ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಆರ್ ಅಶ್ವಿನ್

Written By: Ramesh
Subscribe to Oneindia Kannada

ಮೊಹಾಲಿ, ನವೆಂಬರ್. 28 : ಬೆಸ್ಟ್ ಆಲ್ ರೌಂಡರ್, ಬೆಸ್ಟ್ ಬೌಲರ್ ಎನಿಸಿಕೊಂಡಿರುವ ಟೀಂ ಇಂಡಿಯಾದ ಆರ್ ಅಶ್ವಿನ್ ಅವರು ಭಾರತದ ಮಾಜಿ ನಾಯಕ ಹಾಗೂ ಆಲ್ ರೌಂಡರ್ ಕಪಿಲ್ ದೇವ್ ಅವರ ದಾಖಲೆಯ ಸರಿಗಟ್ಟಿದರು.

ಟೆಸ್ಟ್ ಕ್ರಿಕೆಟ್ ನಲ್ಲಿ ಒಂದು ವರ್ಷದಲ್ಲಿ 50 ವಿಕೆಟ್ ಪಡೆದು ಜೊತೆಗೆ 500ಗಿಂತ ಅಧಿಕ ರನ್ ಗಳಿಸಿದ ದಾಖಲೆ ಕಪಿಲ್ ದೇವ್ ಅವರ ಹೆಸರಿನಲ್ಲಿದೆ. ಈ ದಾಖಲೆಯನ್ನು ಅಶ್ವಿನ್ ಸೋಮವಾರ ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ 72 ರನ್ ಗಳಿಸಿ ಕಪಿಲ್ ದೇವ್ ಅವರ ದಾಖಲೆಯ ಸರಿ ಸಮಕ್ಕೆ ನಿಂತರು. [ಟೆಸ್ಟ್ : ವಿಶಿಷ್ಟ ದಾಖಲೆ ಬರೆದ ಅಶ್ವಿನ್- ಜಡೇಜ-ಜಯಂತ್ ಜೋಡಿ]

3rd Test: R Ashwin equals Kapil Dev's record

ಕಪಿಲ್ ದೇವ್ ಅವರು ಒಂದೇ ವರ್ಷದಲ್ಲಿ 1979 ರಲ್ಲಿ 619 ರನ್ ಜತೆಗೆ 74 ವಿಕೆಟ್ ಕಬಳಿಸಿದ್ದರು. ಇನ್ನು 1983ರಲ್ಲಿ 579 ರನ್ ಹಾಗೂ 75 ವಿಕೆಟ್ ಪಡೆದ ಭಾರತದ ಏಕೈಕ ಆಟಗಾರ ಆಗಿದ್ದಾರೆ.

ಅಶ್ವಿನ್ 2016ರ ಅವಧಿಯಲ್ಲಿ 530 ರನ್ 56 ವಿಕೆಟ್ ಪಡೆದು ಒಂದೇ ವರ್ಷದಲ್ಲಿ 50 ವಿಕೆಟ್ ಪಡೆದು ಜೊತೆಗೆ 500ಗಿಂತ ಅಧಿಕ ರನ್ ಗಳಿಸಿ ದಾಖಲೆ ಮಾಡಿದ ಎರಡನೇ ಆಟಗಾರ ಎನಿಸಿಕೊಂಡರು.

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's star spinner Ravichandran Ashwin has matched former captain and all-rounder Kapil Dev's record in the ongoing 3rd Test against England here at IS Bindra Stadium.
Please Wait while comments are loading...