ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಕ್ಷಾ ಚಾಲಕನ ಮಗ ಕ್ರಿಕೆಟರ್ ಸಿರಾಜ್ ಕನಸು ನನಸು

By Mahesh

ಹೈದರಾಬಾದ್, ಅಕ್ಟೋಬರ್ 23: 22 ವರ್ಷ ಹರೆಯ ಮೊಹಮ್ಮದ್ ಸಿರಾಜ್ ಬಹು ಕಾಲದ ಕನಸು ನನಸಾಗಿದೆ. ಕಠಿಣ ಪರಿಶ್ರಮ, ಅವಿರತ ಸಾಧನೆಯ ಫಲವಾಗಿ ಇಂದು ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ.

ಆಟೋರಿಕ್ಷಾ ಚಾಲಕರೊಬ್ಬರ ಮಗನಾಗಿರುವ ಮೊಹಮ್ಮದ್ ಸಿರಾಜ್ ಅವರು ಐಪಿಎಲ್ ನಲ್ಲಿ ಸದ್ದು ಮಾಡಿದ ಬಳಿಕ ಈಗ ರಾಷ್ಟ್ರೀಯ ಟಿ20 ತಂಡದ ಪರ ಆಡಲು ಸಜ್ಜಾಗಿದ್ದಾರೆ.

ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯು ನ್ಯೂಜಿಲೆಂಡ್ ವಿರುದ್ಧದ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಟೀಂ ಇಂಡಿಯಾವನ್ನು ಸೋಮವಾರ ಬೆಳಗ್ಗೆ ಪ್ರಕಟಿಸಿತು. ಶ್ರೇಯಸ್ ಅಯ್ಯರ್ ಹಾಗೂ ಮೊಹಮ್ಮದ್ ಸಿರಾಜ್ ಈ ಪೈಕಿ ತಂಡದ ಹೊಸ ಮುಖಗಳಾಗಿದ್ದಾರೆ.

htag/INDvNZ?src=hash&ref_src=twsrc%5Etfw">#INDvNZ — SunRisers Hyderabad (@SunRisers) October 23, 2017

ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸಿರಾಜ್ ಗೆ 20 ಲಕ್ಷ ರು ಮೂಲಬೆಲೆ ನಿಗದಿಪಡಿಸಲಾಗಿತ್ತು. ಆದರೆ, ನಿರೀಕ್ಷೆ ಮೀರಿ ಬಿಡ್ಡಿಂಗ್ ನಡೆದು ಕೊನೆಗೆ ಸಿರಾಜ್ ಅವರು ಹೈದರಾಬಾದ್ ಪಾಲಾಗಿದ್ದರು. ಮೊಹಮ್ಮದ್ ಸಿರಾಜ್ ಈ ಬಾರಿ ಭರ್ಜರಿ 2.6 ಕೋಟಿ ರು ಗೆ ಮಾರಾಟವಾಗಿ ಸುದ್ದಿಯಾಗಿದ್ದರು.

ಶಿವಮೊಗ್ಗದಲ್ಲಿರುವ ಸಿರಾಜ್

ಶಿವಮೊಗ್ಗದಲ್ಲಿರುವ ಸಿರಾಜ್

ಸಿರಾಜ್ ಅವರ ತಂದೆ ಮುಹಮ್ಮದ್ ಗೌಸ್ ಮತ್ತು ತಾಯಿ ಶಬನಾ ಬೇಗಮ್ ಅವರು ಸಂಭ್ರಮದಲ್ಲಿ ಮುಳುಗಿದ್ದಾರೆ. ಸದ್ಯ ಕರ್ನಾಟಕದ ಶಿವಮೊಗ್ಗದಲ್ಲಿರುವ ಸಿರಾಜ್ ಅವರು ಹೈದರಾಬಾದ್ ಪರ ರಣಜಿ ಪಂದ್ಯವಾಡಲು ಸಜ್ಜಾಗುವಾಗ ಈ ಸುದ್ದಿ ಸಿಕ್ಕಿದೆ. ಈ ಬಗ್ಗೆ ನಮ್ಮ ಪ್ರತಿನಿಧಿಗೆ ಪ್ರತಿಕ್ರಿಯಿಸಿದ ಸಿರಾಜ್, 'ನನ್ನ ಕನಸು ಕೊನೆಗೂ ಈಡೇರಿದೆ, ಭಾರತ ತಂಡಕ್ಕೆ ಆಯ್ಕೆಯಾಗುವುದು ನನ್ನ ದೊಡ್ಡ ಕನಸಾಗಿತ್ತು' ಎಂದರು

ವಿವಿಎಸ್ ಲಕ್ಷ್ಮಣ್ ಮೆಂಟರ್

ವಿವಿಎಸ್ ಲಕ್ಷ್ಮಣ್ ಮೆಂಟರ್

ಐಪಿಎಲ್ ನಲ್ಲಿ ಹೈದರಾಬಾದ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಮೆಂಟರ್ ಆಗಿದ್ದರು. ಡೇವಿಡ್ ವಾರ್ನರ್ ಅವರು ನಾಯಕರಾಗಿರುವ ತಂಡದಲ್ಲಿ ಆಡಿದ ಅನುಭವ ನನಗೆ ಲಾಭ ತಂದಿದೆ. ಕೋಚ್ ಭರತ್ ಅರುಣ್ ಅವರ ಸಲಹೆ ಸೂಚನೆ ಪಾಲಿಸುತ್ತಾ ಬಂದಿದ್ದೇನೆ. ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ ನೀಡಿದದ ಪ್ರದರ್ಶನ ಹಾಗೂ ಭಾರತ ‘ಎ' ಮತ್ತು ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಸಹಕಾರಿಯಾಗಿದೆ ಎಂದರು.

ತಂದೆ ಮತ್ತು ತಾಯಿಯ ತ್ಯಾಗ

ತಂದೆ ಮತ್ತು ತಾಯಿಯ ತ್ಯಾಗ

ನನ್ನ ಈ ಸಾಧನೆಗೆ ತಂದೆ ಹಾಗೂ ತಾಯಿ ತ್ಯಾಗ, ಪ್ರೀತಿಯೇ ಕಾರಣ. ಆಟೋರಿಕ್ಷಾ ಚಾಲಕರಾಗಿದ್ದರೂ ನಮ್ಮ ಮೇಲೆ ಕುಟುಂಬದ ಕಷ್ಟ ಬೀಳದಂತೆ ನನ್ನಪ್ಪ ನೋಡಿಕೊಂಡರು. ಇದರಿಂದ ನಾನು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಲು ಸಾಧ್ಯವಾಯಿತು ಎಂದು ಸಿರಾಜ್ ಹೇಳಿದ್ದಾರೆ.

ಸಿರಾಜ್ ಅವರ ಇಲ್ಲಿ ತನಕದ ಸಾಧನೆ

ಸಿರಾಜ್ ಅವರ ಇಲ್ಲಿ ತನಕದ ಸಾಧನೆ

ಟೆನಿಸ್ ಚೆಂಡಿನಲ್ಲಿ ಕ್ರಿಕೆಟ್ ಆರಂಭಿಸಿದ ಸಿರಾಜ್ ಅವರು ವೇಗದ ಬೌಲಿಂಗ್‌ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಸ್ವಂತ ಪರಿಶ್ರಮದಿಂದ ಹೈದರಾಬಾದ್ ನ ಅಂಡರ್ -22, ಮುಷ್ತಾಕ್ ಅಲಿ, ವಿಜಯ್ ಹಝಾರೆ , ರಣಜಿ ಟ್ರೋಫಿ ತಂಡಕ್ಕೆ ಆಡಿದ ಸಾಧನೆ ಮಾಡಿದರು. ಭಾರತ ‘ಎ' ತಂಡದಲ್ಲಿ ಆಡುವ ಅವಕಾಶ ಕೂಡಾ ಪಡೆದರು. ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಟಿ20 ಆಡಿದ್ದಾರೆ. ಕಳೆದ ರಣಜಿ ಋತುವಿನಲ್ಲಿ ಹೈದರಾಬಾದ್ ಪರ 41 ವಿಕೆಟ್ ಗಳಿಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X