ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಎಬಿ ಡಿ ವಿಲಿಯರ್ಸ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 12: ದಕ್ಷಿಣ ಆಫ್ರಿಕಾ ತಂಡದ ಟೆಸ್ಟ್ ನಾಯಕತ್ವದಿಂದ ಎಬಿ ಡಿ ವಿಲಿಯರ್ಸ್ ಕೆಳಗಿಳಿದಿದ್ದಾರೆ. ಮೊಣಕೈ ನೋವಿನಿಂದ ಬಳಲುತ್ತಿರುವ ಎಬಿ ಡಿ ವಿಲಿಯರ್ಸ್ ಅವರು ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದಾರೆ.

ಡಿ ವಿಲಿಯರ್ಸ್ ಬದಲಿಗೆ ನಾಯಕತ್ವ ವಹಿಸಿಕೊಂಡಿದ್ದ ಫಾಫ್ ಡು ಪ್ಲೆಸಿಸ್ ಅವರು ನಾಯಕರಾಗಿ ಮುಂದುವರೆಯುವ ಸಾಧ್ಯತೆಯಿದೆ.

AB De Villiers steps down as Test captain

'ದೇಶದ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಸಿಕ್ಕಿದ್ದು ಹೆಮ್ಮೆಯ ವಿಷಯ. ಶ್ರೀಲಂಕಾ ಸರಣಿಗೆ ನಾನು ಫಿಟ್ ಆಗುವ ಬಗ್ಗೆ ಖಾತ್ರಿಯಿಲ್ಲ. ನಾನು ಈಗಾಗಲೇ ಎರಡು ಸರಣಿಯನ್ನು ಮಿಸ್ ಮಾಡಿಕೊಂಡಿದ್ದೇನೆ. ತಂಡದ ಹಿತದೃಷ್ಟಿಯಿಂದ ಫಾಫ್ ಡು ಪ್ಲೆಸಿಸ್ ಅವರು ನಾಯಕರಾಗಿ ಮುಂದುವರೆಯುವುದು ಒಳ್ಳೆಯದು ಎಂದು ಈ ನಿರ್ಧಾರ ಕೈಗೊಂಡಿದ್ದೇನೆ' ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.

ಜುಲೈ ತಿಂಗಳಿನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಿದ್ದ ಡಿ ವಿಲಿಯರ್ಸ್ ಅವರು ಇನ್ನೂ ಗಾಯದ ಸಮಸ್ಯೆಯಿಂದ ಗುಣಮುಖರಾಗಿಲ್ಲ. ಇನ್ನೂ ಮುರ್ನಾಲ್ಕು ವಾರಗಳ ಕಾಲ ವಿಶ್ರಾಂತಿಯ ಅಗತ್ಯವಿದೆ. ಜನವರಿಯಲ್ಲಿ ಏಕದಿನ ಸರಣಿಗೆ ಫಿಟ್ ಆಗಲು ಎಬಿಡಿ ಸಿದ್ಧತೆ ನಡೆಸಿದ್ದು, ತಂಡದ ನಾಯಕನಾಗಿ ಮುನ್ನಡೆಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
AB de Villiers has stepped down as South Africa's Test captain with immediate effect and has been ruled out of the three Tests against Sri Lanka as he continues to recover from elbow surgery. De Villiers endorsed his stand-in, Faf du Plessis, to take over permanently.
Please Wait while comments are loading...