4ನೇ ಪಂದ್ಯ: ಧವನ್, ಕೊಹ್ಲಿ ಶತಕ ವ್ಯರ್ಥ, ಆಸೀಸ್ ಗೆ ಜಯ

Posted By:
Subscribe to Oneindia Kannada

ಕ್ಯಾನ್ ಬೆರಾ, ಜ. 20 : ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಐದು ಏಕದಿನ ಸರಣಿಯನ್ನು 0-3 ಅಂತರದಲ್ಲಿ ಸೋತಿರುವ ಟೀಂ ಇಂಡಿಯಾ ಬುಧವಾರ ನಾಲ್ಕನೇ ಪಂದ್ಯವನ್ನು ಕಳೆದುಕೊಂಡಿದೆ.

ಮನುಕಾ ಓವಲ್ ಮೈದಾನದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 50ಓವರ್ ಗಳಲ್ಲಿ 348/8 ಬೃಹತ್ ಮೊತ್ತ ಗಳಿಸಿತು. ಭಾರತ ಸಮರ್ಥವಾಗಿ ರನ್ ಚೇಸ್ ಮಾಡಿದರೂ ಕೊನೆಯಲ್ಲಿ ವಿಕೆಟ್ ಕಳೆದುಕೊಂಡು 49.2 ಓವರ್ ಗಳಲ್ಲಿ 323/10 ಗಳಿಸಿ ಸೊಲೊಪ್ಪಿಕೊಂಡಿದೆ. [ಕೊಹ್ಲಿ 25ನೇ ಶತಕ, ಮತ್ತೆ ದಾಖಲೆಗಳು ಧ್ವಂಸ]

ಲೈವ್ ಸ್ಕೋರ್ ಕಾರ್ಡ್

Aaron Finch

ಭಾರತದ ರನ್ ಚೇಸ್ : ಶಿಖರ್ ಧವನ್ 9ನೇ ಶತಕ ಹಾಗೂ ವಿರಾಟ್ ಕೊಹ್ಲಿ 25ನೇ ಶತಕ ಬಾರಿಸಿ ಉತ್ತಮವಾಗಿ ರನ್ ಚೇಸ್ ಮಾಡುತ್ತಿದ್ದಾರೆ. 41 ರನ್ ಗಳಿಸಿ ರೋಹಿತ್ ಶರ್ಮ ವಿಕೆಟ್ ಒಪ್ಪಿಸಿದ ಬಳಿಕ ಕೊಹ್ಲಿ ಹಾಗೂ ಧವನ್ ಭರ್ಜರಿ ಜೊತೆಯಾಟ ಪ್ರದರ್ಶಿಸಿದರು.

ನಾಯಕ ಧೋನಿ ಶೂನ್ಯ ಸುತ್ತಿದರೆ, ರವೀಂದ್ರ ಜಡೇಜ 24ರನ್ ಗಳಿಸಿ ಔಟಾಗದೆ ಉಳಿದರು. ಆಸೀಸ್ ಪರ ಕೇನ್ ರಿಚರ್ಡ್ಸನ್ 68/5 ಗಳಿಸಿದರೆ, ಹೇಸ್ಟಿಂಗ್ಸ್ , ಮಾರ್ಷ್ ತಲಾ 2, ಲಿಯಾನ್ 1 ವಿಕೆಟ್ ಪಡೆದು ಭಾರತದ ಗೆಲುವಿಗೆ ಬ್ರೇಕ್ ಹಾಕಿದರು.

Shikar Dhwan, Virat kohli

ಅರೋನ್ ಫಿಂಚ್ 107 (107 ಎಸೆತಗಳು, 9x4,2x6), ಸ್ಮಿತ್ 51ರನ್ (29ಎಸೆತಗಳು, 4x4,3x6) ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ 20 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ಇದ್ದ 41ರನ್ ಚೆಚ್ಚಿದರು. ಭಾರತ ಪರ ಇಶಾಂತ್ ಶರ್ಮ 77ಕ್ಕೆ4, ಉಮೇಶ್ ಯಾದವ್ 67ಕ್ಕೆ3 ವಿಕೆಟ್ ಗಳಿಸಿದರು.

ಮೂರನೇ ಪಂದ್ಯದಲ್ಲಿ ಸ್ಥಾನ ಪಡೆಯದಿದ್ದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರನ್ನು ಮತ್ತೊಮ್ಮೆ ಧೋನಿ ಹಾಗೂ ಮ್ಯಾನೇಜ್ಮೆಂಟ್ ಈ ಪಂದ್ಯಕ್ಕೂ ಪರಿಗಣಿಸಿಲ್ಲ. ಆಸ್ಟ್ರೇಲಿಯಾದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಲಾಗಿದೆ. ಟೀಂ ಇಂಡಿಯಾದಲ್ಲಿ ಬರೀಂದರ್ ಸರಣ್ ಬದಲಿಗೆ ಭುವನೇಶ್ವರ್ ಕುಮಾರ್ ತಂಡ ಸೇರಿದ್ದಾರೆ.[ಗಾಯಗೊಂಡ ರಹಾನೆ ಟೂರ್ನಿಯಿಂದ ಔಟ್?]

Bhuvaneshwar Kumar

ಎರಡನೇ ಮಗು ಹುಟ್ಟಿದ ಸಂತಸದಲ್ಲಿರುವ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ರಜೆ ಮುಗಿಸಿ ತಂಡ ಸೇರಿದ್ದಾರೆ. ಶಾನ್ ಮಾರ್ಷ್, ಸ್ಕಾಟ್ ಬೋಲ್ಯಾಂಡ್ ತಂಡದಿಂದ ಕೈಬಿಡಲಾಗಿದ್ದು, ಮಾಥನ್ ಲಿಯಾನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಪರ್ತ್, ಬ್ರಿಸ್ಬೇನ್ ಹಾಗೂ ಮೆಲ್ಬೋರ್ನ್ ಏಕದಿನ ಪಂದ್ಯ ಗೆದ್ದು ಸರಣಿ ಜಯಸಿರುವ ಆಸ್ಟ್ರೇಲಿಯಾ ಕ್ಲೀನ್ ಸ್ವಿಪ್ ಕನಸು ಕಾಣುತ್ತಿದೆ. ಕೊನೆಯ ಪಂದ್ಯ ಸಿಡ್ನಿಯಲ್ಲಿ ಜನವರಿ 26 (ಶನಿವಾರ) ರಂದು ನಡೆಯಲಿದೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Australia produced yet another scintillating batting performance led by a superb century by Aaron Finch as the home team posted 348 for eight in the 4th ODI against India here today(Jan 20).
Please Wait while comments are loading...