65 ವರ್ಷಗಳ ನಂತರ ರಣಜಿ ಫೈನಲಿಗೆ ಗುಜರಾತ್ ಪ್ರವೇಶ!

Posted By:
Subscribe to Oneindia Kannada

ನಾಗ್ಪುರ್, ಜನವರಿ 04: ವೇಗಿ ಜಸ್ಪ್ರೀತ್ ಬೂಮ್ರಾ ಅವರ ಉತ್ತಮ ಬೌಲಿಂಗ್ ನೆರವಿನಿಂದ ಗುಜರಾತ್ ತಂಡ ರಣಜಿ ಫೈನಲ್ ಪ್ರವೇಶಿಸಿದೆ. 65 ವರ್ಷಗಳ ನಂತರ ಗುಜರಾತ್ ತಂಡ ಇಂದು(ಜನವರಿ 04) ರಣಜಿ ಅಂತಿಮ ಹಣಾಹಣಿಗೆ ಅರ್ಹತೆ ಪಡೆದುಕೊಂಡ ಸಂಭ್ರಮಾಚರಣೆಯಲ್ಲಿ ತೊಡಗಿದೆ.

ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಬೂಮ್ರಾ ಅವರು 14 ಓವರ್ ಗಳಲ್ಲಿ 29ರನ್ನಿತ್ತು 6 ವಿಕೆಟ್ ಕಿತ್ತು ಭರ್ಜರಿ ಪ್ರದರ್ಶನ ನೀಡಿದರು. ಬೂಮ್ರಾ ದಾಳಿಗೆ ತತ್ತರಿಸಿದ ಜಾರ್ಖಂಡ್ ತಂಡ 123ರನ್ ಗಳಿಂದ ಸೋಲು ಕಂಡಿದೆ. 1950-51ರ ಸರಣಿ ನಂತರ ರಣಜಿ ಟ್ರೋಫಿ ಫೈನಲ್ ಗೆ ಗುಜರಾತ್ ಪ್ರವೇಶ ಪಡೆದುಕೊಂಡಿದೆ. [ಪಂದ್ಯದ ಸ್ಕೋರ್ ಕಾರ್ಡ್]

65-year wait ends: Jasprit Bumrah shines as Gujarat enter Ranji Trophy final

ಐದು ದಿನಗಳ ಸೆಮಿಫೈನಲ್ ಪಂದ್ಯದ ನಾಲ್ಕನೇ ದಿನದಂದು 235ರನ್ ಚೇಸ್ ಮಾಡುತ್ತಾ 41ಓವರ್ ಗಳಲ್ಲಿ 111 ಸ್ಕೋರಿಗೆ ಆಲೌಟ್ ಆಗಿದೆ. ಟೀಂ ಇಂಡಿಯಾದ ಮಾಜಿ ವೇಗಿ ಆರ್ ಪಿ ಸಿಂಗ್ 12 ಓವರ್ ಗಳಲ್ಲಿ 25 ರನ್ನಿತ್ತು 3 ವಿಕೆಟ್ ಕಿತ್ತರು. ಮೊದಲ ಇನ್ನಿಂಗ್ಸ್ ಮುನ್ನಡೆ ಬಿಟ್ಟು ಕೊಟ್ಟರೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಗುಜರಾತ್ ಜಯಶಾಲಿಯಾಗಿದೆ.

ಜಾರ್ಖಂಡ್ ತಂಡದ 408 ಸ್ಕೋರಿಗೆ ಉತ್ತರವಾಗಿ ಪಾರ್ಥೀವ್ ಪಟೇಲ್ ನಾಯಕತ್ವದ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 390ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಹಾರ್ದಿಕ್ ಪಟೇಲ್ ಅವರ 81ರನ್ ನೆರವಿನಿಂದ 252ಸ್ಕೋರ್ ಮಾಡಿ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರ್
ಗುಜರಾತ್ : 390 ಹಾಗೂ 81 ಓವರ್ ಗಳಲ್ಲಿ 252 ಆಲೌಟ್
ಜಾರ್ಖಂಡ್: 408 ಹಾಗೂ 41 ಓವರ್ ಗಳಲ್ಲಿ 111ಕ್ಕೆ ಆಲೌಟ್( ಬೂಮ್ರಾ 6/29, ಆರ್ ಪಿ ಸಿಂಗ್ 3/25)

ಗುಜರಾತ್ ತಂಡ ರಣಜಿ ಫೈನಲ್ ನಲ್ಲಿ ತಮಿಳುನಾಡು ಅಥವಾ ಮುಂಬೈ ತಂಡವನ್ನು ಎದುರಿಸಲಿದೆ. 251ರನ್ ಗುರಿ ಪಡೆದುಕೊಂಡಿರುವ ಮುಂಬೈ ತಂಡ ನಾಲ್ಕನೇ ದಿನದ ಅಂತ್ಯಕ್ಕೆ 5/0 ಸ್ಕೋರ್ ಮಾಡಿದೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fast bowler Jasprit Bumrah was the star as he bowled Gujarat into the final of the Ranji Trophy here today (January 4) at the Vidarbha Cricket Association (VCA) Ground.
Please Wait while comments are loading...