ಎಬಿ ಡಿ ವಿಲಿಯರ್ಸ್ ಗೆ ಸರ್ಜರಿ, ಕ್ರಿಕೆಟ್ ನಿಂದ 8 ವಾರ ದೂರ!

Posted By:
Subscribe to Oneindia Kannada

ಜೋಹಾನ್ಸ್ ಬರ್ಗ್, ಸೆ. 28: ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲು ಸಿದ್ಧವಾಗಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್‌ ಅವರು ಗಾಯಗೊಂಡಿದ್ದು, ಕ್ರಿಕೆಟ್ ಮೈದಾನದಿಂಡ 8 ವಾರಗಳ ಕಾಲ ದೂರ ಉಳಿಯಬೇಕಾಗಿದೆ.

ಎಡಗೈ ಮಣಿಕಟ್ಟಿನ ಶಸ್ತ್ರಚಿಕಿತ್ಸೆಗೆ ಎಬಿ ಡಿ ಒಳಗಾಗಬೇಕಿದೆ. ಹೀಗಾಗಿ ಇನ್ನು ಎರಡು ತಿಂಗಳ ಕಾಲ ಕ್ರಿಕೆಟ್‌ ಚಟುವಟಿಕೆಗಳಿಂದ ದೂರ ಉಳಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

AB de Villiers ruled out of Australia tour, to miss cricket for 8 weeks

ಇತ್ತೀಚೆಗೆ ನಡೆದ ಫಿಟ್ನೆಸ್ ಪರೀಕ್ಷೆ ವೇಳೆಯಲ್ಲಿ ಡಿ ವಿಲಿಯರ್ಸ್ ಗೆ ಮತ್ತೆ ಮಣಿಕಟ್ಟಿನಲ್ಲಿ ನೋವು ಕಾಣಿಸಿಕೊಂಡಿದೆ. ಹೀಗಾಗಿ ಮುಂದಿನ ವಾರ ಅವರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೂಚಿಸಲಾಗಿದೆ. ನಂತರ, ಸುಮಾರು ಎರಡು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ನಿರ್ದೇಶಿಸಿದ್ದಾರೆ ಎಂದು ತಂಡದ ಅಧಿಕಾರಿ ಮಹಮದ್‌ ಮೂಸಾಜೀ ಮಾಹಿತಿ ನೀಡಿದ್ದಾರೆ.

ಏಕದಿನ ಮಾದರಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಎಬಿ ಡಿ ವಿಲಿಯರ್ಸ್ ಅವರು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎಬಿಡಿ ಗಾಯಗೊಂಡಿರುವುದಿಂದ ತಂಡಕ್ಕೆ ದೊಡ್ಡ ಹಿನ್ನಡೆ ಎನ್ನಬಹುದು.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a massive blow to South Africa, One Day International captain and star batsman AB de Villiers has been ruled out of action for nearly 8 weeks due to an injured elbow.
Please Wait while comments are loading...