3ನೇ ಟೆಸ್ಟ್ : ಮ್ಯಾಥ್ಯೂಸ್, ಚಂಡಿಮಾಲ್ ಭರ್ಜರಿ ಶತಕ, ಲಂಕಾ 356/9

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 04: ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಂದು ಶ್ರೀಲಂಕಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ. ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಸೋಮವಾರದಂದು ಏಂಜೆಲೋ ಮ್ಯಾಥ್ಯೂಸ್ ಹಾಗೂ ನಾಯಕ ಚಂಡಿಮಾಲ್ ಭರ್ಜರಿ ಶತಕ ಸಿಡಿಸಿದ್ದಾರೆ.

ಸ್ಕೋರ್ ಕಾರ್ಡ್

ವಿರಾಟ್ ಕೊಹ್ಲಿ ದ್ವಿಶತಕ(243ರನ್) ಹಾಗೂ ಮುರಳಿ ವಿಜಯ್(155) ಶತಕಗಳ ನೆರವಿನಿಂದ ಮೊದಲ ಇನ್ನಿಂಗ್ಸ್ ನಲ್ಲಿ 536/7 ಸ್ಕೋರ್ ಮಾಡಿ ಡಿಕ್ಲೇರ್ ಮಾಡಿಕೊಂಡಿತ್ತು. ಎರಡನೇ ದಿನದ ಅಂತ್ಯಕ್ಕೆ ಆರಂಭಿಕ ಆಘಾತ ಅನುಭವಿಸಿದ್ದ ಶ್ರೀಲಂಕಾ ನಂತರ ಚೇತರಿಸಿಕೊಂಡು ಉತ್ತಮ ಮೊತ್ತ ಕಲೆ ಹಾಕುತ್ತಿದೆ.

Mathews

ನಾಯಕನಾಗಿ ಹೆಚ್ಚು ದ್ವಿಶತಕ: ಲಾರಾ ದಾಖಲೆ ಮುರಿದ ಕೊಹ್ಲಿ

ಕರುಣಾರತ್ನೆ ಅವರನ್ನು ಶಮಿ ಶೂನ್ಯಕ್ಕೆ ಔಟ್ ಮಾಡಿದ ಬಳಿಕ, ಪೆರೆರಾ 42ರನ್ ಗಳಿಸಿ ಜಡೇಜಾ ಅವರ ಎಲ್ ಬಿ ಬಲೆಗೆ ಬಿದ್ದರು. ಧನಂಜಯ ಡಿ ಸಿಲ್ವಾ 1 ರನ್ ಗಳಿಸಿ ಇಶಾಂತ್ ಶರ್ಮ ಗೆ ವಿಕೆಟ್ ಒಪ್ಪಿಸಿದರು.

ಏಂಜೆಲೋ ಮ್ಯಾಥ್ಯೂಸ್ ಅವರು 111ರನ್(14 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ದಿನೇಶ್ ಚಂಡಿಮಾಲ್ 147ರನ್ (19 ಬೌಂಡರಿ,1 ಸಿಕ್ಸರ್) ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಆದರೆ, ದಿನದ ಅಂತ್ಯದಲ್ಲಿ ತ್ವರಿತಗತಿಯಲ್ಲಿ ವಿಕೆಟ್ ಕಳೆದುಕೊಂಡ ಶ್ರೀಲಂಕಾ 130ಓವರ್ ಗಳಲ್ಲಿ 356/9 ಸ್ಕೋರ್ ಮಾಡಿದೆ. ಭಾರತದ ಪರ ಆರ್ ಅಶ್ವಿನ್ 3 ವಿಕೆಟ್, ಶಮಿ, ಇಶಾಂತ್, ಜಡೇಜ ತಲಾ 2 ವಿಕೆಟ್ ಗಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India will be keen to put a quick end to Sri Lankan innings after taking three wickets the previous day as the third Test enters the third day at Ferozeshah Kotla on Monday (December 4).
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ