ರೋಹಿತ ಟೆಸ್ಟ್ ಆಡದಿದ್ದರೆ 'ಹಿತ' : ಟ್ವೀಟ್ ಅಭಿಮತ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 10: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ಭಾರತ ತಂಡ ನೋಡಿದ ಅಭಿಮಾನಿಗಳು ಒಂದು ಕ್ಷಣ ಹುಬ್ಬೇರಿಸಿದ್ದರೆ ಅಚ್ಚರಿಪಡಬೇಕಾಗಿಲ್ಲ. ರೋಹಿತ್ ಶರ್ಮ ಆಡುತ್ತಿರುವುದೇಕೆ ಎಂಬುದರ ಟ್ವೀಟ್ ಗಳು ಹರಿದಾಡತೊಡಗಿತು. ನಂತರ ರೋಹಿತ್ ಅವರ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಥರಾವರಿ ಜೋಕುಗಳು ಬರತೊಡಗಿವೆ.

ಪಂದ್ಯದ ಸ್ಕೋರ್ ಕಾರ್ಡ್

ಮಂಗಳವಾರ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡುವ ಅವಕಾಶ ಪಡೆದುಕೊಂಡ ಟೀಂ ಇಂಡಿಯಾ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. [3ನೇ ಟೆಸ್ಟ್ : ವಿಂಡೀಸ್ vs ಭಾರತ ಮೊದಲ ದಿನದ ವರದಿ]

ಗಾಯಾಳುವಾಗಿ ಚೇತರಿಸಿಕೊಂಡಿದ್ದ ಆರಂಭಿಕ ಆಟಗಾರ ಮುರಳಿ ವಿಜಯ್ ಗೆ ಆಡಲು ಅವಕಾಶ ನೀಡಿರಲಿಲ್ಲ. ಜೊತೆಗೆ ಚೇತೇಶ್ವರ್ ಪೂಜಾರಾ ಬದಲಿಗೆ ರೋಹಿತ್ ಶರ್ಮ ಆಯ್ಕೆ ಮಾಡಲಾಗಿದ್ದು ಟೀಕೆಗೆ ಗುರಿಯಾಯಿತು.

ಭೋಜನ ವಿರಾಮದ ಬಳಿಕ ರೋಹಿತ್ ಶರ್ಮ ಅವರು ಕೇವಲ 9 ರನ್ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು. ಚೊಚ್ಚಲ ಪಂದ್ಯವಾಡುತ್ತಿರುವ ಯುವ ವೇಗಿ ಅಲ್ಜರಿ ಜೋಸೆಫ್ ಅವರು ವಿರಾಟ್ ಕೊಹ್ಲಿ ವಿಕೆಟ್ ನಂತರ ರೋಹಿತ್ ಅವರನ್ನು ಪೆವಿಲಿಯನ್ ಗೆ ಕಳಿಸಿದರು. ಟ್ವೀಟ್ ಗಳ ಸಂಗ್ರಹ ಮುಂದಿದೆ ನೋಡಿ...

ಭಾರತದ ಬ್ಯಾಟಿಂಗ್ ವೈಫಲ್ಯ

ಭಾರತದ ಬ್ಯಾಟಿಂಗ್ ವೈಫಲ್ಯ

ಶಿಖರ್ ಧವನ್ ಔಟಾದ ಬಳಿಕ ಕ್ರೀಸ್ ಗೆ ಬರಬೇಕಿದ್ದ ರೋಹಿತ್ ಶರ್ಮ ತಡವಾಗಿ ಕಣಕ್ಕಿಳಿದರೂ ನಾಲ್ಕನೇ ವಿಕೆಟ್ ಆಗಿ ಉದುರಿದರು. ಭೋಜನ ವಿರಾಮ ತನಕ ಆಡಿದ್ದೇ ಸಾಧನೆ ಎನ್ನಬಹುದು. ಕೆಎಲ್ ರಾಹುಲ್ ಹಾಗೂ ಆರ್ ಅಶ್ವಿನ್ ಅಜೇಯ ಅರ್ಧಶತಕ ಇಲ್ಲದಿದ್ದರೆ ಭಾರತದ ಸ್ಕೋರ್ ತೀರಾ ಕಳಪೆ ಎನಿಸುತ್ತಿತ್ತು. 90 ಓವರ್ ಗಳಲ್ಲಿ /234ರನ್ ಸ್ಕೋರ್ ಮಾಡಿತು.

ರೋಹಿತ್- ನಿಜವಾದ ಟೆಸ್ಟ್ ಪ್ಲೇಯರ್ ಕಣ್ರಿ

ರೋಹಿತ್- ನಿಜವಾದ ಟೆಸ್ಟ್ ಪ್ಲೇಯರ್ ಕಣ್ರಿ, ರೋಹಿತ್ ಆಡುತ್ತಿದ್ದರೆ ಇತರರಿಗೂ ನಿಜವಾದ 'ಟೆಸ್ಟ್' ಶುರುವಾಗುತ್ತೆ.

ರೋಹಿತ್ ಗಿಂತ ಅಶ್ವಿನ್ ಉತ್ತಮ ರನ್ ಸರಾಸರಿ

ರೋಹಿತ್ ಗಿಂತ ಅಶ್ವಿನ್ ಉತ್ತಮ ರನ್ ಸರಾಸರಿ ಹೊಂದಿದ್ದಾರೆ.

ಮುರಳಿ ವಿಜಯ್ ಬದಲಿಗೆ ರೋಹಿತ್

ಮುರಳಿ ವಿಜಯ್ ಬದಲಿಗೆ ರೋಹಿತ್ ಆಯ್ಕೆ ಯಾವ ಕಾರಣಕ್ಕೆ ತಿಳಿಯುತ್ತಿಲ್ಲ

ರೋಹಿತ್ ಆಯ್ಕೆಯೇ ಸರಿಯಿಲ್ಲ

ವಿಂಡೀಸ್ ಟೆಸ್ಟ್ ಸರಣಿಗೆ ರೋಹಿತ್ ಆಯ್ಕೆಯೇ ಸರಿಯಿಲ್ಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Team India batsman Rohit Sharma came under sharp criticism of cricket fans after the right-handed batsman disappointed with the bat in first inning of the third Test match against West Indies on Tuesday (Aug 9).
Please Wait while comments are loading...