ಮನೀಶ್ ಪಾಂಡೆ ಶತಕ, ಆಸೀಸ್‌ನಲ್ಲಿ ಮೊದಲ ಗೆಲುವಿನ ಪುಳಕ

Subscribe to Oneindia Kannada

ಸಿಡ್ನಿ, ಜನವರಿ, 23: ಅಂತೂ ಭಾರತ ಕೊನೆಯ ಏಕದಿನ ಪಂದ್ಯದಲ್ಲಿ ಜಯದ ನಿಟ್ಟುಸಿರು ಬಿಟ್ಟಿದೆ. ಸದ್ಯಕ್ಕೆ ಕನ್ನಡಿಗ ಮನೀಶ್ ಪಾಂಡೆ ಭಾರತದ ಹಿರೋ. ಪಾಂಡೆ ಶತಕ, ರೋಹಿತ್-ಧವನ್ ಆಟ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಜಯ ತಂದುಕೊಟ್ಟಿದೆ.

ಆಸ್ಟ್ರೇಲಿಯಾ ನೀಡಿದ್ದ 331 ರನ್ ಗಳ ಟಾರ್ಗೆಟ್ ಬೆನ್ನು ಹತ್ತಿದ ಭಾರತಕ್ಕೆ ಧವನ್ ಮತ್ತು ರೋಹಿತ್ ಉತ್ತಮ ಆರಂಭವನ್ನೇ ನೀಡಿದರು. ಧವನ್ ವಿಕೆಟ್ ಪತನದ ನಂತರ ಆಗಮಿಸಿದ ವಿರಾಟ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ರೋಹಿತ್ ಶರ್ಮಾ ಶತಕದ ಸಮೀಪ ಎಡವಿದರು. ಆದರೆ ನಂತರ ಮನೀಶ್ ಪಾಂಡೆ ಮತ್ತು ನಾಯಕ ಎಂ ಎಸ್ ಧೋನಿ ಭಾರತವನ್ನು ಗೆಲುವಿನ ದಡ ತಲುಪಿಸಿದರು.[ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾದಿಂದ ವಿಶ್ವ ದಾಖಲೆ]
ಲೈವ್ ಸ್ಕೋರ್

cricket

ಮನೀಶ್ ಪಾಂಡೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರೆ ಸರಣಿಯಲ್ಲಿ ಎರಡು ಶತಕ ದಾಖಲಿಸಿ ಕೊನೆಯ ಪಂದ್ಯದಲ್ಲಿ 99 ರನ್ ಗೆ ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಮಿಚಲ್ ಮಾರ್ಶ್ ಶತಕದ ಕೊಡುಗೆ ಆಸ್ಟ್ರೇಲಿಯಾದ ಬೃಹತ್ ಮೊತ್ತಕ್ಕೆ ಕಾರಣವಾಗಿತ್ತು. ಭಾರತದ ಪರ ಉಮೇಶ್ ಯಾದವ್ ಎಂಟು ಓವರ್ ಎಸೆದು 82 ನೀಡಿ ದುಬಾರಿ ಎನಿಸಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Young Manish Pandey struck a brilliant unbeaten 104 as India thwarted Australia's push for a clean-sweep with a record run chase to notch up a thrilling consolation 6-wicket victory in the fifth and final one-dayer here today. Australia thus won the high-scoring series by 4-1 margin.
Please Wait while comments are loading...