ಆರ್ ಅಶ್ವಿನ್- ಸಹಾ ಸಕತ್ ಶತಕ, ಭಾರತ ಸುಸ್ಥಿತಿಗೆ

Posted By:
Subscribe to Oneindia Kannada

ಗ್ರಾಸ್ ಐಸ್ಲೆ, ಆಗಸ್ಟ್ 10: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಆರ್ ಅಶ್ವಿನ್ ಹಾಗೂ ವೃದ್ಧಿಮಾನ್ ಸಹಾ ಅಮೋಘ ಶತಕ ಬಾರಿಸಿದ್ದಾರೆ. ಅಶ್ವಿನ್ ಹಾಗೂ ವೃದ್ಧಿಮಾನ್ ದಾಖಲೆಯ ಜೊತೆಯಾಟದ ನೆರವಿನಿಂದ ಡರೆನ್ ಸಾಮಿ ಸ್ಟೇಡಿಯಂನಲ್ಲಿ ಬುಧವಾರ ವಿಂಡೀಸ್ ವಿರುದ್ಧ ಭಾರತ ಸುಸ್ಥಿತಿ ತಲುಪಿದರೂ 129.4 ಓವರ್ ಗಳಲ್ಲಿ 353 ಸ್ಕೋರಿಗೆ ಆಲೌಟ್ ಆಗಿದೆ.

ಪಂದ್ಯದ ಸ್ಕೋರ್ ಕಾರ್ಡ್ | ಮೊದಲ ದಿನದ ಆಟದ ವರದಿ

R Ashwin

ಭೋಜನ ವಿರಾಮದ ನಂತರ ಆರ್ ಅಶ್ವಿನ್ ಅವರು ತಮ್ಮ ವೃತ್ತಿ ಬದುಕಿನ ನಾಲ್ಕನೇ ಟೆಸ್ಟ್ ಶತಕ ಬಾರಿಸಿದರು. ಅದು ಕೂಡಾ ಸಿಕ್ಸ್ ಎತ್ತಿ ಶತಕ ಪೂರೈಸಿದರು.

ಇನ್ನೊಂದೆಡೆ ವೃದ್ಧಿಮಾನ್ ಸಹಾ ಅವರು ಚೊಚ್ಚಲ ಶತಕ ಗಳಿಸಿ ಸಂಭ್ರಮಿಸಿದರು. ವಿಕೆಟ್ ಕೀಪರ್ ಸಹಾ 104 ರನ್(13 ಬೌಂಡರಿ) ಗಳಿಸಿ ಜೋಸೆಫ್ ಗೆ ವಿಕೆಟ್ ಒಪ್ಪಿಸಿದರು. [ರೋಹಿತ ಟೆಸ್ಟ್ ಆಡದಿದ್ದರೆ 'ಹಿತ' : ಟ್ವೀಟ್ ಅಭಿಮತ]

Saha

ಅಶ್ವಿನ್ ಕೂಡಾ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಇದ್ದ 118 ರನ್ ಗಳಿಸಿ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. ಜಡೇಜ ಕೇವಲ 6 ರನ್ ಗಳಿಸಿದರು.

ಮೊದಲ ದಿನದ ಅಂತ್ಯಕ್ಕೆ ಭಾರತ 234/5 ಸ್ಕೋರ್ ಮಾಡಿತ್ತು. ಅಶ್ವಿನ್ 75 ಹಾಗೂ ಸಹಾ 46 ರನ್ ಗಳಿಸಿದ್ದರು. ಎರಡನೇ ದಿನದ ಭೋಜನ ವಿರಾಮದ ವೇಳೆಗೆ ಅಶ್ವಿನ್ 99 ರನ್ ಹಾಗೂ ಸಹಾ 93 ರನ್ ಗಳಿಸಿ 316/6 ಮೊತ್ತಕ್ಕೇರಿಸಿದರು. ಅಶ್ವಿನ್ ಹಾಗೂ ಸಹಾ 6 ನೇ ವಿಕೆಟ್ ಗೆ 65.3 ಓವರ್ ಗಳಲ್ಲಿ 200 ಪ್ಲಸ್ ರನ್ ಜೊತೆಯಾಟ ಸೇರಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Day 2 report: R Ashwin smashed his Test career's fourth Test century, all coming against West Indies, with a six. His partner at the other end, Saha also slammed his maiden Test hundred as India continued piling runs against West Indies bowler.
Please Wait while comments are loading...