ಯುವರಾಜ್ ಸಿಂಗ್ ಮನೆ ಗೇಟ್ ಬಿದ್ದು 8 ವರ್ಷದ ಬಾಲಕ ಸಾವು

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಚಂಡೀಗಢ, ಏಪ್ರಿಲ್ 22 : ಗಾಯದ ಸಮಸ್ಯೆಯಿಂದ ಐಪಿಲ್ ಸೀಸನ್ 9 ನಿಂದ ದೂರ ಉಳಿದಿರುವ ಟೀಂ ಇಂಡಿಯಾದ ಎಡಗೈ ಸ್ಟಾರ್ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಮತ್ತೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಅದೇನಪ್ಪಾ ಅಂದ್ರೆ, ಚಂಡೀಗಢದಲ್ಲಿರುವ ಯುವರಾಜ್ ಸಿಂಗ್ ನಿವಾಸದ ಗೇಟ್ ಆಕಸ್ಮಿಕವಾಗಿ 8 ವರ್ಷದ ಬಾಲಕನ ಮೇಲೆ ಬಿದ್ದ ಪರಿಣಾಮ ಆ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. [ಮೇ 6ರ ಹೊತ್ತಿಗೆ ಮೈದಾನಕ್ಕಿಳಿಯುವೆ : ಯುವರಾಜ್]

ಮೂಲಗಳ ಪ್ರಕಾರ, ಘಟನೆ ನಡೆದ ವೇಳೆ ಯುವರಾಜ್ ಸಿಂಗ್ ಮತ್ತು ಅವರ ತಾಯಿ ಗುರುಗ್ರಾಮದ ಮತ್ತೊಂದು ಮನೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ.

Accident at Yuvraj Singh's Chandigarh house: 8-year-old boy dies

ಚಂಡೀಗಢದಲ್ಲಿರುವ ಯುವಿ ಅವರ ಮನೆಯನ್ನು ನವೀಕರಣ ಮಾಡವ ಕಾರ್ಯ ನಡೆದಿದ್ದು, ಇತ್ತೀಚೆಗಷ್ಟೇ ಅವರ ಮನೆಯ ಗೇಟ್ ನ್ನು ಅಳವಡಿಸಲಾಗಿತ್ತು. ಈ ಘಟನೆ ಆಕಸ್ಮಿಕವಾಗಿ ನಡೆದಿದೆ ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈಗಷ್ಟೇ ಗಾಯದಿಂದ ಚೇತರಿಸಿಕೊಂಡು ಐಪಿಎಲ್ ನಲ್ಲಿ ಆಡುವ ಮಾತುಗಳನ್ನು ಆಡಿರುವ ಯುವಿಗೆ ಇಂಥ ಒಂದು ಅಪಶಕುನ ಘಟನೆ ನಡೆದು ಬೇಸರವನ್ನುಂಟು ಮಾಡಿದೆ. ವಿಶ್ವ ಟಿ20 ಟೂರ್ನಿಯಿಂದ ಔಟ್ ಆದ ಯುವರಾಜ್ ಸಿಂಗ್ ಅವರು ಗಾಯದ ಸಮಸ್ಯೆಯಿಂದ ಗುಣಮುಖರಾಗಿ ಚೇತರಿಸಿಕೊಳ್ಳುತ್ತಿದ್ದು, ಮೇ 6ರಂದು ಐಪಿಎಲ್ 9 ಟೂರ್ನಿಗೆ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 8-year-old boy dies at Yuvraj Singh's Chandigarh house, after the gate fell down on him. police probing accidental death angle
Please Wait while comments are loading...