಲೆಬ್ರಿಟಿ ಕಾಮೆಂಟೆಟರೊಬ್ಬರ ಮೇಲೆ ಅಮಿತಾಬ್ ಬಚ್ಚನ್ ಹಾಗೂ ಎಂಎಸ್ ಧೋನಿ ಮುನಿಸಿಕೊಂಡಿದ್ದಾರೆ. ಈ ರೀತಿ ಇವರಿಬ್ಬರ ಮುನಿಸಿಗೆ ಕಾರಣವಾದ ಕ್ರಿಕೆಟ್ ದಿಗ್ಗಜ ಬೇರೆ ಯಾರು ಅಲ್ಲ, ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಬುಧವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ಗೆಲುವಿನ ಹಾದಿ ಹಿಡಿದಿದ್ದ ಬಾಂಗ್ಲಾದೇಶ ತಂಡವನ್ನು ಸುನಿಲ್ ಗವಾಸ್ಕರ್ ಹಾಡಿ ಹೊಗಳಿದ್ದು ಈಗ ಚರ್ಚೆಯ ವಿಷಯವಾಗಿದೆ. [ಭಾರತಕ್ಕೆ ರೋಚಕ ಜಯ]

ಅದರಲ್ಲೂ ಕೊನೆಯ ಮೂರು ಓವರ್ ಗಳಲ್ಲಿ ಟೀಂ ಇಂಡಿಯಾದ ಫೀಲ್ಡಿಂಗ್, ಬೌಲಿಂಗ್, ಧೋನಿ ಚಾಕಚಕ್ಯತೆ, ಸಂಘಟಿತ ಹೋರಾಟದ ಬಗ್ಗೆ ಹಾಡಿ ಹೊಗಳದ ಗವಾಸ್ಕರ್, ಬಾಂಗ್ಲಾ ತಂಡದ ಬ್ಯಾಟ್ಸ್ ಮನ್ ಗಳ ಹೋರಾಟಕ್ಕೆ ಹೆಚ್ಚಿನ ವಾಕ್ಯಗಳನ್ನು ಪೋಣಿಸಿದರು.[ಕೊನೆ ಓವರ್ ಥ್ರಿಲ್ಲರ್, ಧೋನಿ, ಪಾಂಡ್ಯ ಸೂಪರ್]

ಪಂದ್ಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳನ್ನು ಎದುರಿಸುತ್ತಿದ್ದ ಧೋನಿಗೆ ನೆಟ್ ರನ್ ರೇಟ್ ಬಗ್ಗೆ ಹೆಚ್ಚೆಚ್ಚು ಪ್ರಶ್ನೆಗಳು ಎದುರಾಗಿದ್ದರಿಂದ ಸಿಟ್ಟಿಗೆದ್ದಿದ್ದರು. ಮಾಧ್ಯಮದವರನ್ನು ಧೋನಿ ತರಾಟೆಗೆ ತೆಗೆದುಕೊಂಡರು.[ಧೋನಿಗೆ ಸಿಟ್ಟು ಬಂದಿದ್ದು ಏಕೆ?]

ಇಂಡಿಯನ್ ಕಾಮೆಂಟೆಟರ್ ಎಂದು ಮಾತ್ರ ಹೇಳಿದ ಬಿಗ್ ಬಿ

ಇಂಡಿಯನ್ ಕಾಮೆಂಟೆಟರ್ ಎಂದು ಮಾತ್ರ ಹೇಳಿದ ಬಿಗ್ ಬಿ

ಇಂಡಿಯನ್ ಕಾಮೆಂಟೆಟರ್ ಎಂದು ಮಾತ್ರ ಹೇಳಿದ ಬಿಗ್ ಬಿ ಅವರು ಸುನಿಲ್ ಗವಾಸ್ಕರ್ ಬಗ್ಗೆ ಹೇಳುತ್ತಿದ್ದರೆ ಎಂಬುದು ಅಭಿಮಾನಿಗಳಿಗೆ ತಿಳಿದು ಬಿಟ್ಟಿತು. ಕೊನೆ ಮೂರು ಓವರ್ ಗಳಲ್ಲಿ ಗವಾಸ್ಕರ್ ಅವರು ವೀಕ್ಷಕ ವಿವರಣೆ ನೀಡಿದರು.

ಟೀಂ ಇಂಡಿಯಾವನ್ನು ಹಾಡಿ ಹೊಗಳಿದರು

20 ಮಿಲಿಯನ್ ಟ್ವಿಟ್ಟರ್ ಹಿಂಬಾಲಕರನ್ನು ಹೊಂದಿರುವ ಕ್ರಿಕೆಟ್ ಪ್ರೇಮಿ, ಮೇರು ನಟ ಅಮಿತಾಬ್ ಅವರು ಟೀಂ ಇಂಡಿಯಾವನ್ನು ಹಾಡಿ ಹೊಗಳಿದರು. ಜೊತೆಗೆ ಇಂಡಿಯನ್ ಕಾಮೆಂಟೆಟರ್ ಅವರು ಭಾರತೀಯ ಆಟಗಾರರ ಬಗ್ಗೆ ಹೆಚ್ಚು ಮಾತನಾಡಿದ್ದರೆ ಚೆನ್ನಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ 2,500ಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ.

ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಧೋನಿ

ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಧೋನಿ, ನೀವೆ ಎಲ್ಲಾ ಹೇಳಿದ್ದೀರಿ, ಇನ್ನೇನು ಇದಕ್ಕೆ ಸೇರಿಸುವ ಅಗತ್ಯವಿಲ್ಲ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಇದು ಕೂಡಾ 4,500 ಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ.

ಅಭಿಮಾನಿಗಳು ಸಹಮತ ವ್ಯಕ್ತಪಡಿಸಿದ್ದಾರೆ

ವಿಶ್ವ ಟಿ20ಯ ಭಾರತ ಹಾಗೂ ಬಾಂಗ್ಲಾದೇಶ ಪಂದ್ಯದ ಕಾಮೆಂಟ್ರಿ ಟೀಂನಲ್ಲಿ ಸುನಿಲ್ ಗವಾಸ್ಕರ್ ಅಲ್ಲದೆ, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಸಂಜಯ್ ಮಂಜೇಕ್ರರ್, ಆಕಾಶ್ ಛೋಪ್ರಾ ಮುಂತಾದವರು ಇದ್ದರು. ಗವಾಸ್ಕರ್ ಬಗ್ಗೆ ಬಿಗ್ ಬಿ ಮಾಡಿರುವ ಟ್ವೀಟ್ ಗೆ ಅನೇಕ ಅಭಿಮಾನಿಗಳು ಸಹಮತ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್ರಿ ಮಾಡಿ ಅಂದ್ರೆ ಜಡ್ಜ್ ಮೆಂಟ್ ಕೊಡ್ತೀರಾ?

ಕಾಮೆಂಟ್ರಿ ಮಾಡಿ ಅಂದ್ರೆ ಜಡ್ಜ್ ಮೆಂಟ್ ಕೊಡ್ತೀರಾ? ಯಾರ ಪರ ವಹಿಸದೆ ವಿವರಣೆ ನೀಡಬಾರದೇಕೆ? ಎಂದು ಪ್ರಶ್ನಿಸಿದ ಕ್ರಿಕೆಟ್ ಅಭಿಮಾನಿ ಪ್ರಸಾದ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As the fans celebrated India's thrilling 1-run victory over Bangladesh last night (March 23), Bollywood megastar Amitabh Bachchan and captain Mahendra Singh Dhoni were unhappy with an Indian commentator for his views.
Please Wait while comments are loading...