ಟೆಸ್ಟ್ ಕ್ರಿಕೆಟ್ ನಿವೃತ್ತಿ ಬಗ್ಗೆ ಎಬಿಡಿ ಹೇಳಿದ್ದೇನು?

Posted By:
Subscribe to Oneindia Kannada

ಬೆಂಗಳೂರು, ಡಿ. 29: ದಕ್ಷಿಣ ಅಫ್ರಿಕಾದ ದಕ್ಷ ಆಟಗಾರ ಎಬಿ ಡಿ ವಿಲಿಯರ್ಸ್ ಅವರು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಲಿದೆ ಎಂಬ ಸುದ್ದಿ ಹಬ್ಬಿದೆ. ಇಂಗ್ಲೆಂಡ್ ವಿರುದ್ಧ ನಡೆದಿರುವ ಟೆಸ್ಟ್ ಸರಣಿ ಮುಕ್ತಾಯದ ನಂತರ ನಿವೃತ್ತಿ ಬಗ್ಗೆ ಘೋಷಿಸಬಹುದು ಎನ್ನಲಾಗಿದೆ. ಆದರೆ, ಎಬಿಡಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬಿಡುವಿಲ್ಲದ ಕ್ರಿಕೆಟ್‌ನಿಂದಾಗಿ ಡಿವಿಲಿಯರ್ಸ್ ಬಳಲಿದ್ದು, ಕೆಲಕಾಲ ಕ್ರಿಕೆಟ್ ಜೀವನದಿಂದ ದೂರ ಉಳಿಯಲು ನಿರ್ಧಾರಿದ್ದಾರಂತೆ.
ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ದಿನಪತ್ರಿಕೆ ‘ರಾಪರ್ಟ್' ವರದಿಯನ್ನು ಉಲ್ಲೇಖಿಸಿ ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಮಾಡಿತ್ತು. ಇದಕ್ಕೆ ಬದಲಾಗಿ ಸೂಪರ್ ಸ್ಫೋರ್ಟ್ಸ್ ಗೆ ನೀಡಿದ ಸಂದರ್ಶನದಲ್ಲಿ ಎಬಿಡಿ ಅವರು ಸ್ಪಷ್ಟನೆ ನೀಡಿದ್ದಾರೆ.[ಸಚಿನ್ ಗಿಂತ ಎಬಿ ಡಿ ಜನಪ್ರಿಯತೆ ಹೆಚ್ಚಾಗಲಿದೆಯಂತೆ!]

AB de Villiers Says He Is Worn Out Might sit out some games

ಕಳೆದ ಎರಡು ಮೂರು ವರ್ಷಗಳಿಂದ ಸತತ ಕ್ರಿಕೆಟ್ ಆಡುತ್ತಿದ್ದೇನೆ. ನನಗೆ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ನನಗೆ ವಿಶ್ರಾಂತಿಯ ಅಗತ್ಯವಿದೆ. ಕ್ರಿಕೆಟ್‌ನ್ನು ಆನಂದಿಸುವುದು ನನಗೆ ಅತ್ಯಂತ ಮುಖ್ಯ. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಆಡಬೇಕೇ, ಬೇಡವೇ ಎಂಬ ಕುರಿತು ಚರ್ಚೆ ನಡೆಸುತ್ತಿರುವೆ. [ಟೆಸ್ಟ್ ದಾಖಲೆಗಿಂತ ಅಪ್ಪನಾಗುವ ಖುಷಿ ಮುಖ್ಯ: ಎಬಿಡಿ]

ಕಳೆದ ಎರಡು ಮೂರು ವರ್ಷಗಳಿಂದ ನನ್ನ ನಿವೃತ್ತಿ ಬಗ್ಗೆ ಗಾಳಿ ಸುದ್ದಿ ಹಬ್ಬುತ್ತಲೇ ಇದೆ. ಈಗ ನಾನು ಕೆಲ ಪಂದ್ಯಗಳಿಂದ ದೂರು ಉಳಿದು ವಿಶ್ರಾಂತಿ ಪಡೆಯುತ್ತೇನೆ, ಇದರಿಂದ ದೇಹ ಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದಿದ್ದಾರೆ.

31ವರ್ಷ ವಯಸ್ಸಿನ ಡಿ ವಿಲಿಯರ್ಸ್ ಅವರು ಜುಲೈ 2004 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು. ಡಿವಿಲಿಯರ್ಸ್ ಈ ವರ್ಷದ ಜುಲೈನಲ್ಲಿ ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿಯುವ ತನಕ ಸತತ 98 ಪಂದ್ಯಗಳನ್ನು ಆಡಿದ್ದರು. ಈಗ 103ನೇ ಟೆಸ್ಟ್ ಪಂದ್ಯ ಆಡುತ್ತಿರುವ ಡಿವಿಲಿಯರ್ಸ್ ಈತನಕ 23 ಪಂದ್ಯಗಳಲ್ಲಿ ವಿಕೆಟ್‌ಕೀಪಿಂಗ್ ನಡೆಸಿದ್ದಾರೆ. ಡಿವಿಲಿಯರ್ಸ್ ಇತ್ತೀಚೆಗೆ ಕೊನೆಗೊಂಡ ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಶತಕ ಸಿಡಿಸಿದ್ದರು.
ಜುಲೈ 2004 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿರುವ ಡಿವಿಲಿಯರ್ಸ್ ಈ ವರ್ಷದ ಜುಲೈನಲ್ಲಿ ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿಯುವ ತನಕ ಸತತ 98 ಪಂದ್ಯಗಳನ್ನು ಆಡಿದ್ದರು. ಇದೀಗ 103ನೇ ಟೆಸ್ಟ್ ಪಂದ್ಯ ಆಡುತ್ತಿರುವ ಡಿವಿಲಿಯರ್ಸ್ ಈತನಕ 23 ಪಂದ್ಯಗಳಲ್ಲಿ ವಿಕೆಟ್‌ಕೀಪಿಂಗ್ ನಡೆಸಿದ್ದಾರೆ.

ಪಂದ್ಯ ಇನಿಂಗ್ಸ್‌ ರನ್‌ ಗರಿಷ್ಠ ಸರಾಸರಿ ಶತಕ ಅರ್ಧಶತಕ
102 169 7,864 278 51.39 21 38
(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
South Africa's AB de Villiers said he is being worn out by the amount of cricket he's playing, although a newspaper report that he might retire from Tests after the current series against England was just "rumors."
Please Wait while comments are loading...