ಕೊಹ್ಲಿ ಭರ್ಜರಿ ಶತಕ, ಧೋನಿ ಜತೆಯಾಟಕ್ಕೆ ಶರಣಾದ ಕಿವೀಸ್

Posted By:
Subscribe to Oneindia Kannada

ಮೊಹಾಲಿ, ಅಕ್ಟೋಬರ್ 23: ವಿರಾಟ್ ಕೊಹ್ಲಿ ಅವರ ಅಜೇಯ ಶತಕ ಹಾಗೂ ಧೋನಿ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಕೈವಶ ಮಾಡಿಕೊಂಡಿದೆ.

ನ್ಯೂಜಿಲೆಂಡ್ ತಂಡ ನೀಡಿದ್ದ 286ರನ್ ಟಾರ್ಗೆಟ್ ಅನ್ನು 48.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಮುಟ್ಟಿದ ಭಾರತ, ಐದು ಏಕದಿನ ಪ್ಂದ್ಯಗಳ ಸರಣಿಯಲ್ಲಿ 2-1 ರ ಮುನ್ನಡೆ ಸಾಧಿಸಿದೆ. [ಮೊಹಲಿ ಪಂದ್ಯದ ಸ್ಕೋರ್ ಕಾರ್ಡ್ ]

Virat Kohli


ಭಾರತದ ರನ್ ಚೇಸ್: ರೋಹಿತ್ ಶರ್ಮ 13, ಅಜಿಂಕ್ಯ ರಹಾನೆ 5 ರನ್ ಗಳಿಸಿ ಬೇಗನೇ ಔಟಾದರು. ಬಳಿಕ ಕೊಹ್ಲಿ ಹಾಗೂ ನಾಯಕ ಧೋನಿ ಜತೆಯಾಟ ಪಂದ್ಯವನ್ನು ಕೈ ಹಿಡಿಯಿತು. ವಿರಾಟ್ ಕೊಹ್ಲಿ 154 ರನ್ (134 ಎಸೆತಗಳು, 16X4, 1X6),
ಎಂಎಸ್ ಧೋನಿ 80 ರನ್ (91ಎಸೆತಗಳು, 6X4, 3X6) ಹಾಗೂ ಮನೀಶ್ ಪಾಂಡೆ ಅಜೇಯ 28 ರನ್ ಮೂಲಕ ಗೆಲುವಿನ ದಡ ಮುಟ್ಟಿದರು. ಈ ಪಂದ್ಯದಲ್ಲಿ ಧೋನಿ ಅವರು 9 ಸಾವಿರ ರನ್ ಪೂರೈಸಿದರೆ, ಕೊಹ್ಲಿ ಅವರು 26 ನೇ ಶತಕ ಬಾರಿಸಿ ದಾಖಲೆ ಬರೆದರು.

ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ನ್ಯೂಜಿಲೆಂಡ್ ತಂಡ ಲಾಥಮ್ ಹಾಗೂ ನೀಶಮ್ ಅರ್ಧಶತಕದ ನೆರವಿನಿಂದ 49.4 ಓವರ್ ಗಳಲ್ಲಿ 285ಸ್ಕೋರಿಗೆ ನ್ಯೂಜಿಲೆಂಡ್ ಆಲೌಟ್ ಆಗಿದೆ. ಕಿವೀಸ್ ವಿರುದ್ಧ ಮೊಹಲಿ ಏಕದಿನ ಪಂದ್ಯ ಗೆಲ್ಲಲು ಭಾರತಕ್ಕೆ 286ರನ್ ಟಾರ್ಗೆಟ್ ನೀಡಲಾಗಿದೆ.

ದೆಹಲಿ ಪಂದ್ಯದಲ್ಲಿ ಆಡಿದ ತಂಡವನ್ನೇ ಇಂದಿನ ಪಂದ್ಯಕ್ಕೂ ಧೋನಿ ಉಳಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಇನ್ನೂ ಒಂದು ಟಾಸ್ ಕೂಡಾ ಗೆದ್ದಿಲ್ಲ.

3rd ODI: Unchanged India elect to field against New Zealand

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಟಾಸ್ ಗೆದ್ದುಕೊಂಡಿದ್ದಾರೆ. ನ್ಯೂಜಿಲೆಂಡ್ ತಂಡಕ್ಕೆ ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿದ್ದಾರೆ. ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿ ಸದ್ಯಕ್ಕೆ 1-1 ರ ಸಮಬಲ ಕಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
'King of chase' Virat Kohli struck an another unbeaten century as India defeated New Zealand by 7 wickets in the 3rd ODI here at IS Bindra stadium on Sunday (October 23).
Please Wait while comments are loading...