ಭಾರತ ವಿರುದ್ಧ 'ಪ್ರವಾಸಿ' ಇಂಗ್ಲೆಂಡಿಗೆ ಮೊಟ್ಟ ಮೊದಲ ಜಯ

Posted By:
Subscribe to Oneindia Kannada

ಕೋಲ್ಕತಾ, ಜನವರಿ 22: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಯಾನ್ ಮಾರ್ಗನ್ ಪಡೆ, ಟೀಂ ಇಂಡಿಯಾಕ್ಕೆ 322 ರನ್ ಟಾರ್ಗೆಟ್ ನೀಡಿತ್ತು. ರನ್ ಚೇಸ್ ಮಾಡಿದ್ದ 316/9 ರನ್ ಗಳಿಸಿ ಟೀಂ ಇಂಡಿಯಾ ಸೋಲೊಪ್ಪಿಕೊಂಡಿತ್ತು. ಸರಣಿ 2-1ರಲ್ಲಿ ಟೀಂ ಇಂಡಿಯಾ ಪಾಲಾಯಿತು.

ಟೀಂ ಇಂಡಿಯಾ ಚೇಸ್ : ರಹಾನೆ 1, ಕೆಎಲ್ ರಾಹುಲ್ 11 ರನ್ ಗಳಿಸಿ ಔಟಾದ ಬಳಿಕ ನಾಯಕ ಕೊಹ್ಲಿ 55, ಯುವರಾಜ್ ಸಿಂಗ್ 45ರನ್ ಗಳಿಸಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

ಧೋನಿ 25 ರನ್ ಗಳಿಸಿ ಔಟಾದರೆ, ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಆಟ ಪ್ರದರ್ಶಿಸಿ 43 ಎಸೆತಗಳಲ್ಲಿ 56ರನ್ ಗಳಿಸಿ ಚೇಸಿಂಗ್ ನಲ್ಲಿ ನೆರವಾದರು. ಕೇದಾರ್ ಜಾಧವ್ 12 ಬೌಂಡರಿ, 1 ಸಿಕ್ಸರ್ ಇದ್ದ 90 ರನ್ (74ಎಸೆತಗಳಲ್ಲಿ) ಬಾರಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ, ಕೊನೆ ಓವರ್ ನಲ್ಲಿ 16 ರನ್ ಗಳಿಸಲು ವಿಫಲವಾದ ಭಾರತ ಸೋಲು ಕಂಡಿತು.

Chris Woakes

ಇಂಗ್ಲೆಂಡ್ ಪರ ಜಾಸನ್ ರಾಯ್ ಹಾಗೂ ಬೆನ್ ಸ್ಟೋಕ್ಸ್ ಅರ್ಧಶತಕ ಗಳಿಸಿದರೆ, ಭಾರತದ ಪರ್ ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು.

ಇಂಗ್ಲೆಂಡ್ ಇನ್ನಿಂಗ್ಸ್ : ಜಾಸನ್ ರಾಯ್ 65 (56 ಎಸೆತಗಳು, 10‍‍‍‍‍‍‍‍X‍4, 1X‍6), ಜಾನಿ ಬೈರ್ಸ್ಟೋ 56 ರನ್, ಇಯಾನ್ ಮಾರ್ಗನ್ 43, ಬೆನ್ ಸ್ಟೋಕ್ಸ್ ಅಜೇಯ 57 (39 ಎಸೆತಗಳು, 4‍‍‍‍‍‍‍‍X‍4, 2X‍6), ಕ್ರಿಸ್ ವೋಕ್ಸ್ 20 ಎಸೆತಗಳಲ್ಲಿ 35 ರನ್, ಹಾರ್ದಿಕ್ ಪಾಂಡ್ಯ 49/3, ಜಡೇಜ 62/2. ಆರ್ ಅಶ್ವಿನ್ 9 ಓವರ್ ಗಳಲ್ಲಿ 60ರನ್

ಭಾನುವಾರ ಮಧ್ಯಾಹ್ನ ಆರಂಭಗೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಟಾಸ್ ಗೆದ್ದು, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದುಕೊಂಡಿದೆ. ಈ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್ ಸ್ವೀಪ್ ತಪ್ಪಿಸಿಕೊಳ್ಳಲು ಇಯಾನ್ ಮಾರ್ಗನ್ ನಾಯಾತ್ವದ ಇಂಗ್ಲೆಂಡ್ ಯತ್ನಿಸುತ್ತಿದೆ.

3rd ODI: India win toss, Virat Kohli elects to bowl first against England

ಟಾಸ್ ವರದಿ:

ತಂಡ
ಇಂಗ್ಲೆಂಡ್: ಜಾಸನ್ ರಾಯ್, ಅಲೆಕ್ಸ್ ಹೇಲ್ಸ್ ಜೋ ರೂಟ್, ಬೆನ್ ಸ್ಟೋಕ್ಸ್, ಜಾಸನ್ ಬಟ್ಲರ್, ಮೊಯಿನ್ ಅಲಿ, ವೋಕ್ಸ್, ಅಬ್ದುಲ್ ರಶೀಡ್, ವಿಲ್ಲಿ, ಬಾಲ್.

ಭಾರತ: ಶಿಖರ್ ಧವನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್ ಅಶ್ವಿನ್, ಉಮೇಶ್ ಯಾದವ್, ಜಸ್ಪೀತ್ ಬೂಮ್ರಾ. (ಒನ್ ಇಂಡಿಯಾ ಸುದ್ದಿ)

ಇಂಗ್ಲೆಂಡ್ ತಂಡ:

ಭಾರತ:

ಅಭ್ಯಾಸ

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
3rd ODI: India win toss, Virat Kohli elects to bowl first against England. India lead 3match ODI series by 2-0.
Please Wait while comments are loading...