ಕೋಚ್ ಕುಂಬ್ಳೆಗೆ ಮೊದಲ ಟೆಸ್ಟ್ ಸರಣಿ ಗೆದ್ದ ಸಂಭ್ರಮ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 14: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ವಿರಾಟ್ ಕೊಹ್ಲಿ ಪಡೆ 237 ರನ್ ಗಳ ಅಂತರದಿಂದ ಗೆದ್ದುಕೊಂಡಿದೆ.

ಪಂದ್ಯದ ಸ್ಕೋರ್ ಕಾರ್ಡ್

ಈ ಮೂಲಕ ನಾಯಕ ಕೊಹ್ಲಿ ಹಾಗೂ ಕೋಚ್ ಕುಂಬ್ಳೆ ಅವರಿಗೆ ಮೊದಲ ಟೆಸ್ಟ್ ಸರಣಿ ಸಂಭ್ರಮದ ಅವಕಾಶ ಸಿಕ್ಕಿದೆ. ನಾಲ್ಕು ಟೆಸ್ಟ್ ಸರಣಿಯಲ್ಲಿ ಭಾರತ 2-0 ಅಂತರದಿಂದ ಗೆದ್ದುಕೊಂಡಿದ್ದು, ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಗಸ್ಟ್ 18 ರಂದು ಟ್ರಿನಿಡಾಡ್ ಅಂಡ್ ಟೊಬ್ಯಾಗೋದಲ್ಲಿ ನಡೆಯಲಿದೆ. [ವಿಂಡೀಸ್ ವಿರುದ್ಧದ 'ಅಮೆರಿಕ ಟಿ20' ಪಂದ್ಯಕ್ಕೆ ಧೋನಿ ನಾಯಕ]

Tea India

ದರೇನ್ ಸಾಮಿ ಮೈದಾನದಲ್ಲಿ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದಂದು ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 346 ರನ್ ಟಾರ್ಗೆಟ್ ನೀಡಲಾಗಿತ್ತು.

ವೇಗಿ ಮೊಹಮದ್ ಶಮಿ (15ಕ್ಕೆ 3) ಮಾರಕ ಬೌಲಿಂಗ್ ನೆರವಿನಿಂದ ಚಹಾ ವಿರಾಮದ ವೇಳೆಗೆ ವಿಂಡೀಸ್ ತಂಡವನ್ನು 108 ರನ್ ಗಳಿಗೆ ನಿಯಂತ್ರಿಸಿ ಗೆಲುವು ಸಾಧಿಸಿತು.

ಸ್ಕೋರ್ ಸಾರಾಂಶ : ಇದಕ್ಕೂ ಮುನ್ನ ಭಾರತ ತಂಡ ತನ್ನ ಮೊದಲ ಇನಿಂಗ್ಸ್​ನಲ್ಲಿ 353ರನ್ ​ಗಳಿಸಿತ್ತು. ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ 225 ರನ್​ಗೆ ಆಲೌಟ್ ಆಗಿತ್ತು.


128 ರನ್ ಮುನ್ನಡೆ ಪಡೆದ ಭಾರತ, 2ನೇ ಇನಿಂಗ್ಸ್​ನಲ್ಲಿ 7 ವಿಕೆಟ್​ಗೆ 217 ರನ್​ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. 346 ರನ್ ಗುರಿ ಬೆನ್ನು ಹತ್ತಿದ ವಿಂಡೀಸ್ 108 ರನ್ ಗೆ ಆಲೌಟ್ ಆಗಿ ಪಂದ್ಯ ಹಾಗೂ ಸರಣಿ ಸೋಲು ಕಂಡಿತು. ಈ ಸರಣಿ ಜಯಕ್ಕೂ ಮುನ್ನ 2011, 2006 ಹಾಗೂ 1971ರಲ್ಲಿ ವಿಂಡೀಸ್ ವಿರುದ್ಧ ಭಾರತ ಸರಣಿ ಜಯ ಕಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India thrashed West Indies by 237 runs on the 5th and final day to win the 3rd Test here Saturday (August 13). This massive victory sealed the 4-match series in favour of India by 2-0 margin. The 4th and final Test starts on August 18 in Trinidad and Tobago.
Please Wait while comments are loading...