ರನ್ ಚೇಸ್ : ಸಚಿನ್ ದಾಖಲೆ ಸಮಕ್ಕೆ ನಿಂತ ಕೊಹ್ಲಿ

Posted By:
Subscribe to Oneindia Kannada

ಮೊಹಾಲಿ, ಅಕ್ಟೋಬರ್ 24: ಟೀಂ ಇಂಡಿಯಾದ 'ರನ್ ಮಷಿನ್' ವಿರಾಟ್ ಕೊಹ್ಲಿ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯ ಸಮಕ್ಕೆ ನಿಂತಿದ್ದಾರೆ.

3ನೇ ಏಕದಿನ ಪಂದ್ಯದ ಸ್ಕೋರ್ ಕಾರ್ಡ್ | ಪಂದ್ಯದ ವರದಿ | ಸರಣಿ ಚಿತ್ರ ಗ್ಯಾಲರಿ

ರನ್ ಚೇಸಿಂಗ್ ನಲ್ಲಿ ಕೊಹ್ಲಿ ಮೀರುವವರೇ ಇಲ್ಲ ಎಂಬ ಮಾತಿದೆ. ಈ ಮಾತಿಗೆ ತಕ್ಕಂತೆ ಕೊಹ್ಲಿ ಅವರು ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 154ರನ್ ಚೆಚ್ಚಿದರು. ಕೊಹ್ಲಿ ಆರ್ಭಟದಿಂದ ಕಿವೀಸ್ ವಿರುದ್ಧ ಭಾರತ 7 ವಿಕೆಟ್ ಗಳ ಜಯ ದಾಖಲಿಸಿತು.

ಕೊಹ್ಲಿ ಅವರು ತಮ್ಮ ವೃತ್ತಿ ಬದುಕಿನ 26ನೇ ಶತಕ ಬಾರಿಸುವ ಮೂಲಕ ತೆಂಡೂಲ್ಕರ್ ಅವರ ದಾಖಲೆಯ ಸಮಕ್ಕೆ ನಿಂತಿದ್ದಾರೆ.

3rd ODI: Virat Kohli equals Sachin Tendulkar's record

ರನ್ ಚೇಸಿಂಗ್ ನಲ್ಲಿ ಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಆಟಗಾರರ ಪೈಕಿ ಸಚಿನ್ ಅವರು ಮುಂದಿದ್ದರು. ಸಚಿನ್ ಅವರು 14 ಬಾರಿ ಈ ಸಾಧನೆ ಮಾಡಿದ್ದರು. ಈಗ ಕೊಹ್ಲಿ ಕೂಡಾ 14 ಬಾರಿ ಶತಕ ಗಳಿಸಿ ತಂಡಕ್ಕೆ ಜಯ ತಂದಿದ್ದಾರೆ.

ಆದರೆ, ಪಂದ್ಯ, ಇನ್ನಿಂಗ್ಸ್ ಲೆಕ್ಕ ಹಾಕಿದರೆ ಸಚಿನ್ ಗಿಂತ ಕೊಹ್ಲಿ ಸಾಕಷ್ಟು ಮುಂದಿದ್ದಾರೆ. ಸಚಿನ್ ಅವರು 14 ಶತಕ (ರನ್ ಚೇಸ್ ನಲ್ಲಿ) ಗಳಿಸಲಿ 124 ಇನ್ನಿಂಗ್ಸ್ ತೆಗೆದುಕೊಂಡರೆ, ಕೊಹ್ಲಿ ಅವರು 59 ಇನ್ನಿಂಗ್ಸ್ ನಲ್ಲೇ ಸಾಧಿಸಿದ್ದಾರೆ.

9 ಶತಕ-ಸಯೀದ್ ಅನ್ವರ್ (59), ತಿಲಕರತ್ನೆ ದಿಲ್ಶನ್ (60), ಜಯಸೂರ್ಯ(103) ರನ್ ಚೇಸ್ ನಲ್ಲಿ ಶತಕ ಬಾರಿಸಿದ ಆಟಗಾರರಾಗಿದ್ದಾರೆ.

ವಿಶ್ವಮಟ್ಟದಲ್ಲಿ ಅತಿ ಹೆಚ್ಚು ಶತಕ ಗಳಿಕೆ ಪಟ್ಟಿಯಲ್ಲಿ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು 49 ಶತಕ ಗಳಿಸಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್(30), ಶ್ರೀಲಂಕಾದ ಸನತ್ ಜಯಸೂರ್ಯ(28) ನಂತರದ ಸ್ಥಾನದಲ್ಲಿದ್ದಾರೆ. ಭಾನುವಾರದ ಪಂದ್ಯದಲ್ಲಿ 26ನೇ ಶತಕ ಗಳಿಸುವ ಮೂಲಕ 25 ಶತಕ ಗಳಿಸಿದ್ದ ಕುಮಾರ್ ಸಂಗಕ್ಕಾರ ಅವರನ್ನು ಹಿಂದಿಕ್ಕಿ ಕೊಹ್ಲಿ ಅವರು ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's star batsman Virat Kohli has achieved another milestone, this time matching the batting legend Sachin Tendulkar.
Please Wait while comments are loading...