500 ಟೆಸ್ಟ್ ಪಂದ್ಯಗಳು, 32 ಟೀಂ ಇಂಡಿಯಾ ಕ್ಯಾಪ್ಟನ್ಸ್

Posted By:
Subscribe to Oneindia Kannada

ಕಾನ್ಪುರ, ಸೆ. 22: ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ತನ್ನ 500ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು, ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ ವಿರಾಟ್ ಕೊಹ್ಲಿ ಪಡೆ ಚಾಲನೆ ನೀಡಿದೆ.

[ಗ್ಯಾಲರಿ: 500ನೇ ಟೆಸ್ಟ್ ಪಂದ್ಯದ ಐತಿಹಾಸಿಕ ಕ್ಷಣಗಳು]

ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ 1932ರ ಜೂನ್ ನಲ್ಲಿ ಮೊದಲ ಟೆಸ್ಟ್ ಪಂದ್ಯವಾಡಿದ ಭಾರತ, ತನ್ನ ಮೊದಲ ಪಂದ್ಯದಲ್ಲೇ ಸೋಲು ಕಂಡಿತ್ತು. ಅಲ್ಲಿಂದ ಇಲ್ಲಿ ತನಕ 499 ಟೆಸ್ಟ್ ಪಂದ್ಯಗಳನ್ನಾಡಿದ್ದು, 129 ಪಂದ್ಯಗಳಲ್ಲಿ ಗೆಲುವು ಸಾಧಿಸಿ, 157ರಲ್ಲಿ ಸೋಲು ಕಂಡಿದೆ. 212 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದೆ. 1 ಪಂದ್ಯ ಮಾತ್ರ ರೋಚಕ ಟೈನಲ್ಲಿ ಕೊನೆಗೊಂಡಿದೆ. [500ನೇ ಟೆಸ್ಟ್ : ಟೀಂ ಇಂಡಿಯಾದ ಮೈಲಿಗಲ್ಲುಗಳು]

500th Test in Kanpur: Here is full list of India's Test captains

ಕರ್ನಲ್ ಸಿಕೆ ನಾಯ್ಡು ಅವರು ಟೆಸ್ಟ್ ಕ್ರಿಕೆಟ್ ತಂಡದ ಮೊದಲ ನಾಯಕರಾಗಿ ತಂಡವನ್ನು ಮುನ್ನಡೆಸಿದರೆ, ವಿರಾಟ್ ಕೊಹ್ಲಿ 32ನೇ ಕ್ಯಾಪ್ಟನ್ ಆಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರು ಅತ್ಯಂತ ಯಶಸ್ವಿ ನಾಯಕರಾಗಿದ್ದು, 60 ಪಂದ್ಯಗಳಲ್ಲಿ 27 ಜಯದೊಂದಿಗೆ 2014ರಲ್ಲಿ ನಿವೃತ್ತಿ ಹೊಂದಿದರು. [500ನೇ ಟೆಸ್ಟ್ ಪಂದ್ಯ, ನಿಮ್ಮ ಕನಸಿನ ತಂಡ ಆಯ್ಕೆ ಮಾಡಿ!]

500ನೇ ಟೆಸ್ಟ್ ಪಂದ್ಯವಾಡುತ್ತಿರುವ ಐತಿಹಾಸಿಕ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವತಿಯಿಂದ ಈ ಹಿಂದಿನ ನಾಯಕರಾದ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಸೌರವ್ ಗಂಗೂಲಿ, ಕಪಿಲ್ ದೇವ್, ದಿಲಿಪ್ ವೆಂಗ್ ಸರ್ಕಾರ್, ಕ್ರಿಸ್ ಶ್ರೀಕಾಂತ್, ರವಿಶಾಸ್ತ್ರಿ, ಮೊಹಮ್ಮದ್ ಅಜರುದ್ದೀನ್, ಅನಿಲ್ ಕುಂಬ್ಳೆ, ಮುಂತಾದವರನ್ನು ಸನ್ಮಾನಿಸಲಾಯಿತು. [ಟೆಸ್ಟ್ ಸರಣಿ : ಯಾವ ದಾಖಲೆಗಳು ಧ್ವಂಸವಾಗಲಿವೆ?]

ಮೊದಲ ಪಂದ್ಯದಿಂದ 500ನೇ ಪಂದ್ಯದ ತನಕ ನಾಯಕರ ಪಟ್ಟಿ ಇಲ್ಲಿದೆ:
* CK Nayudu 1932-34 (4 Tests)
* Maharajah of Vizianagram 1936 (3)
* Nawab of Pataudi 1946 (3)
* Lala Amarnath 1947-52 (15)
* Vijay Hazare 1951-53 (14)
* Vinoo Mankad 1955-59 (6)
* Ghulam Ahmed 1955-59 (3)
* Polly Umrigar 1955-58 (8)
* Hemu Adhikari 1959 (4)
* Datta Gaekwad 1959 (4)
* Pankaj Roy 1959 (1)
* Gulabrai Ramchand 1959-60 (5)
* Nari Contractor 1960-62 (12)
* Mansur Ali Khan 1962-75 (40)
* Chandu Borde 1967 (1)
* Ajit Wadekar 1971-74 (16)
* Srinivas Venkataraghavan 1974-79 (5)
* Sunil Gavaskar 1976-85 (47)
* Bishan Singh Bedi 1976-78 (22)
* GR Viswanath 1980 (2)
* Kapil Dev 1983-87 (34)
* Dilip Vengsarkar 1987-89 (10)
* Ravi Shastri 1988 (1)
* Kris Srikkanth 1989 (4)
* Mohammad Azharuddin 1990-99 (47)
* Sachin Tendulkar 1996-2000 (25)
* Sourav Ganguly 2000-05 (49)
* Rahul Dravid 2003-07 (25)
* Virender Sehwag 2005-12 (4)
* Anil Kumble 2007-08 (14)
* MS Dhoni 2008 to 2014 (60)
* Virat Kohli 2014- till date (15)

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
It was a historic match here today (September 22) at Green Park Stadium as India played their 500th Test. Virat Kohli led the side as the hosts faced New Zealand in the opening game of the 3-Test rubber.
Please Wait while comments are loading...