ಶೂಟೌಟ್ ನಿಂದ ಬಚಾವಾದ ಅಫ್ಘಾನಿಸ್ತಾನದ ಕ್ರಿಕೆಟರ್!

Posted By:
Subscribe to Oneindia Kannada

ನವದೆಹಲಿ, ಜನವರಿ 09 : ಅಫ್ಘಾನಿಸ್ತಾನದ ಕ್ರಿಕೆಟರ್ ಶಾಪೂರ್ ಜದ್ರಾನ್ ಅವರ ಮೇಲೆ ಇತ್ತೀಚೆಗೆ ಗುಂಡಿನ ದಾಳಿ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜದ್ರಾನ್, ಈ ರೀತಿ ಶೂಟೌಟ್ ನಿಂದ ಪಾರಾಗಿದ್ದು, ಇದೇ ಮೊದಲಲ್ಲ ಎಂದಿದ್ದಾರೆ.

ಕಳೆದ ಶನಿವಾರ ರಾತ್ರಿ ನಡೆದ ಘಟನೆಯಿಂದ ನಿಧಾನವಾಗಿ ಶಾಪೂರ್ ಚೇತರಿಸಿಕೊಂಡಿದ್ದಾರೆ. ಕಾಬೂಲ್ ನ ಬಗ್ರಾಮಿ ಪ್ರದೇಶದಲ್ಲಿ ವೇಗಿ ಶಾಪೂರ್ ಹಾಗೂ ಅವರ ಸೋದರ ಕಾರಿನಲ್ಲಿ ತೆರಳುವಾಗ ಅಪರಿಚಿತರಿಂದ ಗುಂಡಿನ ಮಳೆ ಎದುರಿಸಿದ್ದಾರೆ. ಮನೆಗೆ ತೆರಳುವಾಗ ಈ ಘಟನೆ ನಡೆದಿದ್ದು, ತಕ್ಷಣವೇ ಇಬ್ಬರು ಗುಂಡಿನ ದಾಳಿಯನ್ನು ತಪ್ಪಿಸಿಕೊಂಡು ಬಚಾವಾಗಿದ್ದಾರೆ ಎಂದು ಖಾಮ್ಮಾ.ಕಾಂ ವರದಿ ಮಾಡಿದೆ.

Afghanistan pacer Shapoor Zadran attacked by gunmen, escapes unhurt: Reports

31 ವರ್ಷ ವಯಸ್ಸಿನ ಕ್ರಿಕೆಟರ್ ಶಾಪೂರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಈ ಹಿಂದೆ ಕೂಡಾ ಇದೇ ರೀತಿ ದಾಳಿ ನಡೆದಿತ್ತು. ಪೊಲೀಸರಿಗೆ ದೂರು ನೀಡಿದ್ದೆ. ಆದರೆ, ಮತ್ತೊಮ್ಮೆ ದಾಳಿ ಎದುರಿಸಬೇಕಾಯಿತು ಎಂದಿದ್ದಾರೆ.

ಶಾಪೂರ್ ಮೇಲಿನ ದಾಳಿಯ ಹೊಣೆಯನ್ನು ಯಾವುದೇ ವ್ಯಕ್ತಿ ಅಥವಾ ಉಗ್ರಗಾಮಿ ಸಂಘಟನೆ ಹೊತ್ತಿಕೊಂಡಿಲ್ಲ. ಅಫ್ಘಾನಿಸ್ತಾನದ ಪಾಕ್ತಿಯಾ ಪ್ರಾಂತ್ಯ ಮೂಲದ ಶಾಪೂರ್ ಅವರು 39 ಏಕದಿನ ಪಂದ್ಯಗಳನ್ನಾಡಿ 41 ವಿಕೆಟ್ ಪಡೆದುಕೊಂಡಿದ್ದಾರೆ. 27 ಟ್ವೆಂಟಿ ಅಂತಾರಾಷ್ಟ್ರೀಯ ಪಂದ್ಯಗಳಿಂದ 26 ವಿಕೆಟ್ ಕಿತ್ತಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Afghanistan pacer Shapoor Zadran has reportedly been attacked by unknown gunmen in the country's capital Kabul on Saturday (Jan 7).
Please Wait while comments are loading...