ಬ್ರಾಡ್ಮನ್, ಸಚಿನ್ ದಾಖಲೆ ಪುಡಿಗಟ್ಟಿದ ಆಸಿಸ್ ಆಟಗಾರ

Subscribe to Oneindia Kannada

ವೆಲ್ಲಿಂಗ್ಟನ್‌, ಫೆಬ್ರವರಿ, 13: ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಮತ್ತು ದಂತಕತೆ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಆಸ್ಟ್ರೇಲಿಯಾದ ಯುವ ಆಟಗಾರ ಮುರಿದು ಹಾಕಿದ್ದಾರೆ.

ಸಚಿನ್ ಹೆಸರಿನಲ್ಲಿದ್ದ ಔಟಾಗದೇ ಅತಿ ಹೆಚ್ಚು ರನ್ ಗಳಿಕೆ ಮತ್ತು ಡಾನ್ ಬ್ರಾಡ್ಮನ್ ಅವರ ಟೆಸ್ಟ್ ಸರಾಸರಿ(99.94)ನ್ನು ಆಸ್ಟ್ರೇಲಿಯಾದ ಕ್ರಿಕೆಟರ್‌ ಆಡಮ್ ವೋಜಸ್‌ ಮುರಿದಿದ್ದಾರೆ. ಸದ್ಯ ವೋಜಸ್ ಅವರ ಸರಾಸರಿ 100.33. [ಟೆಸ್ಟ್ ಶ್ರೇಷ್ಠ ಪ್ರದರ್ಶನ: ಲಕ್ಷ್ಮಣ್ ಇನ್ನಿಂಗ್ಸ್ ಗೆ ಸ್ಥಾನ]

cricket

ಕ್ರಿಕೆಟ್‌ ಇತಿಹಾಸದಲ್ಲಿ ಸತತವಾಗಿ ಆಡಿದ ಪಂದ್ಯಗಳಲ್ಲಿ ಔಟಾಗದೇ ಉಳಿದು 500 ರನ್‌ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ವೋಜಸ್‌ ಪಾತ್ರರಾಗಿದ್ದಾರೆ. ಈ ಹಿಂದೆ ಸಚಿನ್‌ 497 ರನ್‌ ಗಳಿಸಿದ್ದು ದಾಖಲೆಯಾಗಿತ್ತು. ಡಿಸೆಂಬರ್‌ನಲ್ಲಿ ನಡೆದ ವೆಸ್ಟ್‌ ವಿಂಡೀಸ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಔಟಾಗದೇ 269, ಔಟಾಗದೇ 106 ಮತ್ತು ಇದೀಗ ನ್ಯೂಜಿಲೆಂಡ್‌ ವಿರುದ್ಧ ನಡೆಯುತ್ತಿರುವ ಟೆಸ್ಟ್‌ನಲ್ಲಿ ಔಟಗಾದೇ 176 ರನ್‌ ಗಳಿಸಿ ವೋಜಸ್‌ ಈ ದಾಖಲೆ ನಿರ್ಮಿಸಿದ್ದಾರೆ. ವೋಜಸ್‌ 123 ರನ್‌ ಮುಟ್ಟುವ ಮೂಲಕ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಮುರಿದಿದ್ದಾರೆ.[ಶೇನ್ ವಾರ್ನ್ ಆಯ್ಕೆಯ ಶ್ರೇಷ್ಠ ತಂಡಕ್ಕೆ ಗಂಗೂಲಿ ಕ್ಯಾಪ್ಟನ್]

12 ವರ್ಷಗಳ ಹಿಂದೆ ಸಚಿನ್‌ 2004 ರ ಜನವರಿ ಮತ್ತು ಮಾರ್ಚ್‌ ತಿಂಗಳ ಮಧ್ಯದಲ್ಲಿ ನಡೆದ ಪಂದ್ಯಗಳಲ್ಲಿ ಔಟಾಗದೇ 241, ಔಟಾಗದೇ 60, ಔಟಾಗದೇ 194 ಮತ್ತು ಔಟಾಗದೇ 2 ರನ್‌ ಗಳಿಸಿ ದಾಖಲೆ ಬರೆದಿದ್ದರು. ಇದಕ್ಕೂ ಮುಂಚೆ ಈ ದಾಖಲೆ ವೆಸ್ಟ್‌ ವಿಂಡೀಸ್‌ನ ಆಟಗಾರ ಗ್ಯಾರಿ ಸೋಬರ್ಸ್‌ (365) ಹೆಸರಿನಲ್ಲಿತ್ತು.

ಇದರ ಜೊತೆಗೆ ವೋಜಸ್‌ 14 ಟೆಸ್ಟ್‌ಗಳನ್ನು ಆಡುವ ಮೂಲಕ ತಮ್ಮ ಬ್ಯಾಟಿಂಗ್‌ ಸರಾಸರಿಯನ್ನು 100 ರಷ್ಟು ಮಾಡಿಕೊಂಡು ಬ್ಯಾಟಿಂಗ್‌ ದಂತಕತೆ ಆಸ್ಟ್ರೇಲಿಯಾದವರೇ ಆದ ಡಾನ್‌ ಬ್ರಾಡ್ಮನ್‌ ಅವರ ದಾಖಲೆ ಮುರಿದು ನಿಂತಿದ್ದಾರೆ. ಟೆಸ್ಟ್ ಕ್ರಿಕಟ್ ನ ಸರಾಸರಿಯಲ್ಲಿ ಸದ್ಯಕ್ಕೆ ವೋಜಸ್ ಗೆ ಮೊದಲ ಸ್ಥಾನ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australian batsman Adam Voges bettered Indian batting legend Sachin Tendulkar's 12-year-old Test record, today (February 13).v The 36-year-old Voges hit an unbeaten 176 on the 2nd day of the 1st Test against the Kiwis at Basin Reserve on Saturday to eclipse Tendulkar's mark. The 36-year-old Adam Voges scored 176 not out on the 2nd day of the 1st Test against New Zealand at Basin Reserve in Wellington to take his batting average to 100.33. Voges has 1,204 Test runs in 19 innings.
Please Wait while comments are loading...