ಸಿಪಿಎಲ್ ನಲ್ಲಿ ಬಾರ್ಬಡೊಸ್ ಪರ ಎಬಿಡಿ ಬ್ಯಾಟಿಂಗ್

Posted By:
Subscribe to Oneindia Kannada

ಬ್ರಿಡ್ಜ್ ಟೌನ್, ಫೆ. 12: ದಕ್ಷಿಣ ಆಫ್ರಿಕಾ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಅವರು ಕೆರಿಬಿಯನ್

ಪ್ರೀಮಿಯರ್ ಲೀಗ್(ಸಿಪಿಎಲ್) ನಲ್ಲಿ ಮೊದಲ ಬಾರಿಗೆ ಆಡಲಿದ್ದಾರೆ ಎಂದು ಶುಕ್ರವಾರ ಸಿಪಿಎಲ್ ಅಧಿಕಾರಿಗಳು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ 2013ರಲ್ಲಿ ಈ ಸಿಪಿಎಲ್ ಟಿ-20 ಕ್ರಿಕೆಟ್ ನ್ನು ಪ್ರಾರಂಭಿಸಿತು. 2016ರಲ್ಲಿ ನಡೆಯಲಿರುವ ಸಿಪಿಎಲ್ ಟಿ-20 ನಲ್ಲಿ ದಕ್ಷಿಣ ಆಫ್ರಿಕದ ತಂಡದ ಆಟಗಾರ ಎಬಿಡಿ ವಿಲಿಯರ್ಸ್ ಬಾರ್ಬಡೊಸ್ ಟ್ರೈಡೆಂಟ್ ತಂಡದ ಪರವಾಗಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

AB de Villiers to play for Barbados Pride in CPL

ಎಬಿಡಿ ಅವರು ಟಿ-20 ಸ್ಪೆಷಲಿಸ್ಟ್ ಆಗಿದ್ದಾರೆ. ಇವರು 2004ರಲ್ಲಿ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ(ಐಪಿಎಲ್) ವಿಜಯ ಮಲ್ಯ ಅವರ ಒಡೆತನದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡುತ್ತಿದ್ದಾರೆ. ಮಲ್ಯ ಅವರು ಬಾರ್ಬಡೋಸ್ ಪ್ರೈಡ್ ತಂಡವನ್ನು ಇತ್ತೀಚೆಗೆ 2 ಮಿಲಿಯನ್ ಡಾಲರ್ ನೀಡಿ ಖರೀದಿಸಿದ ಮೇಲೆ ಎಬಿಡಿ ಆಡುವ ಸುದ್ದಿ ಹೊರ ಬಂದಿದೆ.

ದಕ್ಷಿಣ ಆಫ್ರಿಕಾ ತಂಡ ಜೂನ್ ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಆಸ್ಟ್ರೇಲಿಯಾ ಸೇರಿದಂತೆ ತ್ರಿಕೋನ ಸರಣಿಯಲ್ಲಿ ಆಡಲಿದೆ.ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಟಿ20 ಲೀಗ್ ವೇಳಾಪಟ್ಟಿ ನೋಡಿಕೊಂಡು ಸಮತೋಲನ ಕಾಯ್ದುಕೊಳ್ಳಬೇಕಿದೆ. ಬಾರ್ಬಡೋಸ್ ಪರ ಆಡಲು ಖುಷಿಯಿದೆ ಎಂದು ಎಬಿ ಡಿ ವಿಲಿಯಸ್ ಪ್ರತಿಕ್ರಿಯಿಸಿದ್ದಾರೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Africa's super star AB de Villiers is set for his first stint in the Caribbean Premier League (CPL) after signing to play for Barbados Tridents, officials have announced.
Please Wait while comments are loading...