ಕ್ರಿಕೆಟರ್ ಆಡಂ ವೋಜ್ಸ್ ತಲೆಗೆ ಪೆಟ್ಟು, ಆಸ್ಪತ್ರೆಗೆ ದಾಖಲು

Posted By:
Subscribe to Oneindia Kannada

ಲಂಡನ್, ಮೇ 02: ಇಂಗ್ಲೆಂಡಿನ ಕೌಂಟಿ ಕ್ರಿಕೆಟ್ ನಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ಕ್ರಿಕೆಟರ್ ಆಡಂ ವೋಜ್ಸ್ ಅವರು ಆಟದ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಫೀಲ್ಡಿಂಗ್ ಮಾಡುವಾಗ ಚೆಂಡು ಅವರ ತಲೆಗೆ ಬಡಿದಿದೆ.

ಸೌಥಾಪ್ಟನ್ ನ ರೋಸ್ ಬೌಲ್ ಸ್ಟೇಡಿಯಂನಲ್ಲಿ ಮಿಡ್ಲ್ ಸೆಕ್ಸ್ ಹಾಗೂ ಹಾಂಪ್ ಶೈರ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದೆ. [ತಲೆಗೆ ಚೆಂಡು ಬಡಿದು ಶ್ರೀಲಂಕಾ ಕ್ರಿಕೆಟರ್ ತೀವ್ರವಾಗಿ ಅಸ್ವಸ್ಥ]

36 ವರ್ಷದ ಕ್ರಿಕೆಟರ್ ಆಡಂ ವೋಜ್ಸ್ ಅವರು ಚೆಂಡು ಬಡಿದ ತಕ್ಷಣ ಕುಸಿದು ಬಿದ್ದಿದ್ದಾರೆ. ಆದರೆ, ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಯಿತು. ಹೀಗಾಗಿ ತೀವ್ರವಾದ ಹಾನಿಯಿಂದ ಬಚಾವ್ ಆಗಿದ್ದಾರೆ ಎಂದು ಇಸಿಬಿ ಪ್ರಕಟಿಸಿದೆ. ಸದ್ಯ ವೋಜ್ಸ್ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Australia's Adam Voges suffers head injury during county match, rushed to hospital

ಇತ್ತೀಚೆಗೆ ಶ್ರೀಲಂಕಾದ ಟೆಸ್ಟ್ ಆರಂಭಿಕ ಬ್ಯಾಟ್ಸ್ ಮನ್ ಕೌಶಲ್ ಸಿಲ್ವಾ ಅವರು ಕೂಡಾ ಇದೇ ರೀತಿ ಫೀಲ್ಡಿಂಗ್ ಮಾಡುವಾಗ ತಲೆಗೆ ಪೆಟ್ಟು ತಿಂದು ಆಸ್ಪತ್ರೆ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.

ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಫಿಲ್ ಹ್ಯೂಸ್ ದುರಂತ ಸಾವಿನ ನಂತರ ಫೀಲ್ಡಿಂಗ್, ಬ್ಯಾಟಿಂಗ್ ಸೇರಿದಂತೆ ಅಂಪೈರ್ ಗಳಿಗೂ ಹೆಲ್ಮೆಟ್ ಅನಿವಾರ್ಯ ಎಂಬುದು ಕ್ರಿಕೆಟರ್ಸ್ ಗೆ ಮನವರಿಕೆಯಾಗಿದೆ.

ಟೆಸ್ಟ್ ಕ್ರಿಕೆಟ್ ನ ದಂತಕತೆ ಡಾನ್ ಬ್ರಾಡ್ಮನ್ ಆವರ 99.94 ರನ್ ಸರಾಸರಿ ದಾಖಲೆಯನ್ನು ಮುರಿದಿರುವ ಆಡಂ ವೋಜ್ಸ್ ಅವರು 100.33ರನ್ ಸರಾಸರಿ ಹೊಂದಿರುವ ಆಸ್ಟ್ರೇಲಿಯಾದ ಪ್ರತಿಭಾವಂತ ಕ್ರಿಕೆಟರ್ ಆಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australian cricketer Adam Voges was taken to hospital after being struck in the head by a ball while fielding during a county game in England.
Please Wait while comments are loading...