ವಿಶ್ವ ಟಿ20ಗಾಗಿ ಕ್ರಿಕೆಟ್ ಆಟದ ಗೂಗಲ್ ಡೂಡ್ಲ್

By: ರಮೇಶ್ ಬಿ
Subscribe to Oneindia Kannada

ಕೊಲ್ಕತ್ತಾ ಮಾರ್ಚ್ 07: ವಿಶೇಷ ದಿನಗಳು ಬಂದರೆ ಸದಾ ಹೊಸತನವನ್ನು ಡೂಡಲ್ ಮಾಡುತ್ತ ಬರುತ್ತಿದ್ದ ಇಂಟರ್ನೇಟ್ ಸರ್ಚ್ ಇಂಜಿನ್ ಗೂಗಲ್ ಈ ಬಾರಿ ವಿಶ್ವ ಟಿ20ಗಾಗಿ ಡೂಡ್ಲ್ ಮಾಡಿದೆ.

ಭಾರತದಲ್ಲಿ ಮಾರ್ಚ್ 08 ರಿಂದ ಆರಂಭಗೊಳ್ಳುವ ಐಸಿಸಿ ಟ್ವಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಂಗವಾಗಿ ಗೂಗಲ್ ವಿಶೇಷ ಡೂಡಲ್ ಮಾಡಿ ಎಲ್ಲರ ಗಮನ ಸೆಳೆದಿದೆ.

A Google doodle for ICC World Twenty20 2016

ಕ್ರೀಡಾಂಗಣದಲ್ಲಿ ಆಟಗಾರರು ಕ್ರಿಕೆಟ್ ಆಡುತ್ತಿರುವ ವೈಶಿಷ್ಟಮಯ ನೋಟವನ್ನು ಗೂಗಲ್ ಡೂಡಲ್ ಮಾಡಿದೆ. ಇದೇ ಮೊದಲ ಬಾರಿಗೆ ಐಸಿಸಿ ಟಿ-20 ವಿಶ್ವಕಪ್ ಕ್ರಿಕೆಟ್ ಭಾರತದಲ್ಲಿ ನಡೆಯುತ್ತಿರುವುದು ವಿಶೇಷವಾಗಿದ್ದು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮಾರ್ಚ್ 08 ರಿಂದ ಪ್ರಾರಂಭಗೊಂಡು ಸುಮಾರು ಒಂದು ತಿಂಗಳು ಕಾಲ ಈ ಟೂರ್ನಿ ನಡೆಯಲಿದೆ.

ಇನ್ನೇನು ಟೂರ್ನಿ ಪ್ರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮಂಗಳವಾರ ಮಾರ್ಚ್ 08 ನಾಗ್ಪರದಲ್ಲಿ ಗ್ರ್ಯಾಂಡ್ ಸ್ಟಾರ್ಟ್ ದೊರೆಯಲಿದೆಒಟ್ಟು ಏಳು ಮೈದಾನಗಳಲ್ಲಿ 16 ತಂಡಗಳು ಈ ಟೂರ್ನಿಯಲ್ಲಿ ಆಡಲಿದೆ. ಏಪ್ರಿಲ್ 03ರಂದು ಈಡೆನ್ ಗಾರ್ಡನ್ಸ್ ನಲ್ಲಿ ಫೈನಲ್ ನಡೆಯಲಿದೆ.

ಚೆಸ್ ಪಾನ್ ನಂತೆ ಕಾಣುವ ಬಿಳಿ ದಿರಿಸಿನಲ್ಲಿ ಅಂಪೈರ್, ನೀಲಿ, ಕೆಂಬಣ್ಣದಲ್ಲಿ ಆಟಗಾರರು ಇರುವ ಕ್ರೀಡಾಂಗಣವೊಂದರ ಪಾರ್ಶ್ವ ನೋಟ ನಿಮಗೆ ಸಿಗಲಿದೆ. ಟೂರ್ನಿಯ ಆರಂಭದಲ್ಲಿ ಜಿಂಬಾಬ್ವೆ ಹಾಗೂ ಹಾಂಗ್ ಕಾಂಗ್ ಕಾದಾಡಲಿವೆ. ನಂತರ ಸ್ಕಾಟ್ಲೆಂಡ್ ಹಾಗೂ ಅಫ್ಘಾನಿಸ್ತಾನ ಸೆಣಸಲಿವೆ (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Internet giant Google has cashed in on the World Twenty20 fever with a new colourful doodle on its home page which shows a cricket game in progress at a stadium.
Please Wait while comments are loading...