ನಿವೃತ್ತಿ ಬಗ್ಗೆ ಎಬಿಡಿ ವಿಲಿಯರ್ಸ್ ಬಿಚ್ಚಿಟ್ಟ ಸತ್ಯವೇನು?

Posted By:
Subscribe to Oneindia Kannada

ಜೋಹನ್ಸ್ ಬರ್ಗ್, ಜ. 14: ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನೂತನ ನಾಯಕನಾಗಿ ನೇಮಕಗೊಂಡಿರುವ ಎಬಿಡಿ ವಿಲಿಯರ್ಸ್ ಅವರು ಟೆಸ್ಟ್ ಕ್ರಿಕೆಟ್ ನಿವೃತ್ತಿ ಬಗ್ಗೆ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ಹಬ್ಬಿರುವ ಸುಳ್ಳು ಸುದ್ದಿ ತಕ್ಕಮಟ್ಟಿಗೆ ನಿಜ ಈ ಬಗ್ಗೆ ನಾನು ಯೋಚಿಸಬೇಕಿದೆ ಎಂದಿದ್ದಾರೆ.

ಇಂಗ್ಲೆಂಡ್ ತಂಡದ ವಿರುದ್ಧದ ಮಿಕ್ಕ ಎರಡು ಟೆಸ್ಟ್ ಪಂದ್ಯಗಳ ಬಗ್ಗೆ ಯೋಚಿಸುತ್ತಿದ್ದೇನೆ. ‘ನಾನು ಟೆಸ್ಟ್ ವಿದಾಯ ಹೇಳುವ ಬಗ್ಗೆ ಕೆಲವರೊಂದಿಗೆ ಮಾತನಾಡಿದ್ದೆ ಮತ್ತು ಆ ವಿಷಯ ಖಂಡಿತಾ ಸೋರಿಕೆಯಾಗಿದೆ. [ಟೆಸ್ಟ್ ಕ್ರಿಕೆಟ್ ನಿವೃತ್ತಿ ಬಗ್ಗೆ ಎಬಿಡಿ ಹೇಳಿದ್ದೇನು?]

AB de Villiers confirms 'bit of truth' in retirement rumours, admits he is 'not enjoying'

ಕಳೆದ 2-3 ವರ್ಷಗಳಿಂದ ಅಲ್ಪ ಮಟ್ಟಿನ ಕ್ರಿಕೆಟ್ ಆಡುವ ಬಗ್ಗೆ ಸೂಕ್ತ ಉತ್ತರದ ಹುಡುಕಾಟದಲ್ಲಿದ್ದೇನೆ. ಸದ್ಯಕ್ಕೆ ಕ್ರಿಕೆಟ್ ಆಟ ಎಂಜಾಯ್ ಮಾಡಲಿದ್ದೇನೆ' ಎಂದು 31 ವರ್ಷ ವಯಸ್ಸಿನ ವಿಲಿಯರ್ಸ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ 4 ಟೆಸ್ಟ್ ಪಂದ್ಯಗಳ ಸರಣಿಯ 3ನೇ ಪಂದ್ಯ ಗುರುವಾರ ಜೊಹಾನ್ಸ್ ಬರ್ಗ್​ನಲ್ಲಿ ಆರಂಭವಾಗಲಿದೆ.

ಟ್ವೆಂಟಿ 20 ಲೀಗ್ ಆಟಗಾರರಿಗೆ ಹೆಚ್ಚಿನ ಹಣ ತಂದುಕೊಡಬಹುದು ಆದರೆ, ಕ್ರಿಕೆಟ್ ಮಜಾ ಸಿಗುವುದು ಟೆಸ್ಟ್ ಪಂದ್ಯದಿಂದ ಮಾತ್ರ ಎಂದಿದ್ದಾರೆ. ಆಟಗಾರರನ್ನು ಸೂಕ್ತವಾಗಿ ಎಲ್ಲಾ ಮಾದರಿಯಲ್ಲಿ ಆಡಲು ಆಗುವಂಥ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New South African captain AB de Villiers today(Jan 14) said he was fully committed to leading the team in the next two Tests against England, but confirmed there was "a bit of truth" in rumours he was considering retirement.
Please Wait while comments are loading...