ಬೆಂಗಳೂರಿನ ಐಪಿಎಲ್ ಹರಾಜಿಗೆ ಸಂಪೂರ್ಣ ಗೈಡ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 17: ಇಂಡಿಯನ್ ಪ್ರೀಮಿಯರ್ ಲೀಗ್ ನ 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಬಹುನಿರೀಕ್ಷಿತ ಹರಾಜು ಪ್ರಕ್ರಿಯೆಗೆ ಸಂಪೂರ್ಣ ಗೈಡ್ ಇಲ್ಲಿದೆ...

ಯಾವ ತಂಡದಲ್ಲಿ ಯಾವ ಆಟಗಾರರು ಉಳಿದುಕೊಂಡಿದ್ದಾರೆ? | ಯಾವ ತಂಡದಿಂದ ಯಾವ ಕ್ರಿಕೆಟರ್ ಗೆ ಕೊಕ್!

ಇಂಗ್ಲೆಂಡಿನ ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್ ಹಾಗೂ ಭಾರತದ ವೇಗಿ ಇಶಾಂತ್ ಶರ್ಮ ಅವರಿಗೆ ಭರ್ಜರಿ ರೇಟ್ ನಿಗದಿಯಾಗಿದ್ದು ಗೊತ್ತೇ ಇದೆ. ಈಗ ಹರಾಜಾಗಿದೆ ಸಿದ್ಧರಾಗಿರುವ ಎಲ್ಲಾ 351 ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.[ಮಾರ್ಗನ್, ಸ್ಟೋಕ್ಸ್, ಇಶಾಂತ್ ಗೆ ಭರ್ಜರಿ ರೇಟ್]

ಒಟ್ಟು 7 ಆಟಗಾರರಿಗೆ 2 ಕೋಟಿ ರು ಮೂಲ ಬೆಲೆ ನಿಗದಿ ಮಾಡಲಾಗಿದೆ. ಕ್ರಿಸ್ ವೋಕ್ಸ್ , ಮಿಚೆಲ್ ಜಾನ್ಸನ್ ಹಾಗೂ ಶ್ರೀಲಂಕಾ ನಾಯಕ ಏಂಜೆಲೋ ಮ್ಯಾಥ್ಯೂಸ್, ವೇಗಿ ಪ್ಯಾಟ್ ಕಮಿನ್ಸ್ ಅವರು ಕೂಡಾ 2 ಕೋಟಿ ರು ಪಟ್ಟಿಯಲ್ಲಿದ್ದಾರೆ. ಫೆಬ್ರವರಿ 20ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.[ಐಪಿಎಲ್ 2017 ಸಂಪೂರ್ಣ ವೇಳಾಪಟ್ಟಿ]

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 10 ನೇ ಆವೃತ್ತಿ ಏಪ್ರಿಲ್ 5 ರಿಂದ ಮೇ14 ರ ತನಕ ನಡೆಯಲಿದೆ ಆರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇತ್ತೀಚೆಗೆ ಪ್ರಕಟಿಸಿದೆ.[ಐಪಿಎಲ್ 10: ಹರಾಜಾಗುವ 351 ಆಟಗಾರರ ಪಟ್ಟಿ]

ಅಂಕಿ ಸಂಖ್ಯೆಗಳಲ್ಲಿ ಐಪಿಎಲ್ 2017 ಹರಾಜು ಪ್ರಕ್ರಿಯೆಯ ವಿವರ ಸ್ಲೈಡ್ ಗಳಲ್ಲಿ ನೋಡಿ...

ತಂಡಗಳು ಖರ್ಚು ಮಾಡಿದ ಮೊತ್ತ

ತಂಡಗಳು ಖರ್ಚು ಮಾಡಿದ ಮೊತ್ತ

0- ಪಾಕಿಸ್ತಾನದಿಂದ ಯಾವುದೇ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ
351 - ಒಟ್ಟಾರೆ ಹರಾಜಿಗೆ ಲಭ್ಯವಾಗಿರುವ ಆಟಗಾರರ ಸಂಖ್ಯೆ.
2 ಕೋಟಿ ರು- ಈ ಬಾರಿ ಆಟಗಾರರಿಗೆ ನೀಡಿರುವ ಗರಿಷ್ಠ ಮೂಲ ಬೆಲೆ
10 ಲಕ್ಷ ರು- ಆಟಗಾರರ ಹರಾಜಿನ ಮೂಲ ಬೆಲೆ.
7- ಇಶಾಂತ್ ಶರ್ಮ, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಮಿಚೆಲ್ ಜಾನ್ಸನ್, ಇಯಾನ್ ಮಾರ್ಗನ್, ಏಂಜೆಲೋ ಮ್ಯಾಥ್ಯೂಸ್, ವೇಗಿ ಪ್ಯಾಟ್ ಕಮಿನ್ಸ್ (2 ಕೋಟಿ ರು ಮಿತಿಯಲ್ಲಿರುವ ಆಟಗಾರರು)
384.67 ಕೋಟಿ ರು - ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳು ಖರ್ಚು ಮಾಡಿದ ಮೊತ್ತ.

89- ತಂಡದಿಂದ ಹೊರ ಹಾಕಲ್ಪಟ್ಟ ಆಟಗಾರರು

89- ತಂಡದಿಂದ ಹೊರ ಹಾಕಲ್ಪಟ್ಟ ಆಟಗಾರರು

6- ಅಫ್ಘಾನಿಸ್ತಾನದಿಂದ 5 ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)
23.35 ಕೋಟಿ ರು -ತಂಡವೊಂದರ ಬಳಿ ಇರುವ ಗರಿಷ್ಠ ಮೊತ್ತ (ಕಿಂಗ್ಸ್ XI ಪಂಜಾಬ್)
89- ತಂಡದಿಂದ ಹೊರ ಹಾಕಲ್ಪಟ್ಟ ಆಟಗಾರರು
76- ಹರಾಜಿಗೆ ಸಿದ್ಧರಾಗಿರುವ (ಈ ಹಿಂದೆ ಆಡಿದ ಅನುಭವವಿರುವ) ಆಟಗಾರರು
28- ಹರಾಜಿಗೆ ಸಿದ್ಧರಾಗಿರುವ ವಿದೇಶಿ ಆಟಗಾರರು

ಆರ್ ಸಿಬಿಯಲ್ಲಿ ಹೆಚ್ಚು ವಿದೇಶಿ ಪ್ಲೇಯರ್ಸ್

ಆರ್ ಸಿಬಿಯಲ್ಲಿ ಹೆಚ್ಚು ವಿದೇಶಿ ಪ್ಲೇಯರ್ಸ್

8- ಅತಿ ಹೆಚ್ಚು ವಿದೇಶಿ ಆಟಗಾರರನ್ನು ಹೊಂದಿರುವ ತಂಡ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
9- ತಂಡವೊಂದು ಹೊಂದಬಹುದಾದ ವಿದೇಶಿ ಆಟಗಾರರ ಸಂಖ್ಯೆ
20 - ಗರಿಷ್ಠ ಪ್ರಮಾಣದಲ್ಲಿ ಆಟಗಾರರನ್ನು ಉಳಿಸಿಕೊಂಡ ತಂಡಗಳು (ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್)
54.445 ಕೋಟಿ -20 ಆಟಗಾರರನ್ನು ಉಳಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ತಂಡ ಖರ್ಚು ಮಾಡಿದ ಮೊತ್ತ
66 ಕೋಟಿ ರು- ಪ್ರತಿ ತಂಡ ಬಳಿ ಇರಬಹುದಾದ ಗರಿಷ್ಠ ಮೊತ್ತ

ಯಾವ ದೇಶದಿಂದ ಎಷ್ಟು ಮಂದಿ

ಯಾವ ದೇಶದಿಂದ ಎಷ್ಟು ಮಂದಿ

226 -ಭಾರತ
30- ಆಸ್ಟ್ರೇಲಿಯಾ
21 ತಲಾ- ಶ್ರೀಲಂಕಾ, ವೆಸ್ಟ್ ಇಂಡೀಸ್
19 - ನ್ಯೂಜಿಲೆಂಡ್
13-ದಕ್ಷಿಣ ಆಫ್ರಿಕಾ
9-ಇಂಗ್ಲೆಂಡ್
6-ಬಾಂಗ್ಲಾದೇಶ
5-ಅಫ್ಘಾನಿಸ್ತಾನ
1-ಯುನೈಟೆಡ್ ಅರಬ್ ಎಮಿರೇಟ್ಸ್
ಒಟ್ಟಾರೆ-351

ತಂಡಗಳ ಬಲಾಬಲ

ತಂಡಗಳ ಬಲಾಬಲ

ಪ್ರತಿ ತಂಡದಲ್ಲಿ 9 ವಿದೇಶಿ ಆಟಗಾರರು ಸೇರಿದಂತೆ 27 ಆಟಗಾರರನ್ನು ಹೊಂದಬಹುದು. ಯಾವ ತಂಡದಲ್ಲಿ ಎಷ್ಟು ಆಟಗಾರರನ್ನು ಹೊಂದಿದೆ ನೋಡಿ
ಡೆಲ್ಲಿ ಡೇರ್ ಡೆವಿಲ್ಸ್ - 17 (5 ವಿದೇಶಿ ಆಟಗಾರರು)
KXIP - 19 (5)
KKR - 14 (4)
MI - 20 (6)
RCB - 20 (8)
SRH - 17 (5)
RPS - 17 (5)
GL - 16 (6)

(ಒನ್ಇಂಡಿಯಾ ಸುದ್ದಿ)

.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Premier League (IPL) 2017 Players Auction will be held in Bengaluru on February 20 (Monday) with 351 cricketers set to go under the hammer.
Please Wait while comments are loading...