ತ್ರಿಶತಕ ಕ್ಲಬ್: ಸೆಹ್ವಾಗ್ ಜತೆ ಸೇರಿಕೊಂಡ ಕರುಣ್ ನಾಯರ್!

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 19: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಕರ್ನಾಟಕದ ಆಟಗಾರ ಕರುಣ್ ನಾಯರ್ ಅವರು ಭಾರತದ ಪರ ತ್ರಿಶತಕ ಸಿಡಿಸಿದ ಎರಡನೇ ಬ್ಯಾಟ್ಸ್ ಮನ್ ಆಗಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ ಇಲ್ಲಿ ತನಕ ಸೆಹ್ವಾಗ್ ಬಿಟ್ಟರೆ ಯಾವ ಭಾರತೀಯ ಆಟಗಾರ ಕೂಡಾ ತ್ರಿಶತಕ ಬಾರಿಸಿರಲಿಲ್ಲ.

ಪಂದ್ಯದ ಸ್ಕೋರ್ ಕಾರ್ಡ್

25 ವರ್ಷದ ಆಟಗಾರ ಕರುಣ್ ಅವರು ಚೊಚ್ಚಲ ತ್ರಿಶತಕ ಸಿಡಿಸಿ, ಹಲವು ದಾಖಲೆಗಳನ್ನು ಮುರಿದರು. ಅಜೇಯ 303ರನ್ (381 ಎಸೆತಗಳು, 32X4, 4X6) ಸ್ಕೋರ್ ಮಾಡಿ ಉಳಿದ ಕರುಣ್ ಸಾಧನೆ ನಂತರ 759/7ಸ್ಕೋರಿಗೆ ಭಾರತ ಡಿಕ್ಲೇರ್ ಮಾಡಿಕೊಂಡಿತು. 282 ರನ್ ಗಳ ಬೃಹತ್ ಮುನ್ನಡೆ ಪಡೆದಿದ್ದು, ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ದಿನದ ಅಂತ್ಯಕ್ಕೆ 12 ರನ್ ಗಳಿಸಿದೆ.

5th Test: Karun Nair scores triple ton (303*), joins Virender Sehwag in elite list

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತ್ರಿಶತಕ ಗಳಿಸಿದ ಕರುಣ್ ಅವರು ವೀರೇಂದ್ರ ಸೆಹ್ವಾಗ್ ನಂತರ ತ್ರಿಶಕ ಸಿಡಿಸಿದ ಭಾರತದ ಎರಡನೇ ಆಟಗಾರ ಎಂದೆನಿಸಿಕೊಂಡರು. ಇಂಗ್ಲೆಂಡಿನ ಬೌಲರ್ ಅದಿಲ್ ರಶೀದ್ ಅವರ ಎಸೆತವನ್ನು ಬೌಂಡರಿಗೆ ಕಳಿಸುವ ಮೂಲಕ ತ್ರಿಶತಕ ಸಂಭ್ರಮಾಚರಣೆ ಮಾಡಿದರು.[ಚೊಚ್ಚಲ ತ್ರಿಶತಕ ಬಾರಿಸಿದ ಕರುಣ್, ಭಾರತಕ್ಕೆ ಮುನ್ನಡೆ]

ಕರ್ನಾಟಕ ಪರ ರಣಜಿ ಆಡುವ ಕರುಣ್ ನಾಯರ್ ಅವರು ಕಳೆದ ವರ್ಷ 329ರನ್ ಚೆಚ್ಚಿದ್ದರು. ಹಾಗಾಗಿ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಇದು ಇವರ ಎರಡನೇ ತ್ರಿಶತಕ ವಾಗಿದೆ.

2016ರ ಜೂನ್ ತಿಂಗಳಿನಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಕರುಣ್ ಅವರು ನವೆಂಬರ್ 26, 2016ರಂದು ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದ್ದರು.

ಭಾರತದ ಪರ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಟಾಪ್ 6 ಆಟಗಾರರು
* 319- ವೀರೇಂದ್ರ ಸೆಹ್ವಾಗ್.
* 309- ಸೆಹ್ವಾಗ್
* 303 -ಕರುಣ್ ನಾಯರ್ (ಅಜೇಯ)
* 293- ಸೆಹ್ವಾಗ್
* 281 -ವಿವಿಎಸ್ ಲಕ್ಷ್ಮಣ್
* 270- ರಾಹುಲ್ ದ್ರಾವಿಡ್
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Young Karun Nair today (December 19) became only the 2nd Indian batsman to score a triple century in Test cricket.
Please Wait while comments are loading...