3ನೇ ಟೆಸ್ಟ್: ಮೊದಲ ದಿನದಂತ್ಯಕ್ಕೆ ಇಂಗ್ಲೆಂಡ್ 268ಕ್ಕೆ 8

Written By: Ramesh
Subscribe to Oneindia Kannada

ಮೊಹಾಲಿ, ನವೆಂಬರ್. 26 : ಪ್ರವಾಸಿ ಇಂಗ್ಲೆಂಡ್ ತಂಡ 3ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ವಿರುದ್ಧ ಮೊದಲ ದಿನದಂತ್ಯಕ್ಕೆ ಪ್ರಮುಖ 8 ವಿಕೆಟ್ ಕಳೆದುಕೊಂಡು 268 ರನ್ ಗಳಿಸಿ ಭಾನುವಾರ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಆದೀಲ್ ರಶೀದ್ ಮತ್ತು ಗರೇತ್ ಬ್ಯಾಟಿ ಕ್ರೀಸ್ ನಲ್ಲಿದ್ದಾರೆ.

ಮೊಹಾಲಿಯ ಬಿಂದ್ರಾ ಮೈದಾನದಲ್ಲಿ ಶನಿವಾರ ಆರಂಭವಾಗಿರುವ 3ನೇ ಟೆಸ್ಟ್ ಪಂದ್ಯದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಜಾನಿ ಬೇರ್ಸ್ಟೋ 89(177) ರನ್ ಗಳಿಸಿ ತಂಡಕ್ಕೆ ಆಸರೆಯಾದರು.

3rd Test, Day 1: England reach 268/8 at stumps

6ನೇ ವಿಕೆಟ್ ಗೆ ಜಾನಿ ಬೇರ್ಸ್ಟೋ ಮತ್ತು ಬಟ್ಲರ್ ಜೋಡಿ 69 ರನ್ ಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಇದರಿಂದ ಇಂಗ್ಲೆಂಡ್ 250 ರ ಗಡಿ ದಾಟಲು ಶಕ್ತವಾಯಿತು.

ಅರ್ಧಶತಕ ಗಳಿಸಿ ಉತ್ತಮ ಆಟವಾಡುತಿದ್ದ ಜಾನಿ ಬೇರ್ಸ್ಟೋ ಅವರನ್ನು ಸ್ಪಿನ್ನರ್ ಜಯಂತ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು.

ಇಂಗ್ಲೆಂಡ್ ಪರ ಜಾನಿ ಬೇರ್ಸ್ಟೋ 89, ಬೆನ್ ಸ್ಟೋಕ್ಸ್ 29, ಬಟ್ಲರ್ 43 ರನ್ ಗಳಿಸಿ ಔಟ್ ಆಗಿದ್ದಾರೆ. ರಶೀದ್ 4, ಬ್ಯಾಟಿ ೦ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇನ್ನು ಟೀಂ ಇಂಡಿಯಾ ಪರ ಜಯಂತ್ ಯಾದವ್ 49ಕ್ಕೆ2, ರವೀಂದ್ರ ಜಡೇಜ 56ಕ್ಕೆ2, ಉಮೇಶ್ ಯಾದವ್ 2, ಅಶ್ವಿನ್ 1, ಶಮಿ 1 ವಿಕೆಟ್ ಪಡೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Wicketkeeper-batsman Jonny Bairstow (89) saved England's blushes as the visitors reached 268/8 at stumps on the opening day of the third Test against India at the Punjab Cricket Association (PCA) I.S. Bindra Stadium here on Saturday.
Please Wait while comments are loading...