ಅಶ್ವಿನ್ ಮ್ಯಾಜಿಕ್, ಟೀಂ ಇಂಡಿಯಾ ಹಿಡಿತದಲ್ಲಿ 3ನೇ ಟೆಸ್ಟ್

Written By: Ramesh
Subscribe to Oneindia Kannada

ಮೊಹಾಲಿ, ನವೆಂಬರ್. 28 : 72 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ಟೀಂ ಇಂಡಿಯಾದ ಆಲ್ ರೌಂಡರ್ ಆರ್ ಅಶ್ವಿನ್ ಬೌಲಿಂಗ್ ನಲ್ಲಿ ಮೋಡಿ ಮಾಡಿದ್ದಾರೆ. ಅಶ್ವಿನ್ 19 ರನ್ ಗಳಿಗೆ 3 ವಿಕೆಟ್ ಪಡೆದರು.

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಸೋಮವಾರ 3ನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್ 2ನೇ ಇನ್ನಿಂಗ್ಸ್ ನಲ್ಲಿ 78ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನು 2 ದಿನದ ಆಟ ಬಾಕಿ ಇದ್ದು. ಭಾರತಕ್ಕೆ ಗೆಲ್ಲಲು ಇನ್ನು 6 ವಿಕೆಟ್ ಗಳ ಅವಶ್ಯವಿದೆ.

India-England 3rd Test, Day 3: Ashwin and Jadeja put India in control

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 417 ರನ್ ಗಳಿಗೆ 134 ರನ್ ಮುನ್ನಡೆ ಕಾಯ್ದುಕೊಂಡಿತ್ತು. 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಅಶ್ವಿನ್ ಸ್ಪಿನ್ ಮೋಡಿಗೆ ಆಂಗ್ಲ ಬ್ಯಾಟ್ಸ್ ಮನ್ ಗಳು ತತ್ತರಿಸಿದರು.

ಕುಕ್, ಸ್ಟೋಕ್ಸ್, ಅಲಿ ಅವರನ್ನು ಅಶ್ವಿನ್ ಪೆವಿಲಿಯನ್ ಗೆ ಕಳುಹಿಸಿದರು. ಇನ್ನು ಜಯಂತ್ ಬೈರ್ಸ್ಟೋವ್ ಅವರ ವಿಕೆಟ್ ಪಡೆದರು.

ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 417 ರನ್ ಗಳಿಗೆ ಸರ್ವಪತನ ಕಂಡಿದೆ. ಇದರಿಂದ 134 ರನ್ ಗಳ ಮುನ್ನಡೆ ಸಾಧಿಸಿತು.

ರವೀಂದ್ರ ಜಡೇಜ 90 ರನ್ ಗಳಿಸಿ 10 ರನ್ ಗಳಿಂದ ಶತಕ ವಂಚಿತರಾದರು. ಇನ್ನು ಜಯಂತ್ ಯಾದವ್(55) ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಅರ್ಧಶತಕ ಪೂರೈಸಿದರು. ಇಂಗ್ಲೆಂಡ್ ಪರ ಸ್ಟೋಕ್ಸ್ 5 ರಶೀದ್ 4 ವಿಕೆಟ್ ಪಡೆದರು.

2ನೇ ದಿನ ಭಾನುವಾರ ಬಾರತ 204ಕ್ಕೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 7ನೇ ವಿಕೆಟ್ ಗೆ ಜೊತೆಯಾದ ಅಶ್ವಿನ್ ಹಾಗೂ ಜಡೇಜ ಜೋಡಿ ತಂಡಕ್ಕೆ ಬರೋಬ್ಬರಿ 88 ರನ್ ಕೊಡುಗೆ ನೀಡಿ ಆಸರೆಯಾದರು.

72 ನರ್ ಗಳಿಸಿ ಉತ್ತಮ ಆಟವಾಡುತಿದ್ದ ಅಶ್ವಿನ್ ಸ್ಟೋಕ್ಸ್ ಅವರ ಬೌಲಿಂಗ್ ನಲ್ಲಿ ಬಟ್ಲರ್ ಗೆ ಕ್ಯಾಚ್ ನೀಡಿ ಔಟ್ ಆದರು.ಇದರಿಂದ ಭಾರತ ಊಟದ ವಿರಾಮ ವೇಳೆಗೆ 7 ವಿಕೆಟ್ ಕಳೆದುಕೊಂಡು 354 ರನ್ ಗಳಸಿ 71 ರನ್ ಗಳ ಮುನ್ನಡೆ ಸಾಧಿಸಿದೆ.

ಭಾರತ 2ನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 271 ರನ್ ಗಳಿಸಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 283 ರನ್ ಗಳಿಗೆ ಸರ್ವಪತನ ಕಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Star Indian all-rounder Ravichandran Ashwin kept his team firmly on course for yet another comprehensive victory, outclassing England on all counts here at the end of the 3rd day's play in the third Test.
Please Wait while comments are loading...