ಅಭಿಮಾನಿಗಳ ಕನಸಿನ ತಂಡಕ್ಕೆ ಎಂಎಸ್ ಧೋನಿ ನಾಯಕ

Posted By:
Subscribe to Oneindia Kannada

ಬೆಂಗಳೂರು, ಸೆ. 26: ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಭಾರತ ತನ್ನ ಮತ್ತೊಂದು ಮೈಲಿಗಲ್ಲು ದಾಟಿದೆ. 500ನೇ ಪಂದ್ಯ ಗೆದ್ದು ಸಂಭ್ರಮಿಸಿದೆ. ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದ್ದು ತಿಳಿದಿರಬಹುದು. ಫ್ಯಾನ್ಸ್ ಆಯ್ಕೆಯ ಡ್ರೀಮ್ ಟೀಮ್ ಈಗ ಪ್ರಕಟವಾಗಿದೆ.

[ಗ್ಯಾಲರಿ: 500ನೇ ಟೆಸ್ಟ್ ಪಂದ್ಯದ ಐತಿಹಾಸಿಕ ಕ್ಷಣಗಳು]

ಯಾವ ಕ್ರಮಾಂಕದಲ್ಲಿ ಯಾವ ಆಟಗಾರ ಆಡಬೇಕು ಎಂಬುದನ್ನು ನೀವೆ ನಿರ್ಧರಿಸಿ ಸೂಚಿಸಬಹುದು.ಅಭಿಮಾನಿಗಳಿಗೆ ತಮ್ಮದೇ ಆದ ಕನಸಿನ ತಂಡ ಕಟ್ಟುವ ಬಯಕೆ ಇರುತ್ತದೆ. ಅದನ್ನು ಈ ಮೂಲಕ ತೀರಿಸಿಕೊಳ್ಳಬಹುದು ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಕರೆ ನೀಡಿತ್ತು. [500 ಟೆಸ್ಟ್ ಪಂದ್ಯಗಳು, 32 ಟೀಂ ಇಂಡಿಯಾ ಕ್ಯಾಪ್ಟನ್ಸ್]

#DreamTeam ಹ್ಯಾಶ್ ಟ್ಯಾಗ್ ಬಳಸಿ #500ನೇ ಟೆಸ್ಟ್ ಪಂದ್ಯಕ್ಕಾಗಿ ಅಭಿಮಾನಿಗಳು ಆಯ್ಕೆ ಮಾಡಿದ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ.[500ನೇ ಟೆಸ್ಟ್ : ವಿರಾಟ್ ಕೊಹ್ಲಿ ಪಡೆಗೆ ಅಮೋಘ ಜಯ]

ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಅವರನ್ನು ನಾಯಕರಾಗಿ ಅಭಿಮಾನಿಗಳು ಆಯ್ಕೆ ಮಾಡಿದ್ದಾರೆ.


90 ಟೆಸ್ಟ್ ಪಂದ್ಯವಾಡಿದ್ದ ಧೋನಿ ಅವರು 60 ಟೆಸ್ಟ್ ಪಂದ್ಯಗಳನ್ನು ಭಾರತವನ್ನು ಮುನ್ನಡೆಸಿ 27 ಗೆಲುವು ಪಡೆದುಕೊಂಡಿದ್ದರು. 2014ರಲ್ಲಿ ನಿವೃತ್ತರಾದರು.
ದ್ರಾವಿಡ್ ಗೆ ಹೆಚ್ಚಿನ ಮತಗಳು ಬಂದಿವೆ

ದ್ರಾವಿಡ್ ಗೆ ಹೆಚ್ಚಿನ ಮತಗಳು ಬಂದಿವೆ

ತಂಡದಲ್ಲಿ ಯಾರು ಇರಬೇಕು ಎಂಬ ಆಯ್ಕೆಗೆ ಶೇ 96ರಷ್ಟು ಮತ ಪಡೆದ ರಾಹುಲ್ ದ್ರಾವಿಡ್ ಸಹಜವಾಗಿ ಆಯ್ಕೆಯಾಗಿದ್ದಾರೆ. ಕಪಿಲ್ ದೇವ್ ಅವ್ರು ಶೇ 91ರಷ್ಟು ಮತ ಪಡೆದಿದ್ದಾರೆ. ಯುವರಾಜ್ ಸಿಂಗ್ 12ನೇ ಆಟಗಾರರಾಗಿ ಆಯ್ಕೆಯಾಗಿದ್ದಾರೆ. 200 ಟೆಸ್ಟ್ ಪಂದ್ಯಗಳನ್ನಾಡಿ ಅನೇಕ ದಾಖಲೆ ಮುರಿದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರು ಶೇ 73ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ.

ಸುನಿಲ್ ಗವಾಸ್ಕರ್

ಸುನಿಲ್ ಗವಾಸ್ಕರ್

ಆರಂಭಿಕ ಆಟಗಾರ : ಸುನಿಲ್ ಗವಾಸ್ಕರ್ (ಶೇ 68ರಷ್ಟು ಮತಗಳು ಬಂದಿವೆ)

ವೀರೇಂದ್ರ ಸೆಹ್ವಾಗ್

ವೀರೇಂದ್ರ ಸೆಹ್ವಾಗ್

ಆರಂಭಿಕ ಆಟಗಾರ :ವೀರೇಂದ್ರ ಸೆಹ್ವಾಗ್(ಶೇ 86 ರಷ್ಟು ಮತಗಳು ಬಂದಿವೆ).

#3 ರಾಹುಲ್ ದ್ರಾವಿಡ್

#3 ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್ ಅವರಿಗೆ ಅತಿ ಹೆಚ್ಚು ಶೇ 96ರಷ್ಟು ಮತಗಳು ಬಂದಿವೆ. ಮಧ್ಯಮ ಕ್ರಮಾಂಕದ ಆಧಾರ ಎಂದು ಅಭಿಮಾನಿಗಳು ಕರೆದಿದ್ದಾರೆ.

#4 ಸಚಿನ್ ತೆಂಡೂಲ್ಕರ್

#4 ಸಚಿನ್ ತೆಂಡೂಲ್ಕರ್

ನಾಲ್ಕನೇ ಕ್ರಮಾಂಕದಲ್ಲಿ ಅತ್ಯಂತ ಅನುಭವಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಶೇ 73ರಷ್ಟು ಮತ ಪಡೆದು ಆಯ್ಕೆಯಾಗಿದ್ದಾರೆ.

#5 ವಿವಿಎಸ್ ಲಕ್ಷ್ಮಣ್

#5 ವಿವಿಎಸ್ ಲಕ್ಷ್ಮಣ್

ಐದನೇ ಕ್ರಮಾಂಕದಲ್ಲಿ ವಿವಿಎಸ್ ಲಕ್ಷ್ಮಣ್ ಆಯ್ಕೆಯಾಗಿದ್ದು, ಶೇ 58ರಷ್ಟು ಮತ ಪಡೆದಿದ್ದಾರೆ.

#6 ಕಪಿಲ್ ದೇವ್

#6 ಕಪಿಲ್ ದೇವ್

ಶೇ91 ರಷ್ಟು ಮತ ಪಡೆದಿರುವ ಆಲ್ ರೌಂಡರ್ ಕಪಿಲ್ ದೇವ್ ಅವರು ಆರನೇ ಕ್ರಮಾಂಕದಲ್ಲಿದ್ದಾರೆ.

#7 ಎಂಎಸ್ ಧೋನಿ (ನಾಯಕ)

#7 ಎಂಎಸ್ ಧೋನಿ (ನಾಯಕ)

ಏಳನೇ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿ (ನಾಯಕ ಹಾಗೂ ವಿಕೆಟ್ ಕೀಪರ್) ಶೇ 90ರಷ್ಟು ಮತಗಳು ಸಂದಿವೆ.

#8 ರವಿಚಂದ್ರನ್ ಅಶ್ವಿನ್

#8 ರವಿಚಂದ್ರನ್ ಅಶ್ವಿನ್

ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಅತ್ಯಂತ ಕಡಿಮೆ ಮತಗಳು (ಶೇ 53) ಬಂದಿವೆ.

#9 ಅನಿಲ್ ಕುಂಬ್ಳೆ

#9 ಅನಿಲ್ ಕುಂಬ್ಳೆ

ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಶೇ 92ರಷ್ಟು ಮತ ಪಡೆದು ತಂಡಕ್ಕೆ ಆಯ್ಕೆಯಾಗಿದ್ದಾರೆ.

#10 ಜಾವಗಲ್ ಶ್ರೀನಾಥ್

#10 ಜಾವಗಲ್ ಶ್ರೀನಾಥ್

ಶೇ 78ರಷ್ಟು ಮತ ಪಡೆದು ವೇಗಿಯಾಗಿ ಜಾವಗಲ್ ಶ್ರೀನಾಥ್ ತಂಡ ಸೇರಿದ್ದಾರೆ.

#11 ಜಹೀರ್ ಖಾನ್

#11 ಜಹೀರ್ ಖಾನ್

ಎಡಗೈ ವೇಗಿ ಜಹೀರ್ ಖಾನ್ ಅವರು ಶೇ 83ರಷ್ಟು ಮತ ಪಡೆದಿದ್ದಾರೆ.

12ನೇ ಆಟಗಾರರಾಗಿ ಯುವರಾಜ್

12ನೇ ಆಟಗಾರರಾಗಿ ಯುವರಾಜ್

12ನೇ ಆಟಗಾರರಾಗಿ ಯುವರಾಜ್ ಸಿಂಗ್ ಶೇ 62ರಷ್ಟು ಮತ ಪಡೆದು ಆಯ್ಕೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's "Best Test XI" has been chosen by fans today (September 26) with Mahendra Singh Dhoni getting the nod as the team's captain.
Please Wait while comments are loading...