ವಿರಾಟ್,,, ಈ ರೀತಿಯ ಬ್ಯಾಟಿಂಗ್ ನಿಲ್ಲಿಸಿದರೆ ಒಳ್ಳೆಯದು!

Written By:
Subscribe to Oneindia Kannada

ಬೆ೦ಗಳೂರು, ಮೇ 21: "ಪ್ರೀತಿಯ ವಿರಾಟ್ ಕೊಹ್ಲಿ,,, ನೀವು ಈ ರೀತಿ ಸುಲಭವಾಗಿ ಬ್ಯಾಟ್ ಬೀಸುವುದನ್ನು ನಿಲ್ಲಿಸಿದರೆ ಒಳ್ಳೆಯದು.. ನಿಮ್ಮ ಬ್ಯಾಟಿಂಗ್ ಅಬ್ಬರ ವಿಶ್ವದ ಎಷ್ಟೋ ಆಟಗಾರರಿಗೆ ಮುಜುಗರ ತಂದಿಡುತ್ತಿದೆ" ಹೌದು ಹೀಗೆಂದು ಹೇಳು ಟ್ವೀಟ್ ಮಾಡಿರುವುದು ಗುಜರಾತ್ ಲಯನ್ಸ್ ಬ್ಯಾಟ್ಸ್‌ಮನ್ ಆರಾನ್ ಫಿಂಚ್.

ಪಂಜಾಬ್ ವಿರುದ್ಧದ 15 ಓವರ್ ಪಂದ್ಯದಲ್ಲೂ ಶತಕ ಬಾರಿಸಿದ ಕೊಹ್ಲಿ ಆಟಕ್ಕೆ ಮೆಚ್ಚುಗೆ ಸೂಚಿಸುತ್ತಲೇ ಫಿಂಚ್ ಈ ಮಾತು ಹೇಳಿದ್ದಾರೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ವಿರಾಟ್ ಆಟಕ್ಕೆ ಬೆಚ್ಚಿ ಬೀಳದವರೇ ಇಲ್ಲ.[ವಿರಾಟ್-ಅನುಷ್ಕಾ ಬೆಸುಗೆಗೆ ಬೆಂಗಳೂರು ಸಾಕ್ಷಿ!]

cricket

ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಬ್ಯಾಟಿಂಗ್ ಕೌಶಲ್ಯವನ್ನು ಹೊಸ ಮಟ್ಟಕ್ಕೆ ಏರಿಸಿದ್ದಾರೆ. ನಾಲ್ಕು ಶತಕಗಳನ್ನು ಸಿಡಿಸಿ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸುಕೊಂಡಿದ್ದಾರೆ.[ಕೊಹ್ಲಿಯಿಂದ 4ನೇ ಶತಕ, 4 ಸಾವಿರ ರನ್ ಸರದಾರ!]

ಫಿಂಚ್ ಹೇಳುವಂತೆ ಲೀಲಾಜಾಲವಾಗಿ ಬ್ಯಾಟ್ ಬೀಸುವುದು ಸುಲಭ ಅಲ್ಲ. ಆದರೆ ವಿರಾಟ್ ಅದೆಲ್ಲವನ್ನು ಮೀರಿ ನಿಂತಿದ್ದಾರೆ. ಪ್ರತಿಯೊಂದು ಪಂದ್ಯ, ಪ್ರತಿಯೊಂದು ಮೈದಾನವೂ ತಮ್ಮದೇ ಎನ್ನುವಂತೆ ಆಡುತ್ತಿದ್ದಾರೆ. ಅವರಿಗೆ ಹೋಲಿಕೆ ಮಾಡಿದರೆ ವಿಶ್ವದ ಇತರ ಸ್ಫೋಟಕ ಆಟಗಾರರು ಸಪ್ಪೆಯಾಗಿ ಕಾಣಿಸುತ್ತಿದ್ದಾರೆ ಎಂಬ ಅರ್ಥವನ್ನು ತಿಳಿದುಕೊಳ್ಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore skipper Virat Kohli has taken batsmanship to a new level in the ongoing edition of the Indian Premier League. Taking to social micro-blogging site Twitter, Gujarat Lions batsman Aaron Finch asked Virat to stop making batting look so easy.
Please Wait while comments are loading...