3ನೇ ಟೆಸ್ಟ್ : ವಿಂಡೀಸ್ ವಿರುದ್ಧ ಭಾರತ ಮೊದಲು ಬ್ಯಾಟಿಂಗ್

Posted By:
Subscribe to Oneindia Kannada

ಗ್ರಾಸ್ ಇಸ್ಲೆ (ಸೈಂಟ್ ಲೂಸಿಯಾ), ಆಗಸ್ಟ್ 9: ಪ್ರವಾಸಿ ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ನಾಯಕ ಜಾಸನ್ ಹೋಲ್ಡರ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಡರೇನ್ ಸಾಮಿ ಸ್ಟೇಡಿಯಂನಲ್ಲಿ ನಡೆದಿರುವ ಈ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿದ್ದು, ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿದೆ.

ಪಂದ್ಯದ ಸ್ಕೋರ್ ಕಾರ್ಡ್ | ಸಾಮಿ ಬದಲಿಗೆ ಬ್ರಥ್ ವೈಟ್ ನಾಯಕ

ಮೊದಲ ದಿನದ ಭೋಜನ ವಿರಾಮದ ವೇಳೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಅರ್ಧಶತಕ ಗಳಿಸಿದ ಕೆಎಲ್ ರಾಹುಲ್ ಅವರ ವಿಕೆಟ್ ಪಡೆಯುವಲ್ಲಿ ವಿಂಡೀಸ್ ಬೌಲರ್ ಯಶಸ್ವಿಯಾದರು. ಭೋಜನ ವಿರಾಮದ ವೇಳೆಗೆ ಸ್ಕೋರ್ 87/3.

Shikhar dhawan and KL Rahul

ಭೋಜನ ವಿರಾಮದ ನಂತರ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಕೆಎಲ್ ರಾಹುಲ್ ಅರ್ಧಶತಕ ಗಳಿಸಿ ಔಟಾಗಿದ್ದಾರೆ.

ಎರಡನೇ ಟೆಸ್ಟ್ ಪಂದ್ಯಕ್ಕೆ ಹೋಲಿಸಿ ಎರಡು ತಂಡಗಳಲ್ಲೂ ಬದಲಾವಣೆ ಮಾಡಲಾಗಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್ ಅವರು ಮೂರನೇ ಪಂದ್ಯದಲ್ಲೂ ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದಿದ್ದಾರೆ.

3rd Test: West Indies win toss, invite India to bat first

ಆದರೆ, ಇನ್ನೊಂದು ತುದಿಯಲ್ಲಿ ಶಿಖರ್ ಧವನ್ ಅವರು 1 ರನ್ ಗಳಿಸಿ ಔಟಾದರೆ, ನಾಯಕ ವಿರಾಟ್ ಕೊಹ್ಲಿ ಅವರು 3 ರನ್ ಗಳಿಸಿ ಯುವ ಬೌಲರ್ ಜೋಸೆಫ್ ಗೆ ವಿಕೆಟ್ ಒಪ್ಪಿಸಿದರು.
ಭಾರತ : ಶಿಖರ್ ಧವನ್, ಲೋಕೇಶ್ ರಾಹುಲ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೇಜ, ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್

ವೆಸ್ಟ್ ಇಂಡೀಸ್: ಕ್ರೆಗ್ ಬ್ರಥ್ ವೈಟ್, ಲಿಯಾನ್ ಜಾನ್ಸನ್, ಡರೇನ್ ಬ್ರಾವೋ, ಮರ್ಲಾನ್ ಸ್ಯಾಮುಯಲ್ಸ್, ಜೆರ್ಮೈನ್ ಬ್ಲಾಕ್ ವುಡ್, ರೊಸ್ಟನ್ ಚೇಸ್, ಶೇನ್ ಡೋರಿಚ್ (ವಿಕೆಟ್ ಕೀಪರ್), ಜಾಸನ್ ಹೋಲ್ಡರ್ (ನಾಯಕ), ಮಿಗುಯಲ್ ಕಮಿನ್ಸ್, ಅಲ್ಜರಿ ಜೋಸೆಫ್, ಶಾನನ್ ಗ್ಯಾಬ್ರಿಯಲ್ (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Put in to bat, India made 87 for three wickets on Tuesday in the third Test against the West Indies during the pre-lunch session at the Darren Sammy National Cricket Stadium here.
Please Wait while comments are loading...