ಮತ್ತೊಂದು ದಾಖಲೆಯತ್ತ ಮಹೇಂದ್ರ ಸಿಂಗ್ ಧೋನಿ!

Written By: Ramesh
Subscribe to Oneindia Kannada

ಮೊಹಲಿ, ಅಕ್ಟೋಬರ್. 22 : ಭಾರತ ಏಕದಿನ ಕ್ರಿಕೆಟ್ ತಂಡದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನ್ಯೂಜಿಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಮತ್ತೊಂದು ಮೈಲುಗಲ್ಲನ್ನು ಸಾಧಿಸಲಿದ್ದಾರೆ.

ಅಕ್ಟೋಬರ್ 23 ರಂದು ಮೊಹಲಿಯ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಧೋನಿ 22 ರನ್ ಗಳಿಸಿದರೆ 9000 ರನ್ ಗಡಿ ತಲುಪಿದ ಭಾರತೀಯ 5ನೇ ಆಟಗಾರ ಹಾಗೂ 17ನೇ ಅಂತರಾಷ್ಟ್ರೀಯ ಕ್ರಿಕೆಟರ್ ಎನ್ನುವ ಕೀರ್ತಿಗೆ ಪಾತ್ರರಾಗಲಿದ್ದಾರೆ. [ಏಕದಿನ ಕ್ರಿಕೆಟ್ ನಲ್ಲಿ ಧೋನಿಯೇ 'ಕ್ಯಾಪ್ಟನ್ ಕಿಂಗ್']

Dhoni

2004 ರಲ್ಲಿ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ 35 ವರ್ಷದ ಧೋನಿ 280 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿ 8,978 ರನ್ ಕಲೆ ಹಾಕಿದ್ದಾರೆ.

ನ್ಯೂಜಿಲೆಂಡ್ ಎದುರು ಇನ್ನು ಕೇವಲ 22 ರನ್ ಗಳಿಸಿದರೆ 9000 ರನ್ ಬಾರಿಸಿದ 17ನೇ ಆಟಗಾರ ಹಾಗೂ ಭಾರತೀಯ ಆಟಗಾರರಲ್ಲಿ ಧೋನಿ 5ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್, ಕನ್ನಡಿಗ ರಾಹುಲ್ ದ್ರಾವಿಡ್, ಅಜರುದ್ದಿನ್ 9000 ರನ್ ಪೂರೈಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮಹೀ ಸೇರಿಕೊಳ್ಳಲಿದ್ದಾರೆ. ಈವರೆಗೆ ಧೋನಿ 280 ಏಕದಿನ ಪಂದ್ಯಗಳಲ್ಲಿ 6 ಶತಕ ಹಾಗೂ 60 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ 90 ಪಂದ್ಯಗಳನ್ನಾಡಿ ವಿದಾಯ ಹೇಳಿರುವ ಧೋನಿ 4876 ರನ್ ಕಲೆಹಾಕಿದ್ದಾರೆ. ಇದರಲ್ಲಿ 6 ಶತಕ 33 ಅರ್ಧಶತಕಗಳು ಒಳಗೊಂಡಿವೆ.

ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬಾರತದ ಆಟಗಾರರು
* ಸಚಿನ್ ತೆಂಡೂಲ್ಕರ್- 18426 (463 ಪಂದ್ಯಗಳು)
* ರಾಹುಲ್ ದ್ರಾವಿಡ್- 10889 (344 ಪಂದ್ಯಗಳು)
* ಮಹಮದ್ ಅಜರುದ್ದಿನ್- 9378 (334)
* ಮಹೇಂದ್ರ ಸಿಂಗ್ ಧೋನಿ- 8978 (280)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's limited overs captain Mahendra Singh Dhoni is set to achieve another major milestone in One Day Internationals tomorrow (October 23) against New Zealand.
Please Wait while comments are loading...