3ನೇ ಏಕದಿನ ಪಂದ್ಯ: ಕೊಹ್ಲಿ ಶತಕ ವ್ಯರ್ಥ, ಸರಣಿ ಆಸೀಸ್ ಪಾಲು

Posted By:
Subscribe to Oneindia Kannada

ಮೆಲ್ಬೋರ್ನ್, ಜ. 17: ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳನ್ನು ಸೋತಿರುವ ಪ್ರವಾಸಿ ಭಾರತ ತಂಡ ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ) ದಲ್ಲಿ ಭಾನುವಾರ ಅದೃಷ್ಟ ಪರೀಕ್ಷೆಗಿಳಿದಿತ್ತು. ಆದರೆ, ಮೂರನೇ ಏಕದಿನ ಪಂದ್ಯವನ್ನು 3 ವಿಕೆಟ್ ಗಳಿಂದ ಸೋತ ಭಾರತ ಸರಣಿಯನ್ನು ಕೂಡಾ 0-3 ಅಂತರದಲ್ಲಿ ಕಳೆದುಕೊಂಡಿದೆ.

ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಧೋನಿ ಪಡೆಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದ್ದು ಕೊಹ್ಲಿ ಶತಕದ ನೆರವಿನಿಂದ 50 ಓವರ್ ಗಳಲ್ಲಿ 295/6 ಸ್ಕೋರ್ ಮಾಡಿದೆ.ಮ್ಯಾಕ್ಸ್ ವೆಲ್ ಅವರ ಬಿರುಸಿನ 96ರನ್ ನೆರವಿನಿಂದ 48.5 ಓವರ್ ಗಳಲ್ಲಿ 296/7 ಸ್ಕೋರ್ ಮಾಡಿ 3 ವಿಕೆಟ್ ಗಳಿಂದ ಪಂದ್ಯ ಹಾಗೂ ಸರಣಿಯನ್ನು ತನ್ನ ವಶ ಮಾಡಿಕೊಂಡಿದೆ.[24ನೇ ಶತಕ: ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿ]

Glenn Maxwell

ಶತಕ ವೀರ ರೋಹಿತ್ ಶರ್ಮ ಆರಂಭದಲ್ಲೇ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಆದರೆ, ಅರ್ಧ ಶತಕ(68) ಗಳಿಸಿದ ಬಳಿಕ ಶಿಖರ್ ಧವನ್ ಅವರು ಔಟಾದರು. ಅಜಿಂಕ್ಯ ರಹಾನೆ ಕೂಡಾ ಅರ್ಧ ಶತಕ(51) ಬಾರಿಸಿದರು. ವಿರಾಟ್ ಕೊಹ್ಲಿ ತಮ್ಮ 24ನೇ ಶತಕ 117 ರನ್ (117ಎಸೆತ, 7x4,2x6) ಮೂಲಕ ಭಾರತಕ್ಕೆ ನೆರವಾದರು. ನಾಯಕ ಧೋನಿ 9 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಿಡಿಸಿ ಬಿರುಸಿನ 23ರನ್ ಗಳಿಸಿದರು.[ಡಿವಿಲಿಯರ್ಸ್ ದಾಖಲೆ ಧ್ವಂಸಗೊಳಿಸಿದ ಕೊಹ್ಲಿ]

ಪಂದ್ಯದ ಸ್ಕೋರ್ ಕಾರ್ಡ್ | ವೇಳಾಪಟ್ಟಿ | ಫೋಟೊ ಗ್ಯಾಲರಿ

Australia win toss, opt to field

ಮೂರನೇ ಏಕದಿನ ಪಂದ್ಯಕ್ಕೆ ಭಾರತ ತನ್ನ ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದೆ. ಮನೀಶ್ ಪಾಂಡೆ ಹಾಗೂ ಆರ್ ಅಶ್ವಿನ್ ಅವರ ಬದಲಿಗೆ ಆಲ್ ರೌಂಡರ್ ರಿಶಿ ಧವನ್ ಹಾಗೂ ಗುರ್ ಕೀರತ್ ಸಿಂಗ್ ಗೆ ಅವಕಾಶ ನೀಡಲಾಗಿದೆ. ಆಸ್ಟ್ರೇಲಿಯಾ ತಂಡದಲ್ಲಿ ಜೋಯಲ್ ಪ್ಯಾರೀಸ್ ಬದಲಿಗೆ ಮಿಚೆಲ್ ಮಾರ್ಷ್ ತಂಡ ಸೇರಿದ್ದಾರೆ.

ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ (ನಾಯಕ), ಅರೋನ್ ಫಿಂಚ್, ಜಾರ್ಜ್ ಬೈಲಿ, ಜಾನ್ ಹೇಸ್ಟಿಂಗ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ಜೇಮ್ಸ್ ಫಾಲ್ಕ್ನರ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಸ್ಕಾಟ್ ಬೋಲ್ಯಾಂಡ್, ಶಾನ್ ಮಾರ್ಷ್, ಕೇನ್ ರಿಚರ್ಡ್ ಸನ್, ಮಿಚೆಲ್ ಮಾರ್ಷ್.[ಆಸೀಸ್ ವಾಕ್ಬಾಣಕ್ಕೆ ಬ್ಯಾಟ್ ಮೂಲಕ ಉತ್ತರಿಸಿದ ಕೊಹ್ಲಿ]

ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಗುರುಕೀರತ್ ಸಿಂಗ್ ಮಾನ್, ರಿಷಿ ಧವನ್, ರವೀಂದ್ರ ಜಡೇಜ, ಇಶಾಂತ್ ಶರ್ಮ, ಉಮೇಶ್ ಯಾದವ್, ಬರೀಂದರ್ ಸರಣ್.

ನಾಲ್ಕನೇ ಪಂದ್ಯ ಜನವರಿ 20 (ಬುಧವಾರ), ಕ್ಯಾನ್ ಬೆರಾ (8.50 AM IST) ದಲ್ಲಿ ನಡೆಯಲಿದೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian star Virat Kohli struck a scintillating century to help the visitors post a challenging 295 for six against Australia in the 3rd ODI here today. Australia won by 3 wickets thanks to Glenn Maxwell's superb 96.
Please Wait while comments are loading...