ಎಂಎಸ್ ಧೋನಿಗೆ ಕ್ರಿಕೆಟ್ ಪ್ರೇಮಿ ಬರೆದ ಪತ್ರದಲ್ಲೇನಿದೆ?

Subscribe to Oneindia Kannada

ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ ವೋಲ್ಟೇಜ್ ಪಂದ್ಯ ಆರಂಭವಾಗಿದೆ. ಏಷ್ಯಾ ಕಪ್ ಟಿ-20 ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವ ಕಪ್ ಪಂದ್ಯಕ್ಕೂ ಇದು ದಿಕ್ಸೂಚಿ ಎಂದೇ ಭಾವಿಸಲಾಗಿದೆ.

ಇದೆಲ್ಲದರ ನಡುವೆ ಭಾರತದ ಕ್ರಿಕೆಟ್ ಪ್ರೇಮಿಯೊಬ್ಬರು ಟಿಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪತ್ರವೊಂದನ್ನು ಬರೆದಿದ್ದಾರೆ. ಭಾರತ ಮತ್ತು ಪಾಕ್ ನಡುವಣದ ಎಲ್ಲ ಪಂದ್ಯಗಳ ಸಾರವನ್ನು ಹೇಳುತ್ತ ಕ್ರಿಕೆಟ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದು ಪತ್ರವೋ,, ಕವನವೋ ನಿಮಗೆ ಬಿಟ್ಟಿದ್ದು .. ಸುಮ್ಮನೆ ಓದಿಕೊಂಡು ಬನ್ನಿ...[ಭಾರತ-ಪಾಕಿಸ್ತಾನ ಫೈಟ್ ಲೈವ್]

cricket

ಪ್ರೀತಿಯ ....
" ಮಹೇಂದ್ರ ಸಿಂಗ್ ಧೋನಿ ಮಹಾಶಯಾ " ... .....
ಮೊಟ್ಟ
ಮೊದಲ ಬಾರಿಗೆ ನಿನಗೆ ಪತ್ರ ಬರೆಯುತ್ತಿದ್ದೇನೆ....
ಕಥೆ
ಸ್ವಲ್ಪ ಹಿಂದಿನದು.... ತಾಳ್ಮೆಯಿಂದ ಓದು....
::::::::::::::::::::::::::::::[ಏಷ್ಯಾ ಕಪ್ ವೇಳಾಪಟ್ಟಿ ನೋಡಿ]
ನಮ್ಮ
ಕಾಲೇಜು ದಿನಗಳಲ್ಲಿ
ಭಾರತ ಪಾಕಿಸ್ತಾನದ ಪಂದ್ಯಗಳು ನಡೆಯುತ್ತಿದ್ದವು...
ಯಾರದ್ದೋ
ಮನೆಗೆ ಹೋಗಿ
ಮುಜುಗರದಿಂದ ಅವರ ಮನೆಯ ಟೀವಿಯಲ್ಲಿ
ಮ್ಯಾಚ್
ನೋಡಬೇಕಾಗುತ್ತಿತ್ತು...
ಕೊನೆಯ ಓವರುಗಳು ಇರುತ್ತವಲ್ಲ
ಅವು
ಸ್ವಲ್ಪ ಕಷ್ಟದ ಸಮಯಗಳು...
ಊಟದ ಸಮಯವಾಗಿರುತ್ತಿತ್ತು...
ಮನೆಯ ಯಜಮಾನ
ಮುಖ ಗಂಟು ಹಾಕಿಕೊಂಡಿರುತ್ತಿದ್ದ..
ಮನೆಯ ಯಜಮಾನತಿ
ಮುಖದಲ್ಲಿ
ಬಲವಂತದ ನಗು ತಂದುಕೊಂಡು
"ಊಟ ಮಾಡಿ ಹೋಗಿ" ಅನ್ನುತ್ತಿದ್ದಳು...
ನಮ್ಮ
ರೂಮುಗಳಲ್ಲಿ ಬ್ರಹ್ಮಚಾರಿಗಳ ಅಡುಗೆ....
ಪಾತ್ರ
ತೊಳೆಯುವ ಕೆಲಸದಷ್ಟೇ ಕಷ್ಟ ನಾವು ಮಾಡಿದ ಊಟ ಉಣ್ಣುವದು...
ಕೊನೆಯ
ಓವರುಗಳಲ್ಲಿ
ಅವರ
ಮನೆಯಲ್ಲಿ ಮಾಡಿದ ಅಡುಗೆ..
ಸಂಭಾರಿನ
ಪರಿಮಳ ಮೂಗಿಗೆ ಅಡರುತ್ತಿತ್ತು... !
ಇತ್ತ
ಯಾವಾಗಲೂ
ಸಿಂಗಲ್ ರನ್ ಮಾಡುವ
ಜಾವೇದ್ ಮೀಯಾಂದಾದ್
ಕೊನೆಯ ಬಾಲುಗಳಿಗೆ ಸಿಕ್ಸರ್ ಎತ್ತುತ್ತಿದ್ದ...!
ಅದ್ಯಾವನೋ
ಆಖೀಬ್ ಜಾವೇದ್ ಎನ್ನುವವ
ಅಚಾನಕ್ ಬಂದು
ಮೂವತ್ತೈದು ಬಾಲುಗಳಲ್ಲಿ ಎಪ್ಪತ್ತೈದು ರನ್ ಬಾರಿಸಿಬಿಡುತ್ತಿದ್ದ...
ಇತ್ತ
ಅಡುಗೆ ಒಗ್ಗರಣೆಗಳ ಪರಿಮಳ..
ಬಾಯಲ್ಲಿ ನೀರು ಒತ್ತರಿಸಿ ಬರುತ್ತಿದ್ದವು..
ಮೊದಲೆಲ್ಲ
ಚಂದವಾಗಿ ಬಾಲು ಮಾಡುತ್ತಿದ್ದ
ಚೇತನ್ ಶರ್ಮಾ
ಕೊನೆಯ ಓವರುಗಳನ್ನು ದುಬಾರಿ ಮಾಡಿಬಿಡುತ್ತಿದ್ದ...
ಸಿರ್ಸಿಯ
ದೊಡ್ಡಗಣಪತಿ...
ರಾಘವೇಂದ್ರ ಸ್ವಾಮಿ...
ಶ್ರೀಮಾರಿಕಾಂಬೆ ದೇವಿಯರಿಗೆ
ಹಣ್ಣು ಕಾಯಿ
ಹರಕೆ ಹೊತ್ತಿದ್ದಷ್ಟೆ ಬಂತು...
ಪ್ರಯೋಜನವಾಗುತ್ತಿರಲಿಲ್ಲ...
ದುಬೈ
ಡಾನ್
ದಾವೂದ್ ಇಬ್ರಾಹಿಮ್
ಕಪ್ಪು ಕನ್ನಡಕ ಹಾಕಿಕೊಂಡು ನಗುತ್ತಿರುವ ಫೋಟೊ
ಆಗಾಗ ತೋರಿಸುತ್ತಿದ್ದರು...
ಹೊಟ್ಟೆ
ಉರಿದು
ಬೆಂಕಿ ಕೆಂಡದಂತಾಗುತ್ತಿತ್ತು...
ಅಂಥಹ
ಅಸಾಹಯಕ ಸ್ಥಿತಿಯಲ್ಲೂ ಪಂದ್ಯಗಳನ್ನು ನೋಡುತ್ತಿದ್ದೆವು...
::::::::::::::::::::
ಸಿದ್ಧು
ಅಂತ ಒಬ್ಬ ಬ್ಯಾಟ್ಸಮನ್ ಇದ್ದ...
ಅವ
ಪಾಕಿಸ್ತಾನದ ವಿರುದ್ಧ ಫೇಲ್ ಆಗಿದ್ದೇ ಇಲ್ಲ...
ನೆಲ ಕಚ್ಚಿ ಆಡುತ್ತಿದ್ದ..
ತುಂಬಾ ಬಡಕಲು ಶರಿರದವ ಆಗಿದ್ದ...
ಆತ
ಸಿಕ್ಸರ್ ಹೊಡೆದ ಅಂದರೆ ಅಂದರೆ
ಬಾಲು
ಬ್ಯಾಟುಗಳ ಜೊತೆಯಲ್ಲಿ
ಆತನೂ ಬೌಂಡರಿಗೆ ಹಾರಿ ಹೋಗಿಬಿಡುತ್ತನೇನೋ ಅಂತ ಅನ್ನಿಸುತ್ತಿತ್ತು...
ನಂತರ
ಸೆಹ್ವಾಗ್ ಬಂದ...
ಜಾವೇದ್ ಅಖ್ತರ್.. ವಾಸೀಮ್ ಅಕ್ರಮರ
ಮುಖ
ಮುಸುಡಿಗಳನ್ನು ನೋಡದೆ
ಮನಬಂದಂತೆ ಚಚ್ಚಿ ಹಾಕಿಬಿಡುತ್ತಿದ್ದ...
ಅವನಂತೆ ಯುವರಾಜ್ ಸಿಂಗ್...!
ಸ್ವರ್ಗ ಸುಖ
ಅಂತ ಬೇರೆ ಇರಲಿಕ್ಕಿಲ್ಲ...
ಪಾಕಿಸ್ತಾನದವರಿಗೆ
ಸೋಲಿಸುವಂಥಹ ಸಮಯ ಇದೆಯಲ್ಲ...

ಜಗತ್ತಿನ ಅತ್ಯಂತ ಸುಖಮಯ ಕ್ಷಣಗಳು
ಅದ್ಯಾಕೋ ಗೊತ್ತಿಲ್ಲ....
ಪಾಕಿಸ್ತಾನದ ವಿರುದ್ಧ ಗೆಲ್ಲುವದಿದೆಯಲ್ಲ..
ನಮ್ಮ
ವೈಯಕ್ತಿಕ ಜಂಜಡಗಳನ್ನೂ ಮರೆಸಬಲ್ಲದು....
:::::::::::::::::::::::
ನೋಡಪ್ಪಾ...
ಧೋನಿ ಮಹಾಶಯ... !
ನಿನ್ನ
ಐಪಿಎಲ್ ಹಗರಣಗಳನ್ನೂ ಮರೆತುಬಿಡುತ್ತೇವೆ....
ಮ್ಯಾಚ್ ಫಿಕ್ಸಿಂಗ್
ಭಾನಗಡಿಗಳನ್ನೂ ಕ್ಷಮಿಸಿಬಿಡುತ್ತೇವೆ...

ಪಾಕಿಸ್ತಾನಿಗಳನ್ನು ಮಾತ್ರ ಬಿಡಬೇಡಪ್ಪಾ...
:::::::::::::::::::
ಪಾಕಿಸ್ತಾನದ
ಆಟಗಾರರೂ ಸಹ ನಮ್ಮ
ನಿಮ್ಮಂತೆಯೇ ಮನುಷ್ಯರು..
ಇದು ನಮಗೂ ಗೊತ್ತು...
ಆದರೆ
ಮೊನ್ನೆ
ಉಗ್ರರು ಪಾಕಿಸ್ತಾನದಿಂದ
ಬಂದು ...
ಪಠಾನ್ ಕೋಟನಲ್ಲಿ
ನಮ್ಮವರನ್ನು ಕೊಂದರಲ್ಲ...
ಇತ್ತೀಚೆಗೆ
ಕಾಶ್ಮೀರಕ್ಕೆ ಬಂದು ನಮ್ಮ ಸೈನಿಕರನ್ನು ಸಾಯಿಸಿಬಿಟ್ಟರಲ್ಲ...
ಮೈಯೆಲ್ಲ ಉರಿಯುತ್ತದೆ...
ನಮ್ಮ
ಐವತ್ತಾರು ಇಂಚಿನ ಎದೆಯ ಪ್ರಧಾನ ಮಂತ್ರಿ....
ನಮ್ಮ ರಕ್ಷಣಾ ಸಚಿವರು ...
ಇದಕ್ಕೆಲ್ಲ
ಯಾವಾಗ ಉತ್ತರ ಕೊಡುತ್ತಾರೋ ಗೊತ್ತಿಲ್ಲ....
ನನ್ನಂಥಹ
ಕೋಟ್ಯಾಂತರ ಭಾರತೀಯರು...
ನಿನ್ನ
ಮೇಲೆ ಭರವಸೆ ಇಟ್ಟು
ಮ್ಯಾಚು ನೋಡುತ್ತೇವೆ ಕಣೊ ಧೋನಿ.....!
ಪಾಕಿಸ್ತಾನದ
ವಿರುದ್ಧ ಸಂಭ್ರಮಿಸಲು ಅವಕಾಶ ಮಾಡಿಕೊಡು....
ಪಾಕಿಸ್ತಾನದ
ಬೌಲರುಗಳನ್ನು
ನಮ್ಮ ಬ್ಯಾಟ್ಸಮನಗಳು ಚಚ್ಚಿ ಹಾಕಲಿ....
ನಮ್ಮ ಬೌಲರುಗಳು
ಅವರ ಸ್ಟಂಪ್ ಕಿತ್ತೆಸೆಯಲಿ...
:::::::::::::::::
ಧೋನಿ ಮಹಾಶಯ....

ಹಿಂದಿನ ಮ್ಯಾಚುಗಳ
ಸಂದರ್ಭಗಳಲ್ಲಿ ನಿನಗೆ ಬೈಯ್ದಿದ್ದೇವೆ...
ನಿನ್ನ
ಪಾಲಿಟಿಕ್ಸಿನಿಂದಾಗಿ
ಒಂದಷ್ಟು ಒಳ್ಳೆಯ ಆಟಗಾರರು ನಿವೃತ್ತರಾದರು...
ನಿನ್ನಿಂದಾಗಿ ಮರೆಯಾದರು..
ಅದನ್ನೆಲ್ಲವನ್ನೂ ಮರೆತುಬಿಡುತ್ತೇವೆ...
ನಿನಗೆ
ನಾವು
ಬೈಯ್ದದ್ದು
ಅದನ್ನೆಲ್ಲ ಮರೆತುಬಿಡು...
ಇವತ್ತಿನ ಮ್ಯಾಚ್ ಗೆದ್ದುಕೊಡು ಮಾರಾಯನೆ.... !..(ಕೃಪೆ ವಾಟ್ಸಪ್, ಬರೆದವರಿಗೊಂದು ಧನ್ಯವಾದ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This is a open letter to Indian captain Mahendra Singh Dhoni by real cricket fan. Which reflects India-Pakistan cricket history.
Please Wait while comments are loading...