ಬಿಸಿಸಿಐ ನಿಗಾ ಸಮಿತಿ ಸೇರದಿರಲು ನಾರಿಮನ್ ನಿರ್ಧಾರ

Posted By:
Subscribe to Oneindia Kannada

ಬೆಂಗಳೂರು, ಜನವರಿ 03: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇಲೆ ನಿಗಾ ವಹಿಸಲು ರಚಿಸಲಾಗುವ ಸಮಿತಿಯನ್ನು ಸೇರದಿರಲು ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರು ನಿರ್ಧರಿಸಿದ್ದಾರೆ.

ಸುಪ್ರೀಂಕೋರ್ಟಿನಿಂದ ಫಾಲಿ ಎಸ್ ನಾರಿಮನ್ ಹಾಗೂ ಗೋಪಾಲ್ ಸುಬ್ರಮಣಿಯನ್ ಅವರನ್ನು ಅಮಿಕ್ಯೂಸ್ ಕ್ಯೂರಿಯಾಗಿ ಸೋಮವಾರ ನೇಮಿಸಲಾಗಿತ್ತು. ಬಿಸಿಸಿಐ ಕಾರ್ಯನಿರ್ವಹಣೆ ಮೇಲೆ ನಿಗಾ ಇಡಲು ಸೂಚಿಸಲಾಗಿತ್ತು.[ಠಾಕೂರ್ ಅಮಾನತು, ಟ್ವಿಟ್ಟರ್ ನಲಿ ಮಿಶ್ರ ಪ್ರತಿಕ್ರಿಯೆ]

Advocate Fali S Nariman recuses himself from hearing BCCI matter

ಆದರೆ, ಸುಪ್ರೀಂಕೋರ್ಟ್ ನೀಡಿದ ಅವಕಾಶವನ್ನು ನಾರಿಮನ್ ಅವರು ಬದಿಗೊತ್ತಿದ್ದಾರೆ. ಅವರ ಜಾಗಕ್ಕೆ ಈಗ ಹಿರಿಯ ವಕೀಲ ಅನಿಲ್ ದಿವಾನ್ ಬಂದಿದ್ದಾರೆ.

ಬಿಸಿಸಿಐಯ ಈ ಹಿಂದೆ ಬ್ಯಾಟಿಂಗ್ ಮಾಡಿದ್ದ ನಾರಿಮನ್ ಅವರು ತಮ್ಮ ನಿಲುವನ್ನು ಕೋರ್ಟಿನ ಮುಂದೆ ಹೇಳಿಕೊಂಡಿದ್ದು, ಕೋರ್ಟ್ ಕೂಡಾ ಮನವಿಯನ್ನು ಪುರಸ್ಕರಿಸಿ, ಅನಿಲ್ ದಿವಾನ್ ರನ್ನು ನೇಮಿಸಿದೆ. ಜನವರಿ 19ರಂದು ಮುಂದಿನ ನಡೆಯಲಿದ್ದು ಅಷ್ಟರೊಳಗೆ ಹೊಸ ಸಮಿತಿಯನ್ನು ರಚಿಸಬೇಕಿದೆ.[ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ವಜಾ]

ನ್ಯಾ. ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಗಳನ್ನು ವಿಫಲವಾದ ಹಿನ್ನಲೆಯಲ್ಲಿ ಅನುರಾಗ್ ಠಾಕೂರ್ ಹಾಗೂ ಅಜಯ್ ಶಿರ್ಕೆ ಅವರನ್ನು ಅವರ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಇಬ್ಬರಿಗೂ ನೋಟಿಸ್ ಜಾರಿಗೊಳಿಸಲಾಗಿದೆ. ಹಾಲಿ ಉಪಾಧ್ಯಕ್ಷ ಸ್ಥಾನದಲ್ಲಿರುವ ಹಿರಿಯರೊಬ್ಬರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Senior advocate Fali S Nariman has refused to take up the job of suggesting members to govern the Board of Control for Cricket in India (BCCI).
Please Wait while comments are loading...