ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಧೂಳಿಪಟ ಮಾಡಿದ ರೆಕಾರ್ಡ್ಸ್

Posted By:
Subscribe to Oneindia Kannada

ನ್ಯಾಟಿಂಗ್ ಹ್ಯಾಮ್, ಆಗಸ್ಟ್ 31: ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವಿಶ್ವ ದಾಖಲೆ ಮೊತ್ತ ದಾಖಲಿಸಿದ್ದಲ್ಲದೆ ಪಂದ್ಯವನ್ನು 169 ರನ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಆಗಸ್ಟ್ 30ರಂದು ಇಂಗ್ಲೆಂಡ್ ತಂಡ ಸಾಧಿಸಿದ ದಾಖಲೆಗಳ ವಿವರ ನಿಮ್ಮ ಮುಂದಿದೆ.

ವಿಶ್ವದಾಖಲೆ ಬರೆದ ಸ್ಕೋರ್ ಕಾರ್ಡ್

ಇಂಗ್ಲೆಂಡ್ ತಂಡ ಅಲೆಕ್ಸ್ ಹೇಲ್ಸ್ ಅವರ 171 ರನ್ ನೆರವಿನಿಂದ ಇಂಗ್ಲೆಂಡ್ ತಂಡ ಮಂಗಳವಾರ 444/3 ಸ್ಕೋರ್ ಮಾಡಿ ಕ್ರಿಕೆಟ್ ಪಂಡಿತರನ್ನು ಬೆಚ್ಚಿ ಬೀಳುವಂತೆ ಮಾಡಿತು. ನಾಯಕ ಇಯಾನ್ ಮಾರ್ಗನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿತು. [ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಮೊತ್ತ ಚೆಚ್ಚಿದ ಇಂಗ್ಲೆಂಡ್]

ಇಂಗ್ಲೆಂಡ್ ತಂಡ 50 ಓವರ್ ಗಳಲ್ಲಿ 444/3 ಸ್ಕೋರ್ ಮಾಡಿದರೆ, ಪಾಕಿಸ್ತಾನ ತಂಡ 42.4 ಓವರ್ ಗಳಲ್ಲಿ 275ರನ್ ಗಳಿಗೆ ಆಲೌಟ್ ಆಯಿತು. ಈ ಗೆಲುವಿನ ಮೂಲಕ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡ 0-3 ಅಂತರದಲ್ಲಿ ಏಕದಿನ ಸರಣಿ ಬಾಚಿಕೊಂಡಿದೆ.[ಮತ್ತೆ ಬಾಲ ಬಿಚ್ಚಿದ ಮಾರ್ಗನ್, ಸರಿಯಾಗಿ ಕೊಟ್ಟ ಸೆಹ್ವಾಗ್]

ಇದಕ್ಕೂ ಮುನ್ನ 2006 ರಲ್ಲಿ ನೆದರ್ಲೆಂಡ್ಸ್ ವಿರುದ್ಧ ಶ್ರೀಲಂಕಾ ತಂಡ 443/9 ಗಳಿಸಿದ್ದು ಏಕದಿಕ ಕ್ರಿಕೆಟ್ ನಲ್ಲಿ ಗರಿಷ್ಠ ಮೊತ್ತ ಎನಿಸಿತ್ತು. ಒಟ್ಟಾರೆ 18ನೇ ಬಾರಿ 400 ಪ್ಲಸ್ ರನ್ ಗಳಿಕೆಯನ್ನು ಕಂಡು ಬಂದಿದೆ. ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಧೂಳಿಪಟ ಮಾಡಿದ ರೆಕಾರ್ಡ್ಸ್ ಮುಂದಿವೆ

ಇಂಗ್ಲೆಂಡ್ ಗಳಿಸಿದ ದಾಖಲೆಗಳು ಹೀಗಿವೆ

ಇಂಗ್ಲೆಂಡ್ ಗಳಿಸಿದ ದಾಖಲೆಗಳು ಹೀಗಿವೆ

* 444/3, 50 ಓವರ್ ಗಳಲ್ಲಿ ಗಳಿಸಿದ ಗರಿಷ್ಠ ಮೊತ್ತ.
* 444/3, ಲಿಸ್ಟ್ ಎ ಪಂದ್ಯಗಳಲ್ಲಿ (50 ಓವರ್ ಪಂದ್ಯ) ಮೂರನೇ ಗರಿಷ್ಠ ಮೊತ್ತ.
* 171-ಅಲೆಕ್ಸ್ ಹೇಲ್ ಈಗ ವೈಯಕ್ತಿಕವಾಗಿ ಗರಿಷ್ಠ ಮೊತ್ತ ದಾಖಲಿಸಿದ ಇಂಗ್ಲೆಂಡ್ ಆಟಗಾರ. (ಈ ಮುಂಚೆ 1993ರಲ್ಲಿ ಆಸ್ಟ್ರೇಲಿಯಾ ವಿರುದ್ಧ ರಾಬಿನ್ ಸ್ಮಿತ್ ಅಜೇಯ 167)

ಇಂಗ್ಲೆಂಡ್ ಗಳಿಸಿದ ದಾಖಲೆಗಳು

ಇಂಗ್ಲೆಂಡ್ ಗಳಿಸಿದ ದಾಖಲೆಗಳು

* 110ರನ್- 10 ಓವರ್ ಗಳಲ್ಲಿ- ಪಾಕಿಸ್ತಾನದ ವಹಾಬ್ ರಿಯಾಜ್ ಎರಡನೇ ಅತ್ಯಂತ ಕಳಪೆ ಬೌಲಿಂಗ್(ಈ ಮುಂಚೆ ದಕ್ಷಿಣ ಆಫ್ರಿಕಾದ ವಿರುದ್ಧ ಆಸ್ಟ್ರೇಲಿಯಾದ ಮಿಕ್ ಲೂಯಿಸ್ 113ರನ್ ಹೊಡೆಸಿಕೊಂಡಿದ್ದರು. ದಕ್ಷಿಣ ಆಫ್ರಿಕಾತಂಡ 434ರನ್ ಚೇಸ್ ಮಾಡಿ ವಿಶ್ವದಾಖಲೆ ಬರೆದಿತ್ತು

22 ಎಸೆತಗಳಲ್ಲಿ 50 ರನ್

22 ಎಸೆತಗಳಲ್ಲಿ 50 ರನ್

* 22 ಎಸೆತಗಳಲ್ಲಿ 50 ರನ್- ಜೋಸ್ ಬಟ್ಲರ್ ತ್ವರಿತಗತಿ ಅರ್ಧಶತಕ(ಈ ಮುಂಚೆ 24ಎಸೆತಗಳಲ್ಲಿ ಪಾಲ್ ಕಾಲಿಂಗ್ ವುಡ್ ಅವರು ನ್ಯೂಜಿಲೆಂಡ್ ವಿರುದ್ಧ 2008ರಲ್ಲಿ ಅರ್ಧಶತಕ ಬಾರಿಸಿದ್ದರು)
* 5 ಅರ್ಧಶತಕ- ಜೋ ರೂಟ್, ಸತತ 5 ಅರ್ಧಶತಕ ಬಾರಿಸಿ ದಿಗ್ಗಜರ ಸಾಲಿಗೆ ಸೇರ್ಪಡೆ. ಜೆಫ್ ಬಾಯ್ಕಾಟ್, ಗ್ರಹಾಂ ಗೂಚ್, ಅಲೆಕ್ಸ್ ಸ್ಟೀವರ್ಟ್, ಜೊನಾಥನ್ ಟ್ರಾಟ್ ಹಾಗೂ ಹೇಲ್ಸ್ ಸತತ 5 ಅರ್ಧಶತಕ ಬಾರಿಸಿದ್ದಾರೆ.

ಏಕದಿನ ಕ್ರಿಕೆಟ್ ಪಂದ್ಯದಲ್ಲಿ 16 ಸಿಕ್ಸರ್

ಏಕದಿನ ಕ್ರಿಕೆಟ್ ಪಂದ್ಯದಲ್ಲಿ 16 ಸಿಕ್ಸರ್

* 16 ಸಿಕ್ಸರ್ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗಳಿಸಿದ ಗರಿಷ್ಠ ಸಿಕ್ಸರ್ ಸಂಖ್ಯೆ.
* 248- ಹೇಲ್ಸ್ ಹಾಗೂ ರೂಟ್ ನಡುವಿನ ಜೊತೆಯಾಟ ಇಂಗ್ಲೆಂಡ್ ತಂಡದ ಗರಿಷ್ಠ ಮೊತ್ತದ ಜೊತೆಯಾಟವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
England set a slew of records against Pakistan during their series-clinching 169-run victory in the 3rd One Day International here yesterday (August 30).
Please Wait while comments are loading...