ಕಾಬೂಲ್ ಸ್ಫೋಟಕ್ಕೆ ಆಫ್ಘನ್ ಪ್ರತೀಕಾರ, ಪಾಕ್ ಕ್ರಿಕೆಟ್ ಸರಣಿ ರದ್ದು

Posted By:
Subscribe to Oneindia Kannada

ನವದೆಹಲಿ, ಜೂನ್ 01 : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಬುಧವಾರ ಕಾರ್ ಬಾಂಬ್ ಸ್ಫೋಟಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಸರಣಿಯನ್ನು ರದ್ದುಗೊಳಿಸಲು ಆಫ್ಘಾನಿಸ್ತಾನ ನಿರ್ಧರಿಸಿದೆ.

ಕಾಬೂಲ್ ಸ್ಪೋಟದಲ್ಲಿ ಸುಮಾರು 90 ಜನರನ್ನು ಬಲಿ ಪಡೆದ ಭೀಕರ ಸ್ಫೋಟದ ರೂವಾರಿ ಪಾಕಿಸ್ತಾನದ ಐಎಸ್ಐ ಎಂದು ಅಫ್ಘಾನಿಸ್ತಾನದ ಗುಪ್ತಚರ ಇಲಾಖೆ ತಿಳಿಸಿದೆ.[ಕಾಬೂಲ್ ಸ್ಫೋಟದ ರೂವಾರಿ ಪಾಕ್: ಆಫ್ಘನ್ ಗುಪ್ತಚರ ಇಲಾಖೆ]

Afghanistan cancels cricket matches with Pakistan after Kabul bombing

ಇದರಿಂದ ಕ್ರಿಕೆಟ್ ಟೂರ್ನಿ ಹಾಗೂ ಪಾಕಿಸ್ತಾನ ಕ್ರಿಕೆಟ್ ಸಮಿತಿ ಜತೆ ಪರಸ್ಪರ ಸರ್ಕಾರಿ ಸಂಬಂಧದ ಒಪ್ಪಂದಗಳನ್ನು ರದ್ದು ಮಾಡಲಾಗಿದೆ ಎಂದು ಆಫ್ಘನ್ ಕ್ರಿಕೆಟ್ ಮಂಡಳಿಯ ನಿರ್ದೇಶಕ ಅಜೀಜ್ ಘರ್ವಾಲ್ ತಿಳಿಸಿದ್ದಾರೆ.[ಕಾಬೂಲ್ ನಲ್ಲಿ ಭಾರಿ ಸ್ಫೋಟ : 19 ಮಂದಿ ಸಾವು, 300 ಮಂದಿಗೆ ಗಾಯ]

ಎರಡೂ ದೇಶಗಳ ನಡುವೆ ಕ್ರಿಕೆಟ್ ಸಾಮರಸ್ಯ ಮೂಡಿಸಲು ಜುಲೈ-ಆಗಸ್ಟ್ ನಲ್ಲಿ ಕಾಬೂಲ್ ಮತ್ತು ಲಾಹೋರ್ ನಲ್ಲಿ ತಲಾ ಒಂದೊಂದು ಟಿ20 ಫ್ರೆಂಡ್ಲಿ ಮ್ಯಾಚ್ ಗಳನ್ನು ಆಡಲು ನಿಶ್ಚಯಿಸಲಾಗಿತ್ತು.

ಮುಂಬರುವ ದಿನಗಳಲ್ಲಿ ಎರಡೂ ದೇಶಗಳ ನಡುವೆ ಜೂನಿಯರ್ ಮತ್ತು ಸೀನಿಯರ್ ಕ್ರಿಕೆಟ್ ತಂಡಗಳ ಕ್ರಿಕೆಟ್ ಪ್ರವಾಸಗಳನ್ನು ಕೈಗೊಳ್ಳುವ ಯೋಜನೆಯೂ ಇತ್ತು. ಈಗ, ಕ್ರಿಕೆಟ್ ಪಂದ್ಯಗಳನ್ನು ರದ್ದುಗೊಳಿಸಲು ಆಫ್ಘಾನಿಸ್ತಾನ ನಿರ್ಧರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Afghan Cricket Board (ACB) on Thursday (June 1) said it had cancelled all matches and agreements with Pakistan after the Afghan intelligence linked the Pakistani intelligence agency to the Kabul bombing that left 90 dead and 463 wounded.
Please Wait while comments are loading...